ತಾಡಪತ್ರಿ ವಿತರಿಸಲು ರೈತರಿಂದ ಆರ್ಜಿ ಆಹ್ವಾನ

Written by By: janajagran

Updated on:

Application for Tarpaulin 2021-22ನೇ ಸಾಲಿನ ಕೃಷಿ ಸಂಸ್ಕರಣಾ ಘಟಕ ಯೋಜನೆಯಡಿ ರಿಯಾಯಿತಿ ದರದಲ್ಲಿ ತಾಡಪಾಲಗಳಿಗಾಗಿ (Application invited for distribution Tarpaulin) ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಳಿಕೋಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಜುಲೈ 17 ಕೊನೆಯದಿನವಾಗಿದ್ದು, ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಜುಲೈ 22 ರಂದು ತಾಳಿಕೋಟೆ, ಬೊಮ್ಮನಹಳ್ಳಿ, ಬಿ. ಸಾಲವಾಡಗಿ, ಮಿಣಜಗಿ, ಮೂಕಿಹಾಳ, ಭಂಟನೂರ, ಬೇಕಿನಾಳ ಗ್ರಾಮದ ರೈತರಿಗೆ ತಾಡಪತ್ರಿ ವಿತರಣೆ ಮಾಡಲಾಗುವುದು. ಜುಲೈ 23 ರಂದು ಹಿರೂರ, ಸಾಸನೂರ, ತುಂಬಗಿ, ಕುಲಗೇರಿ, ಆಸ್ಕಿ, ಕೊಡಗಾನೂರ, ಬಾವೂರ, ಕೊಣ್ಣೂರ ಗ್ರಾಮದ ರೈತರಿಗೆ ಲಾಟರಿ ಮೂಲಕ ಆಯ್ಕೆ ಮಾಡಿ ತಾಡಪತ್ರಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿವರ್ಷ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಸಬ್ಸಿಡಿಯಲ್ಲಿ ತಾಡಪತ್ರಿ (ಟಾರ್ಪಲಿನ್) ವಿತರಿಸಲಾಗುವುದು. ರೈತರು ಸರ್ಕಾರದ ವತಿಯಿಂದ ವಿತರಿಸುವ ತಾಡಪತ್ರಿಯನ್ನು ಪಡೆದುಕೊಳ್ಳಬಹುದು.ಕೊನೆಯ ದಿನಾಂಕದೊಗೆ ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಜಾತಿ ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

Application for Tarpaulin ಟಾರ್ಪಲಿನ್ ಅವಶ್ಯಕತೆ (why Tarpaulin need)

ರೈತರಿಗೆ ಮಳೆ, ಗಾಳಿ, ಧೂಳಿನಿಂದ ರಾಶಿ ಮಾಡಿದ ಬೆಳೆ ಹಾಗೂ ದವಸಧಾನ್ಯಗಳನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ತುಂಬಾ ಅವಶ್ಯಕತೆಯಿರುತ್ತದೆ. ಅಕಾಲಿಕವಾಗಿ ಸುರಿದ  ಮಳೆ, ಸುಳಿಗಾಳಿಯಿಂದಾಗಿ ದವಸ ಧಾನ್ಯ ಹಾಳಾಗುತ್ತಿರುತ್ತದೆ. ರಾಶಿ ಮಾಡಲು ಸಹಿತ ತಾಡಪತ್ರಿ ಉಪಯೋಗಿಸಬಹುದು. ಹೆಸರು, ಉದ್ದು ಬೆಳೆಯನ್ನು ರಸ್ತೆಯ ಮೇಲೆಯೇ ರಾಶಿ ಮಾಡುತ್ತಿರುತ್ತಾರೆ. ಇದರಿಂದಾಗಿ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಬೆಳೆಗಳನ್ನು ಬಿಸಿಲಿಗೆ ಒಣಗಿಸಲು ಸಹ ತಾಡಪತ್ರಿಯ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ತಾಡಪತ್ರಿ ಪಡೆದುಕೊಂಡರೆ ನಿಮ್ಮ ದವಸಧಾನ್ಯಗಳ ರಕ್ಷಣೆಗೂ ಸಹಾಯವಾಗುತ್ತದೆ. ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಆಲೂರು ತಾಲೂಕಿನ ಕೃಷಿ ಇಲಾಖೆ ಕಚೇರಿಗೆ ಸಂಪರ್ಕಿಸಬಹುದು.

ತಾಡಪತ್ರಿಗಳ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏಕೆಂದರೆ ಈ ತಾಡಪತ್ರಿಗಳ ಬಳಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಟ್ಟಡ ಕಟ್ಟುವಾಗ ಪಕ್ಕದ ಮನೆಯವರಿಗೆ ಸಮಸ್ಯೆಯಾಗಬಾರದೆಂದು ತಾಡಪತ್ರಿಗಳನ್ನು ಬಳಸುತ್ತಾರೆ. ಇದರೊಂದಿಗೆ ನಗರ ಪ್ರದೇಶಗಳಲ್ಲಿ ಕೆಲವು ಹೊದಿಕೆಗಾಗಿ ಅಂದರೆ ತಮ್ಮ ಸಾಮಾನುಗಳ ಮೇಲೆ ಮುಚ್ಚಿಟ್ಟಿರುತ್ತಾರೆ. ಇದೇ ರೀತಿ ಟಂಟಂ ವಾಹನಗಳು, ಟ್ರ್ಯಾಕ್ಟರ್ ಹಾಗೂ ಲಾರಿಗಳ ಮಾಲಿಕರು ಹೆಚ್ಚು ಬಳಸುತ್ತಿದ್ದಾರೆ.  ಸರಕುಗಳನ್ನು ಸಾಗಿಸುವಾಗ ಮಳೆಯಿಂದ ಸರಕು ಹಾಳಾಗಬಾರದೆಂಬ ಉದ್ದೇಶದಿಂದಾಗಿ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಬಳಕೆ ಹೆಚ್ಚಾಗುತ್ತಿದ್ದರಿಂದ ಬೆಲೆಯೂ ಹೆಚ್ಚಾಗುತ್ತಿದೆ. ಕಡಿಮೆ ಬೆೆೆೆೆೆಲೆಯಿದ್ದಾಗ ಬಹುತೇಕ ರೈತರು ತಾಡಪತ್ರಿಗಳನ್ನು ಖರೀದಿಸಿಟ್ಟುಕೊಳ್ಳಬೇಕು.

Leave a Comment