12 ಕೋಟಿ ರೂಪಾಯಿ ಬೆಳೆ ವಿಮೆ ಹಣ ವಿತರಿಸಲು ಆದೇಶ

Written by Ramlinganna

Updated on:

Distribute crop insurance money ಬೆಳೆ ವಿಮೆ ಕಟ್ಟಿದ ರೈತರಿಗೆ ಕೂಡಲೇ ಪರಿಹಾರ ಹಣ ವಿತರಿಸಬೇಕೆಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಹೌದು, ಕಳೆದ 2022-23ನೇ ಸಾಲಿನ ಮುಂಗಾರು ತೊಗರಿ ಬೆಳೆ ಕಟಾವಿಗೆ ರೈತರು ಸರಿಯಾದ ಕಾರ್ಯವಿಧಾನ ಅನುಸರಿಸಿಲ್ಲ ಎಂದು ಆಕ್ಷೇಪಿಸಿ ಬಾಕಿ ಇರಿಸಿಕೊಂಡಿದ್ದ 12 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಕೂಡಲೇ ರೈತರಿಗೆ ವಿತರಿಸಬೇಕೆಂದು ಸೋಂಪು ಜನರಲ್ ಇನ್ಸುರೆನ್ಸ್ ಕಂಪನಿಗೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಕಳೆದ ವರ್ಷ ಅಫಜಲ್ಪುರ ತಾಲೂಕಿನ ಮಾಶಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ 4 (ಮಳೆ ಆಶ್ರಯ) ಹಾಗೂ ಕಲಬುರಗಿ ತಾಲೂಕಿನ ಬಸವ ಗ್ರಾಮ ಪಂಚಾಯತಿಯ 1 (ಮಳೆ ಆಶ್ರಯ) ಬೆಳೆ ಕಟಾವು ಪ್ರಯೋಗಗಳನ್ನು ರೈತರು ಸರಿಯಾದ ಕಾರ್ಯವಿಧಾನ ಅನುಸರಿಸಿಲ್ಲಎಂದು ಕೃಷಿ ಆಯುಕ್ತರಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರೈತರಿಗೆ ನೀಡಬೇಕಾದ ತೊಗರಿ ಕೃಷಿ ವಿಮೆ ಪರಿಹಾರ ತಡೆಹಿಡಿದಿದ್ದರು.

ಕೃಷಿ ಆಯುಕ್ತರು ಸದರಿ ಸಮಸ್ಯೆಯನ್ನು ಜಿಲ್ಲಾಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಮಂಡಿಸಿ ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದ್ದರು. ಅದರಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ, ಪಂಚಾಯತಿವಾರು ಬೆಳೆ ಕಟಾವು ಪ್ರಯೋಗಗಳನ್ನುಕೈಗೊಂಡ ಮೂಲ ಕಾರ್ಯಕರ್ತರ (ಗ್ರಾಮ ಲೆಕ್ಕಿಗರ), ಹೊಲದ ರೈತರ ವಾದ ಮತ್ತು ವಿಮಾ ಕಂಪನಿಯವರ ಆಕ್ಷೇಪಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಪ್ರಕರಣದಲ್ಲಿ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಕ್ಷೇತ್ರ ಮಟ್ಟದ ಕಾರ್ಯಕರ್ತರು / ಸಿಬ್ಬಂದಿಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿರುವುದಿಲ್ಲ ಎಂಬುದನ್ನು ತೋರಿಸುತ್ತಿದೆ.

ಆಕ್ಷೇಪಗಳಿಗೆ ಪೂರಕವಾಗಿ ಇಂಬು ನೀಡುವ ಯಾವುದೇ ಸಾಕ್ಷಾಧಾರಗಳು, ದಾಖಲೆಗಳು ನೀಡದ ಕಾರಣ ವಿಮಾ ಕಂಪನಿಯ ಆಕ್ಷೇಪಗಳನ್ನು ಅಲ್ಲಗಳೆದು ಆಯಾ ರೈತರ ಖಾತೆಗೆ ಕೂಡಲೇ ಒಟ್ಟಾರೆ 12 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ನೀಡುವಂತೆ ಡಿ.ಸಿ ಆದೇಶಿಸಿದ್ದಾರೆ.

ಇದನ್ನೂ ಓದಿ : 23 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ – ಯಾವ ರೈತರಿಗೆ ಜಮೆ? 

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್, ಕೃಷಿ ಉಪ ನಿರ್ದೇಶಕರು, ತೋಟಗಾರಿಕೆ ಉಪ ನಿರ್ದೇಶಕರು, ಜಿಲ್ಲಾ ಸಂಖ್ಯೆ ಸಂಗ್ರಹಣಾಧಿಕಾರಿಗಳು, ಲೀಡ್ ಬ್ಯಾಂಕ್ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಕೃಷಿ ನಿರ್ದೇಶಕರು, ವಿಮಾ ಕಂಪನಿಯ ರಾಜ್ಯ ಪ್ರತಿನಿಧಿ ಮಾರೇಶ ಸೇರದಂತೆ ಇನ್ನಿತರ ಅಧಿಕಾರಿಗಳು ಇದ್ದರು.

 ರೈತರು ಬೆಳೆ ವಿಮೆ ಕುರಿತಂತೆ ಮಾಹಿತಿ ಇಲ್ಲಿ ಪಡೆಯಿರಿ

ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ವಿಮೆ ಮಾಡಿಸಿದ ರೈತರು ತಮ್ಮ ವಿಮೆ ಕುರಿತಂತೆ ಸೋಂಪು ಜನರಲ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 200 5142 ಗೆ ಕರೆ ಮಾಡಿ ವಿಚಾರಿಸಬಹುದು.

Distribute crop insurance money ಬೆಳೆ ವಿಮೆ ಅರ್ಜಿ ಯಾವ ಸ್ಥಿತಿಯಲ್ಲಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ ರೈತರು ತಮ್ಮ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕದ ಬೆಳೆ ವಿಮೆ ಪೇಜ್ (ಸಂರಕ್ಷಣೆ) ತೆರೆದುಕೊಳ್ಳುತ್ತದೆ. ಅಲ್ಲಿಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಕಾಣುವ ಮೂರು ಆಯ್ಕೆಗಳಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಅದರ ಕೆಳಗಡೆ ಕ್ಯಾಪ್ಚ್ಯಾ ಕೋಡ್ ಹಾಕಿದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದುಗಡೆ ಸ್ಟೇಟಸ್ ಕೆಳಗಡೆ ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬ Application Acknowledge by insurance co. ಕಾಣಿಸುತ್ತದೆ. ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಓಪನ್ ಆಗುವ ಇನ್ನೊಂದು ಪೇಜ್ ನಲ್ಲಿView Details ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

Leave a Comment