ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶುಸಂಗೋಪನೆ ಚಟುವಟಿಕೆಗಳಾದ ಡೈರಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾಂಸ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನಿಡಲಾಗುತ್ತಿದ್ದು, ಇದಕ್ಕಾಗಿ ವಿವಿಧ ವರ್ಗಗಳ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶುಸಂಗೋಪನೆ ವಲಯದಲ್ಲಿ, ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆ (Ahidf fund) ಪ್ರಾರಂಭಿಸಿದ್ದು,  ಜಿಲ್ಲೆಗೆ 30 ಗುರಿ ನಿಗದಿಪಡಿಸಲಾಗಿದ್ದು, ಪಿ.ಪಿ.ಪಿ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಈ ಮೇಲ್ಕಂಡ ಘಟಕಗಳ ಸ್ಥಾಪನೆ ಹಾಗೂ ವಿಸ್ತರಣೆಗೆ ಅವಕಾಶವಿದ್ದು, ರಾಷ್ಟ್ರೀಕೃತ ಬ್ಯಾಂಕಗಳ ಮೂಲಕ ಸಾಲ ಸೌಲಭ್ಯ ಇರುತ್ತದೆ.

ಅರ್ಹ ಫಲಾನುಭವಿಗಳು https://ahidf.udyamimitra.in/ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ತಾಂತ್ರಿಕ ಶಾಖೆಗೆ ಅಥವಾ ಸಂಬಂಧಪಟ್ಟ ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಇತ್ತೀಚಿನ ಭಾವಚಿತ್ರ, ತರಬೇತಿ ಪತ್ರ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಹೊಂದಿರಬೇಕು.

https://ahidf.udyamimitra.in/Default/ViewFile/?id=List_of_Required_Documents_+AHIDF.pdf&path=MiscFiles

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಯ್ಯಾವಾವ ದಾಖಲಾತಿಗಳು ಬೇಕೆಂಬುದನ್ನು ಚೆಕ್ ಮಾಡಿಕೊಂಡು ಅಪ್ಲಿಕೇಶನ್ ತುಂಬಬಹುದು.

ಅರ್ಜಿ ಸಲ್ಲಿಸಬಯಸುವರು https://ahidf.udyamimitra.in/ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಸಾಲಸೌಲಭ್ಯಕ್ಕೆ ಮೊಬೈಲ್ ನಂಬರ್ ನಮೂದಿಸಬೇಕು. ಆಗ ಓಟಿಪಿ ಬರುತ್ತದೆ ಅಲ್ಲಿ ಓಟಿಪಿ ನಮೂಸಿದ ನಂತರ ಫಲಾನುಭವಿಯ ಹೆಸರು, ವೈಯಕ್ತಿಕ ಅಥವಾ ಗುಂಪು ಅಂದರೆ ಸಂಘ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಶು ಆಹಾರ ಘಠಕ, ಮಾಂಸ ಸಂಸ್ಕರಣಾ ಘಟಕ ಸ್ಥಾಪನೆ ಅಥವಾ ಡೈರಿ ಉತ್ಪನ್ನಗಳ ಸಂಸ್ಕರಣೆ ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡ ನಂತರ ಇನ್ನಿತರ ಮಾಹಿತಿಯನ್ನು ನಮೂದಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಅರ್ಜಿ ಭರ್ತಿ ಮಾಡುವ ಮುನ್ನ ನಿಮ್ಮ ಹತ್ತಿರದ  ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ತಾಂತ್ರಿಕ ಶಾಖೆಗೆ ಅಥವಾ ಸಂಬಂಧಪಟ್ಟ ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಧಾರವಾಡ ಜಿಲ್ಲೆಯ ರೈತರಿಂದ ಪಶು ಆಹಾರ ಘಟಕ ಸ್ಥಾಪಿಸಲು ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿ ಪಶುಸಂಗೋಪನೋ ಚಟುವಟಿಕೆಗಳಾದ ಡೈರಿ ಉತ್ಪನ್ನ ಸಂಸ್ಕರಣೆ, ಪಶು ಆಹಾರ ತಯಾರಿಕೆ ಮತ್ತು ಮಾಂಸ ಸಂಸ್ಕರಣಾ ಹೊಸ ಘಟಕ ಸ್ಥಾಪನೆ ಹಾಗೂ ಪ್ರಸ್ತುತಕಾರ್ಯ ನಿರ್ವಹಿಸುತ್ತಿರುವ ಘಟಕಗಳ ವಿಸ್ತರಿಸಲು ಧಾರವಾಡ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ 0836-2447672 ಅಥವಾ ಸಂಬಂಧಿಸಿದ ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *