ವಿದ್ಯಾರ್ಥಿಗಳೇ ಬಸ್ ಪಾಸ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ ಪಡೆಯಿರಿ

Written by Ramlinganna

Published on:

ಪ್ರಸಕ್ತ ಸಾಲಿಗೆ ನಿಗಮದಿಂದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗ 1 ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಗಣಕೀಕೃತ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಸೇವಾ ಸಿಂಧು  ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು..

ಸೇವಾಸಿಂಧು ಪೋರ್ಟಲ್ ದಲ್ಲಿ ಆನ್ಲೈನ್ ಮೂಲಕ ಅಥವಾ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಸೇವಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್ ಗೆ ನಿಗದಿತ ಪಾಸಿನ ಶುಲ್ಕವನ್ನು ನಗದು ರೂಪದಲ್ಲಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಿ ಪಾಸ್ ಪಡೆಯಬಹುದು.

ಅರ್ಜಿ ನಮೂನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಾದ ಕೌಂಟರ್ ನ ಹೆಸರು, ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್ ಗೆ ತೆರಳಿ, ನಿಗದಿತ ಪಾಸಿದ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಯುಪಿಐ ಮೂಲಕ ಪಾವತಿಸಿ ಪಾಸ್ ನ್ನು ಪಡೆಯಬಹುದು.

ಇದನ್ನೂ ಓದಿ : 23 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ – ಯಾವ ರೈತರಿಗೆ ಜಮೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವದ್ದು, ನೆರೆ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯುವ ಅಗತ್ಯವಿದೆ. ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸ್ ಗಳನ್ನು ಪಡೆಯಬಹುದು.

ಆನ್ಲೈನ್ ನಲ್ಲಿ ಬಸ್ ಪಾಸ್ ಗಾಗಿ ಅರ್ಜಿಸಲ್ಲಿಸಬೇಕೇ?

ವಿದ್ಯಾರ್ಥಿಗಳು ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಸಲು ಈ

https://sevasindhu.karnataka.gov.in/Sevasindhu/Kannada?ReturnUrl=%2F

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸೇವಾ ಸಿಂಧು ಪೇಜ್ ಓಪನ್ ಆಗುತ್ತದೆ. ಅಲ್ಲಿ ವಿದ್ಯಾರ್ಥಿ ಬಸ್ ಪಾಸ್  ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬಸ್ ಪಾಸ್ ವಿತರಣಾ ಕೌಂಟರ್ ಗಳ ವಿವರ ಇಂತಿದೆ

ಕಲಬುರಗಿ ರಾಷ್ಟ್ರಪತಿ ವೃತ್ತ, ಖರ್ಗೆ ಪೆಟ್ರೋಲ್ ಪಂಪ್ ಹತ್ತಿರದ ಕೆ.ಹೆಚ್.ಬಿ ಸಂಕೀರ್ಣದಲ್ಲಿನ ಕರ್ನಾಟಕ- 1 ಕೇಂದ್ರ, ಸೂಪರ್ ಮಾರ್ಕೇಟ್ ಬಸ್ ನಿಲ್ದಾಣ, ಮಿನಿ ವಿಧಾನ ಸೌಧದಲ್ಲಿನ ಕರ್ನಾಟಕ- 1 ಕೇಂದ್ರ, ಮಹಾನಗರ ಪಾಲಿಕೆ (ಎಸ್.ಟಿ.ಬಿ.ಟಿ) ಕರ್ನಾಟಕ -1 ಕೇಂದ್ರ, ಕಮಲಾಪೂರ ಬಸ್ ನಿಲ್ದಾಣ, ಚಿಂಚೋಳಿ ಬಸ್ ನಿಲ್ದಾಣ, ಚಿತ್ತಾಪುರ ಬಸ್ ನಿಲ್ದಾಣ,  ನೆಹರು ಗಂಜ್ ನಿಲ್ದಾಣ, ಆಳಂದ ಬಸ್ ನಿಲ್ದಾಣ, ಜೇವರ್ಗಿ ಬಸ್ ನಿಲ್ದಾಣ ಹಾಗೂ ಅಫಜಲ್ಪುರ ಬಸ್ ನಿಲ್ದಾಣ, ಶಹಾಬಾದ್ ಬಸ್ ನಿಲ್ದಾಣ, ಸೇಡಂ ಬಸ್ ನಿಲ್ದಾಣ ಹಾಗೂ ಕಾಳಗಿ ಬಸ್ ನಿಲ್ದಾಣದಲ್ಲಿ ಬಸ್ ಪಾಸ್ ಪಡೆಯಬುದು.ಈ ಹಿಂದೆ ಚಾಲ್ತಿಯಲ್ಲಿರುವ ಖರ್ಗೆ ಪೆಟ್ರೋಲ್ ಪಂಪ್, ರೈಲು ಬಸ್ ನಿಲ್ದಾಣ ಹಾಗೂ ಎಸ್.ಟಿ.ಬಿ.ಟಿ ಪಾಸ್ ವಿತರಣಾ ಮೂರು ಬಿಂದುಗಳನ್ನು ಕರ್ನಾಟಕ-1 ಗೆ ಸ್ಥಳಾಂತರಿಸಲಾಗಿದ್ದು, ವಿದ್ಯಾರ್ಥಿಗಳು ಇದನ್ನು ಗಮನಿಸಬೇಕು. ವಿದ್ಯಾರ್ಥಿಗಳು ಮೇಲ್ಕಂಡ ಕರ್ನಾಟಕ – 1 ಕೌಂಟರ್ ಗಳಲ್ಲಿ ಉಚಿತ / ರಿಯಾಯಿತಿ ಬಸ್ ಪಾಸ್ ಗಳನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8105711110, 9590303333, 8792645550, 9915835646, 9449937737, 910941345 ಹಾಗೂ 9110651205 ಗೆ ಸಂಪರ್ಕಿಸಬಹುದು.

Leave a comment