ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written by Ramlinganna

Updated on:

ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ, ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 9 ಕಾರ್ಯಕರ್ತೆ, 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 46 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ / ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು19 ರಿಂದ 35 ವಯೋಮಾನದೊಳಗಿರಬೇಕು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರೀಲ್ 6 ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸ್ತ್ರೀ ಶಕ್ತಿ ಭವನ, ಹಳೆ ಆಸ್ಪತ್ರೆ ಹಿಂಭಾಗ, ಶಿರಾ ಇವರಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08135 277578 ನ್ನು ಸಂಪರ್ಕಿಸಬಹುದು.

ಕೆ ರಂಗನಹಳ್ಳಿ, ಬೇವಿನಹಳ್ಳಿ-1, ಚೆನ್ನನಕುಂಟೆ-1, ಯಾದಲಡಕು ಗೊಲ್ಲರಹಟ್ಟಿ, ಅಪ್ಪಿಹಳ್ಳಿ, ಜ್ಯೋತಿನಗರ- 2, ಜಾನ್ ಕಲ್ (ಬಸವನಹಳ್ಳಿ) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದ್ದು, ತಿಪ್ಪನಹಳ್ಳಿ 2, (ಅಂಬೇಡ್ಕರ್ ನಗರ), ಗುಂಗರಪೇಂಟೆ ಕೇಂದ್ರದ ಕಾರ್ಯಕರ್ತೆ ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ ಮೂಡ್ಲೇನಹಳ್ಳಿ ಕೇಂದ್ರದ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಮುಸಕಲೋಟಿ, ಪೂಜಾರ್ ಮುದ್ದೇನಹಳ್ಳಿ ಗೇಟ್, ಪದ್ಮಾಪುರ ತಗ್ಗಿಹಳ್ಳಿ, ಕರೆಕಲ್ಲಹಟ್ಟಿ, ತಿಪ್ಪನಹಳ್ಳಿ-2, (ಅಂಬೇಡ್ಕರ್ ನಗರ), ಗುಂಗರಪೇಟೆ ಹಾಗೂ ಬಾಲೇನಹಳ್ಳಿ ತಾಂಡ ಅಂಗನವಾಡಿ ಕೇಂದ್ರದ ಹುದ್ದೆಗಳು, ಪರಿಶಿಷ್ಟ ಜಾತಿಗೆ  ಕರಾದಿ ಮೊಹಲ್ಲಾ ಹಾಗೂ ಗಂಡಿಹಳ್ಳಿ ಮಠ ಕೇಂದ್ರದ ಹುದ್ದೆಗಳು

ಇದನ್ನೂ ಓದಿ : ರೈತರ ಜಮೀನಿಗೆ ಹೋಗುವ ಕಾಲಾದಾರಿ, ಬಂಡಿದಾರಿ ಹಳ್ಳಕೊಳ್ಳಗಳ, ಬೆಟ್ಟಗುಡ್ಡಗಳ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಪರಿಶಿಷ್ಟ ಜಾತಿಗೆ ಕರಾದಿ ಮೊಹಲ್ಲಾ ಹಾಗೂ ಗಂಡಿಹಳ್ಳಿ ಮಠ ಕೇಂದ್ರದ ಹುದ್ದೆಗಳು ಸಾಮಾನ್ಯ (ಅಲ್ಪಸಂಖ್ಯಾತ) ವರ್ಗಕ್ಕೆ, ಗಾಣದಹುಣಸೆ, ಜಾನಕಲ್ (ಬಸವನಹಳ್ಳಿ) ಹಾಗೂ ಹೊಸಬುರ್ಜು ಕೇಂದ್ರದ ಸಹಾಯಕಿ ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.

ಅದೇ ರೀತಿ  ಗೋಣಿಹಳ್ಳಿ, ಚಿಕ್ಕ ಬಾಣಗೆರೆ, ಹಂಜುನಾಳು, ದೊಡ್ಡನಹಳ್ಳಿ, ಕೊಟ್ಟ-1, ಹೇರೂರ, ಮಾನರಗೆರೆ, ಮೇಕರಿಹಳ್ಳಇ, ದೇವರಹಟ್ಟಿ, ಬಂದಕುಂಟೆಗೊಲ್ಲರಹಟ್ಟಿ, ಯರಗುಂಟೆ, ಪುರ, ನಾಯಕರಹಟ್ಟಿ, ಸಂತೇಪೇಟೆ-2, ಚಿಕ್ಕದಸರಹಳ್ಳಿ, ಕರಿರಾಮನಹಳ್ಳಿ, ದೇವರಹಳ್ಳಿ, ಶಾಗದಡು-2, ರಾಮನಹಳ್ಳಿ, ಮಂಗನಹಳ್ಳಿ, ತಾಳಗುಂದ-1, ಉದಾನಪಾಳ್ಯ (ಕಡವಿಗೆರೆ), ಕಾಳಜ್ಜಿಹಟ್ಟಿ, ಕೆಂಪನಹಳ್ಳಿ ಗೊಲ್ಲರಹಟ್ಟಿ ಹಾಗೂ ಮಾರುತಿ ನಗರ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಸಾಮಾನಯ ವರ್ಗಕ್ಕೆ ಮೀಸಲಿಡಲಾಗಿದೆ.

ತುಮಕೂರು ಜಿಲ್ಲೆಯಿಂದಲೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 14 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಾಯಕನಘಟ್ಟ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ (ಪರಿಶಿಷ್ಟ ಜಾತಿ) ಹುದ್ದೆ ಹಾಗೂ ತೋವಿನಕೆರೆ, ದೊಡ್ಡೇನಹಳ್ಳಿ, ತಾವರೆಕೆರೆ, ಬುಗಡನಹಳ್ಳಿ, ಜಡೆಯಾ, ಹಿಂಡುಮಾರನಹಳ್ಳಿ, ಜಿ. ದೊಡ್ಡೇರಿ, ಕೆ. ಕೊಪ್ಪ, ಚೌಡೇನಹಳ್ಳಿ, ರಂಗನಹಳ್ಳಿ ಭೋವಿ ಕಾಲೋನಿ, ಕುರುಬರಹಳ್ಳಿ ಬ್ಯಾಲ, ನಾಗೇನಗೌಡನಬ್ಯಾಲ, ಕಳ್ಳನಕೆರೆ, ಅರೆಮಲ್ಲೇನಹಳ್ಳಿ, ಅಂಗನವಾಡಿ ಕೇಂದ್ರಗಳಲ್ಲಿಸಹಾಯಕಿಯರ ಹುದ್ದೆಗಳು ಖಾಲಿಯಿವೆ.

ತೋವಿನಕೆರೆ, ದೊಡ್ಡೇನಹಳ್ಳಿ ಹಾಗೂ ಚೌಡೇನಹಳ್ಳಿ ಕೇಂದ್ರದ ಹುದ್ದೆಗಳು ಪರಿಶಿಷ್ಟ ಜಾತಿಗೆ, ಕೆ. ಕೊಪ್ಪ ಕೇಂದ್ರದ ಹುದ್ದೆಯು ಪರಿಶಿಷ್ಟ ಪಂಗಡಕ್ಕೆ, ನಾಗೇನಗೌಡನಬ್ಯಾಲ ಕೇಂದ್ರದ ಹುದ್ದೆಯು ಅಲ್ಪಸಂಖ್ಯಾತ ವರ್ಗಕ್ಕೆ, ಉಳಿದ ಕೇಂದ್ರಗಳ ಸಹಾಯಕಿ ಹುದ್ದೆಗಳನ್ನು ಇತರೆ ವರ್ಗಕ್ಕೆ ಮೀಸಲಿಡಲಾಗಿದೆ.

ಇದನ್ನೂ ಓದಿ :  Anganwadi ಕಾರ್ಯಕರ್ತೆಯರ ಹುದ್ದೆಗೆ ವಿವಿಧ ಜಿಲ್ಲೆಗಳಿಂದ ಅರ್ಜಿ ಆಹ್ವಾನ- ಇಂದೇ ಅರ್ಜಿ ಸಲ್ಲಿಸಿ

ಆಸಕ್ತರು ಏಪ್ರೀಲ್ 5 ರೊಳಗಾಗಿ ತುರುವೇಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಿಂದಲೂ ಅರ್ಜಿ ಆಹ್ವಾನ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಖಾಲಿಯಿರುವ 3 ಅಂಗನವಾಡಿ ಕಾರ್ಯಕರ್ತೆಯರ 5 ಮಿನಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ 10 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಮಾರ್ಚ್ 28 ರ ಒಳಗಡೆ ಬಾಳಗಡಿಯಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 08265 295729 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment