ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕು ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದಲ್ಲಿ ಹಾಗೂ ಹಾಸನ ಜಿಲ್ಲೆಯ ಆಲೂರು ತಾಲೂಕಿನ ರೈತರಿಗೆ 2020-21ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ತಾಡಪಲ್ (ತಾಡಪತ್ರಿ)ಗಳನ್ನು ವಿತರಿಸಲು (Application invited for Tarpaulin) ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕು ಹೂವಿನಹಿಪ್ಪರಗಿ ರೈತರು ಸೌಲಭ್ಯ ಪಡೆಯಲು ಮಾರ್ಚ್ 15 ರಿಂದ 20 ರೊಳಗಾಗಿ (ರಜೆ ದಿನ ಹೊರತುಪಡಿಸಿ) ಅರ್ಜಿ ನಮೂನೆ, ಆಧಾರ್ ಕಾರ್ಡ್ ನಕಲು ಪ್ರತಿ, ಜಮೀನಿನ ಉತಾರ, ಒಂದು ಭಾವಚಿತ್ರ ನೀಡಿ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಅವಧಿ ಮುಗಿದ ಬಳಿಕ ಅರ್ಜಿ ಸ್ವೀಕರಿಸುವುದಿಲ್ಲ.
ಕಡ್ಡಾಯವಾಗಿ ಕೆ ಕಿಸಾನ್ (ಎಫ್.ಐ.ಡಿ)ನಲ್ಲಿ ನೋಂದಣಿಯಾಗಿರಬೇಕು.. ಮಾರ್ಚ್ 23 ರಂದು ಬೆಳಿಗ್ಗೆ ಲಾಟರಿ ಮೂಲಕ ರೈತರನ್ನು ಆಯ್ಕೆ ಮಾಡಿ ತಾಡಪಲ್ ವಿತರಿಸಲಾಗುವುದು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಂತೋಷ ರಾಠೋಡ ತಿಳಿಸಿದ್ದಾರೆ.
ತಾಡಪತ್ರಿ ಪಡೆಯಲು ಹಾಸನ ಜಿಲ್ಲೆಯ ಆಲೂರು ತಾಲೂಕಿನ ರೈತರಿಂದ ಅರ್ಜಿ ಆಹ್ವಾನ
ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಟಾರ್ಪಲಿನ್ ರೈತರಿಗೆ ನೀಡಲು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೃಷಿ ಇಲಾಖೆ ಆರ್.ಕೆ.ವಿ.ವೈ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ತಾಡಪತ್ರಿ ಪಡೆಯಲು ಮಾರ್ಚ್ 15ರವರೆಗೆ ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿವಾರು ನಿಗದಿಪಡಿಸಿದ ಗುರಿಗಿಂತ ಹೆಚ್ಚು ಅರ್ಜಿಗಳು ಬಂದರೆ ಲಾಟರಿ ಮುಖಾಂತರ ಫಲಾನುಭವಿ ಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಜಾತಿ ಪ್ರಮಾಣಪತ್ರ (ಪರಿಶಿಷ್ಟ ಜಾತಿ, ಪಂಗಡ) ಲಗತ್ತಿಸಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾರ್ಪಲಿನ್ ಅವಶ್ಯಕತೆ (Tarpaulin benefit)
ರೈತರಿಗೆ ಮಳೆ, ಗಾಳಿ, ಧೂಳಿನಿಂದ ರಾಶಿ ಮಾಡಿದ ಬೆಳೆ ಹಾಗೂ ದವಸಧಾನ್ಯಗಳನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ತುಂಬಾ ಅವಶ್ಯಕತೆಯಿರುತ್ತದೆ. ಅಕಾಲಿಕವಾಗಿ ಸುರಿದ ಮಳೆ, ಸುಳಿಗಾಳಿಯಿಂದಾಗಿ ದವಸ ಧಾನ್ಯ ಹಾಳಾಗುತ್ತಿರುತ್ತದೆ. ರಾಶಿ ಮಾಡಲು ಸಹಿತ ತಾಡಪತ್ರಿ ಉಪಯೋಗಿಸಬಹುದು. ಹೆಸರು, ಉದ್ದು ಬೆಳೆಯನ್ನು ರಸ್ತೆಯ ಮೇಲೆಯೇ ರಾಶಿ ಮಾಡುತ್ತಿರುತ್ತಾರೆ. ಇದರಿಂದಾಗಿ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ.
ಬೆಳೆಗಳನ್ನು ಬಿಸಿಲಿಗೆ ಒಣಗಿಸಲು ಸಹ ತಾಡಪತ್ರಿಯ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ತಾಡಪತ್ರಿ ಪಡೆದುಕೊಂಡರೆ ನಿಮ್ಮ ದವಸಧಾನ್ಯಗಳ ರಕ್ಷಣೆಗೂ ಸಹಾಯವಾಗುತ್ತದೆ. ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆಯಬಹುದು.