ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

Written by Ramlinganna

Updated on:

Application invited for Anganawadi job ಬೆಳಗಾವಿ ಜಿಲ್ಲೆಯ ಖಾನಾಪುರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ 49 ಅಂಗನವಾಡಿ ಕಾರ್ಯಕರ್ತೆ, 84 ಸಹಾಯಕಿಯರ ಹುದ್ದೆಗಳಿಗೆ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮುಡೇವಾಡಿ, ಸುವತವಾಡಿ, ಬಾಂದೇಕರವಾಡಾ, ಮಂತುರ್ಗಾ, ಓಲ್ಮನಿ, ಸಿಂಪೇವಾಡಿ, ತಿವೋಲಿ, ಕೃಷ್ಣಾ ನಗರ (ಹೊಸ ಕೇಂದ್ರ), ಉಮ್ರಾಪಾನಿ (ಹೊಸ ಕೇಂದ್ರ), ಕಬನಾಳಿ, ಮೆಂಡಿಲ, ಬೇಕವಾಡ, ನವೋದಯ ನಗರ, ಹಂದೂರು, ರವಳನಾಥ ಗಲ್ಲಿ ನಿಟ್ಟೂರ, ಗೋಲಿಹಳ್ಳಿ, ಬೀಡಿ, ಮಳವ, ಘಷ್ಟೋಳಿ, ಹಿರೇಕರದಡ್ಡಿ, ಶಿವಮಂದಿರ, ಶಿವಾಜಿನಗರ, ಮಯೇಕರನಗರ, ಗಾಂಧಿನಗರ, ಇಂದಿರಾನಗರ, ತೋಲಗಿ ಪ್ಲಾಟ್, ಅಸ್ತೋಲಿ, ಸೋನ್ಯಾನಟ್ಟಿ, ಮಾರುತಿನ ಗ, ವಿದ್ಯಾನಗರ ಸಮರ್ಥನಗರ ಹೊಸ ಕೇಂದ್ರ ಅಂಗನವಾಡಿ ಕೇಂದ್ರಗಳಾಗಿವೆ.

ಸಹಾಯಕಿಯರ ಹುದ್ದೆ ಅಂಗನವಾಡಿ ಕೇಂದ್ರದ ಹೆಸರುಗಳು

ಕೆಂಚಾಪೂರಗಲ್ಲಿ, ಮಾಳಅಂಕಲೆ, ಕಾನ್ಸೂಲಿ, ಡೋಂಗರಗಾಂವ, ರುಮೇವಾಡಿಕ್ರಾಸ್, ಹತ್ತರವಾಡಮ, ಗುಂಡಪಿ, ಮೆಂಡೆಗಾಳಿ, ಹಾಳಜುಂಜವಾಡ, ಮುಗುಳಿಹಾಳ, ಗಂದಿಗವಾಡ, ಚಿಗುಳೆ, ಹೆಬ್ಬಾಳ, ಕರಂಬಳ, ಮುದೆಕೊಪ್ಪ, ತೋಲಗಿ, ಚಿಕ್ಕ ಅಂಗ್ರೋಳಿ, ಖೈರವಾಡ, ನಂದಗಡ, ಕೃಷ್ಣಾ ನಗರ ( ಹೊಸ ಕೇಂದ್ರ), ಉಮ್ರಾಪಾನಿ, ಕಬನಾಳಿ, ಮೆಡಿಲ, ಬೇಕವಾಡ, ನವೋದಯನಗರ, ಹಂದೂರು, ರವಳನಾಥ ಗಲ್ಲಿ, ನಿಟ್ಟೂರ,  ಗೋಲಿಹಳ್ಳಿ, ಬೀಡಿ, ಮಳವ, ಘಷ್ಟೋಳಿ, ಹಿರೇಕರದಡ್ಡಿ, ಶಿವಮಂದಿರ, ಶಿವಾಜಿನಗರ, ಮಚೇಕರನಗರ, ಗಾಂಧಿನಗರ, ಇಂದಿರಾನಗರ,  ತೋಲಗಿ ಪ್ಲಾಟ್, ಸೋನ್ಯಾ ನಟ್ಟಿ, ಮಾರುತಿ ನಗರ, ವಿದ್ಯಾನಗರ, ಸಮರ್ಥನಗರ (ಹೊಸ ಕೇಂದ್ರ) ಅಂಗನವಾಡಿ ಕೇಂದ್ರಗಳಾಗಿವೆ.

ಆಫಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 14 ಕೊನೆ ದಿನವಾಗಿದೆ. ಈ ದಿನಾಂಕದೊಳಗಾಗಿ ಖಾನಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಜಾಂಬೋಟಿ ರಸ್ತೆಯಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ಸಲ್ಲಿಸಬಹುದು.

ಇದನ್ನೂ ಓದಿ : Panchatantra 2.0 : ನಿಮ್ಮ ಗ್ರಾಮ ಪಂಚಾಯತಿಯ ಎಲ್ಲಾ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ 08336 222501 ಗೆ ಸಂಪರ್ಕಿಸಬಹುದು ಎಂದು ಖಾನಾಪುರ ತಾಲೂಕು ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Application invited for Anganawadi job ಅಥಣಿ ತಾಲೂಕಿನಿಂದಲೂ ಅರ್ಜಿ ಆಹ್ವಾನ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವ್ಯಾಪ್ತಿಯಲ್ಲಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿಯಾಗಿರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ 27 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 33 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 08289 295150 ಗೆ ಸಂಪರ್ಕಿಸಲು ಕೋರಲಾಗಿದೆ.

ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ : 12 ಕೋಟಿ ರೂಪಾಯಿ ಬೆಳೆ ವಿಮೆ ಹಣ ವಿತರಿಸಲು ಆದೇಶ : ನಿಮಗೆ ವಿಮೆ ಹಣ ಜಮೆಯಾಗುತ್ತೋ ಇಲ್ಲವೋ? ಚೆಕ್ ಮಾಡಿ

ಜುಲೈ ತಿಂಗಳಲ್ಲಿ ಕೃಷಿ ಉದ್ಯಮಿ, ವೆಲ್ಡಿಂಗ್, ಮತ್ತು ಫ್ಯಾಬ್ರಿಕೇಶನ್, ಜೂಟ್ ಬ್ಯಾಗ್ ತಯಾರಿಕೆ, ಸೋಲಾರ್ ಟೆಕ್ನಿಶಿಯನ್, ಮತ್ತು ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ಉಚಿತ ತರಬೇತಿಗಳು ಪ್ರಾರಂಭವಾಗಲಿವೆ.

ಆಸಕ್ತರು ತಮ್ಮ ಹೆಸರು ವಿಳಾಸಗಳನ್ನು ನೋಂದಾಯಿಸಲು ಜೂನ್ 25 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9482188780, 9483485489, 89701453354, 9980510717 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment