ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿ (ಯಾದಗಿರಿ) ಸಂಯುಕ್ತಾಶ್ರಯದಲ್ಲಿ ಜುಲೈ 25 ರಿಂದ 28ರವರೆಗೆ ಆನ್ಲೈನ್ ನಲ್ಲಿ ವೈಜ್ಞಾನಿಕ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸಕ್ತ ರೈತರು ಮೂರು ದಿನಗಳ ಕಾಲ ಆನ್ಲೈನ್ ನಲ್ಲಿ ಭಾಗವಹಿಸಿ ವೈಜ್ಞಾನಿಕ ಜೇನು ಸಾಕಾಣಿಕೆ ತರಬೇತಿಯ ಲಾಭ ಪಡೆದುಕೊಳ್ಳಬಹುದು. ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರ ಕವಿಡಿಮಟ್ಟಿಯಲ್ಲಿ ಆಯೋಜಿಸಲಾಗಿದೆ. ತರಬೇತಿಗೆ 25 ರಿಂದ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು. ತರಬೇತಿಯಲ್ಲಿ ಭಾಗವಹಿಸುವ ಆಸಕ್ತ ರೈತರು ಈ ಕೆಳಕಂಡ ಮೊಬೈಲ್ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಆಸಕ್ತ ರೈತರು 9980459624, 99591555978, 9480696349 ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ರೈತರಿಗೆ ಜೇನು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳ ಮಾಹಿತಿ ಹಾಗೂ ಪ್ರಾಯೋಗಿಕ ಅನುಭವಗಳನ್ನು ನೀಡಿ ಅವರ ಆದಾಯ ಹೆಚ್ಚಿಸಲು ತರಬೇತಿಯ ಉದ್ದೇಶವಾಗಿದ್ದು,  ತರಬೇತಿಗೆ 25 ರಿಂದ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

ಜೇನು ಸಾಕಾಣಿಯಕೆ ಮುಖ್ಯ ಉದ್ದೇಶ ಪರಾಗಸ್ಪರ್ಶ ಹೆಚ್ಚಿಸುವುದು. ಜೇನು ಮತ್ತು ಮೇಣ ಉತ್ಪಾದಿಸುವುದಾಗಿದೆ. ಜೇನು ನೊಣಗಳು ಸ್ನೇಹ ಜೀವಿಯಾಗಿದ್ದು, ಸಂಘಜೀವಿಯಾಗಿದೆ. ಗಿಡಬಳ್ಳಿಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ ಜೇನು ಉತ್ಪಾದಿಸುತ್ತದೆ.

ವಿವಿಧ ಬಗೆಯ ಜೇನ್ನೋಣಗಳು:

ನಮ್ಮ ದೇಶದಲ್ಲಿ ಐದು ಬಗೆಯ ಜೇನ್ನೊಣಗಳಿದ್ದು, ಅದರಲ್ಲಿ ನಾಲ್ಕು ದೇಶೀಯ ಜಾತಿಯವು ಮತ್ತು ಒಂದು ವಿದೇಶದ್ದಾಗಿದೆ. ಅವುಗಳೆಂದರೆ ಹೆಜ್ಜೇನು, ಮುಜಂಟಿ ಜೇನು, ಕೋಲು ಜೇನು ಹಾಗೂ ತುಡುವೆಜೇನು ಎಂಬ ದೇಶೀಯ ಜಾತಿಯವು ಮತ್ತು ಯುರೋಪಿಯನ್ ಜೇನು ಎನುವ ವಿದೇಸಿ ಜೇನು. ಇವುಗಳಲ್ಲಿ ತುಡುವೆ ಮತ್ತು ಯುರೋಪಿಯನ್ ಜೇನಗಳನ್ನು ಕೃಷಿ ಭೂಮಿಗಳಲ್ಲಿ ಜೇನು ಪೆಟ್ಟಿಗೆಗಳ ಸಹಾಯದಿಂದ ಸಾಕಬಹುದಾಗಿದೆ.

ಎಲ್ಲರಿಗೂ ಗೊತ್ತಿದ್ದ ಹಾಗೆ ಭೂಮಿಯ ಮೇಲೆ ಇರುವ ವಿವಿಧ ಬಗೆಡ ಕೀಟಗಳಲ್ಲಿ ಜೇನು ನೊಣಗಳು ಮಾನವನಿಗೆ ಬಹು ಉಪಕಾರಿಯಾಗಿದೆ. ಆದರೆ ಭಾರತದಲ್ಲಿ ತೇನು ಉತ್ಪಾದನೆ ತುಂಬಾ ಕಡಿಮೆ. ಬೇರೆ ದೇಶಗಳಲ್ಲಿ ಜೇನು ಬಳಕೆ 200 ಗ್ರಾಂ ಪ್ರತಿ ಮನುಷ್ಯನಿಗಾದರೆ ಭಾರತದಲ್ಲಿ ಜೇನು ಬಳಕೆ ಕೇವಲ 8.4 ಗ್ರಾಂ ನಷ್ಟು ಜೇನು ಔಷಧ ತಯಾರಿಕೆಯಲ್ಲಿ, ಆಹಾರ ಪದಾರ್ಥಗಳಲ್ಲಿ, ಬೇಕರಿ ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಕೆಯಾಗುತ್ತದೆ.

One Reply to “ಜೇನು ಸಾಕಾಣಿಕೆ ಕುರಿತು ತರಬೇತಿ ನೀಡಲು ಅರ್ಜಿ ಆಹ್ವಾನ”

  1. ಸಾಂಪ್ರದಾಯಿಕ ಜೇನುಸಾಕಣೆಯ ಅನುಭವ ಇದೆ. ನನಗೆ ವೈಜ್ಞಾನಿಕ ಜೇನು ಕೃಷಿಯ ತರಬೇತಿ ಬೇಕಾಗಿದೆ. ದಯಮಾಡಿ ಅವಕಾಶ ನೀಡಿ ಸರ್. ನನ್ನ ಮೊಬೈಲ್ ಸಂಖ್ಯೆ 9482555077.

Leave a Reply

Your email address will not be published. Required fields are marked *