ಮನೆ ಕಟ್ಟಿಸಿಕೊಳ್ಳಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕೊಡಗು ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ವ್ಯಾಪ್ತಿಯಲ್ಲಿರುವರಿಗೆ ಮನೆ ಕಟ್ಟಿಸಿಕೊಡಲು ಅರ್ಜಿ ಆಹ್ವಾನಿಸಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪ್ರವರ್ಗ 1 ಕ್ಕೆ ಸೇರಿದ ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಹ ವಸತಿ ರಹಿತ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ. ಸಂಬಂಧಿಸಿದ ಅರ್ಜಿಯನ್ನು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿಯಲ್ಲಿ ಹಾಗೂ  ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಕಚೇರಿಯ ವೇಳೆಯಲ್ಿಲಿ ಪಡೆಯಬಹುದು.

ವಸತಿ ಸೌಲಭ್ಯದ ಫಲಾಪೇಕ್ಷಿಗಳು ಸರ್ಕಾರದ ಆದೇಶದಂತೆ ಅಲೆಮಾರಿ ಅರೆ ಅಲೆಮಾರಿ ಸಮುದಾಯದವರೆಂದು ಗುರುತಿಸಿ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಾಗಿ ಹೊಂದಿರಬೇಕು. ಅರ್ಜಿದಾರರು ಈ ಹಿಂದೆ ಯಾವುದೇ ಯೋಜನೆಗಳಲ್ಲಿ, ವಿವಿಧಿ ಇಲಾಖೆಗಳು, ನಿಗಮಗಳಿಂದ ವಸತಿ ಸೌಲಭ್ಯ ಪಡೆದಿರಬಾರದು. ವಸತಿ ರಹಿತರು ಸ್ವಂತ ನಿವೇಶನ ಹೊಂದಿರಬೇಕು. ಹಾಗೂ ನಿವೇಶನವು ಅರ್ಜಿದಾರರಾದ ಮಹಿಳೆ/ಪುರುಷರ ಹೆಸರಿನಲ್ಲಿ ನೋಂದಣಿಯಾಗಿರಬೇಕು.ಕುಟುಂಬದ ಒಟ್ಟು ವಾರ್ಷಿಕ ವರಮಾನ 2 ಲಕ್ಷ ರೂಪಾಯಿ ಮಿತಿಯೊಳಗಿರಬೇಕು.

ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾರಿಗೆ ಸಂಪರ್ಕಿಸಬೇಕು? (Where to apply and whom to contact)

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮ್ಯಾನ್ಸ್ ಕಂಪೌಂಡ್ ಹತ್ತಿರ ಮಡಿಕೇರಿ ದೂರವಾಣಿ ಸಂಖ್ಯೆ 08272 295628, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮ್ಯಾನ್ಸ್ ಕಂಪೌಂಡ್ ಹತ್ತಿರ ಮಡಿಕೇರಿ ಮೊಬೈಲ್ ನಂಬರ್ 8762476790, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ, ವಿರಾಜಪೇಟೆ ಮೊಬೈಲ್ ನಂಬರ್ 9844531040 ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಸೋಮವಾರ ಪೇಟೆ ತಾಲೂಕು ಮೊಬೈಲ್ ನಂಬರ್ 9481772143 ಗೆ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ ನಗರದ ವ್ಯಾಪ್ತಿಯಲ್ಲಿ ವಸತಿರಹಿತರಿಗೆ ನಿವೇಶನ (application invited for Gangavati city people)

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶನ (ಪ್ಲಾಟ್) ಹೊಂದಿರುವ ಬಡ ಕುಟುಂಬಗಳಿಗೆ ವಸತಿ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ ಈ ರೈತರಿಗೆ 434 ಕೋಟಿ ರೂಪಾಯಿ ಬೆಳೆ ವಿಮೆ ಮಂಜೂರು- ನಿಮಗೆ ಜಮೆಯಾಗುತ್ತೋ ಇಲ್ಲವೋ ಇಲ್ಲೆ ಚೆಕ್ ಮಾಡಿ

ಈ ಹಿಂದೆ 2022 ರ ಆಗಸ್ಟ್ 29 ರಂದು ಪ್ರಕಟಣೆ ನೀಡಲಾಗಿತ್ತು. ಆಗ ಅರ್ಜಿಗಳನ್ನು ಕಚೇರಿಯಿಂದ ಸ್ವೀಕರಿಸಲಾಗಿತ್ತು.ಆದರೆ ಅರ್ಜಿಗಳು ನಿಗದಿತ ಗುರಿಗಿಂತ ಕಡಿಮೆ ಬಂದಿತ್ತು. ಸದರಿ ನೀಡಿರು ಗುರಿಗೆ ಬಾಕಿ ಉಳಿದ ಹಿಂದುಳ ವರ್ಗ 213, ಪರಿಶಿಷ್ಟ ಜಾತಿ 48, ಪರಿಶಿಷ್ಟ ಪಂಗಡ75 ಗುರಿಗೆ ಅರ್ಜಿಗಳನ್ನು 2021-22 ನೇ ಸಾಲಿಗೆ ಕೊಳಚೆ ಪ್ರದೇಶಗಳಲ್ಲಿ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಅವಾಸಿ ಸರ್ವರಿಗೂ ಸೂರು ವಸತಿ ಯೋಜನೆಯಡಿ ಮಾರ್ಚ್ 15 ರೊಳಗೆ ಕಚೇರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಆಶ್ರಯ ವಿಭಾಗದಲ್ಲಿ ಪಡೆದುಕೊಳ್ಳಬೇಕೆಂದು ಪೌರಾಯುಕ್ತರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (what are document need for apply)

ಅರ್ಜಿ ಸಲ್ಲಿಸಲಿಚ್ಚಿಸುವವರ ಬಳಿ ಆಧಾರ್ ಕಾರ್ಡ್ ಇರಬೇಕು. ಇತ್ತೀಚಿನ 2 ಭಾವಚಿತ್ರ ಇರಬೇಕು. ಆಸ್ತಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳೊಂದಿಗೆ ಚಾಲ್ತಿಯಲ್ಲಿರುವ ಆಸ್ತಿ ತೆರಿಗೆ ರಸೀದಿ ಪ್ರತಿ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಪಡಿತರ ಚೀಟಿ ಹೊಂದಿರಬೇಕು. ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಮನೆ ಕಟ್ಟಿಸಿಕೊಳ್ಳುವದಕ್ಕಿಂತ ಮುಂಚೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಕಚೇರಿಗೆ ಸಲ್ಲಿಸಬೇಕು. ಮನೆ ಕಟ್ಟಿಸಿಕೊಳ್ಳಲು ಮಂಜೂರಾತಿ ದೊರೆತ ಕಟ್ಟಡದ ಖರ್ಚುವೆಚ್ಚವನ್ನು ಫಲಾನುಭವಿಯ ಖಾತೆಗೆ ಬಿಡುಗಡೆ ಮಾಡಲಾಗುವುದು.

Leave a Reply

Your email address will not be published. Required fields are marked *