ನಿರುದ್ಯೋಗಿಗಳಿಗೆ ಟೂರಿಸ್ಟ್ ಟ್ಯಾಕ್ಸಿ , ಸರಕು ಸಾಗಾಣಿಕೆ ವಾಹನ ಖರೀದಿಗೆ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ರಾಜ್ಯ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಒಕ್ಕಲಿಗ ಸಮುದಾಯದವರಿಗೆ ಸಾಲದ ಮೊತ್ತಕ್ಕೆ ಶೇ. 50 ರಷ್ಟು ಅಂದರೆ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಉಳಿದ ಮೊತ್ತವನ್ನುಬ್ಯಾಂಕ್ ಮೂಲಕ ಸಾಲದ ರೂಪದಲ್ಲಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು?
ಅರ್ಜಿದಾರರ ಬಳಿ ಆಧಾರ್ ಕಾರ್ಡ್ ಇರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ಗರಿಷ್ಠ 55 ರ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ಹಾಗೂ ಪಟ್ಟಣ ಪ್ರದೇಶದವರಿಗೆ 1,20000 ಗಳ ಒಳಗೆ ನಿಗದಿಪಡಿಸಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೂಲ ಪ್ರತಿಯನ್ನುಲಗತ್ತಿಸಬೇಕು.
ವಾಸಸ್ಥಳ ವಿಳಾಸ ದೃಢೀಕರಣಕ್ಕೆ ಪಡಿತರ ಚೀಟಿ ಅಥವಾ ಚುನಾವಣಾ ಗುರುತಿನ ಚೀಟಿಯ ಝರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್ ಝರಾಕ್ಸ್ ಪ್ರತಿ ಲಗತ್ತಿಸಬೇಕು.ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಅರ್ಜಿದಾರರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಅಂದರೆ ಸೇವಿಂಗ್ ಅಕೌಂಟ್ ಹೊಂದಿರಬೇಕು.
ಆನ್ಲೈನ್ ನಲ್ಲಿ ಅರ್ಜಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಟೂರಿಸ್ಟ್ ಟ್ಯಾಕ್ಸಿ ಅಥವಾ ಸರಕು ಸಾಗಾಣಿಕೆ ವಾಹನ ಖರೀದಿಸಲು ಸಹಾಯಧನ ಪಡೆಯುವ ಅರ್ಜಿಯನ್ನು ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಈ
https://kvcdc.karnataka.gov.in/uploads/media_to_upload1658122534.pdf
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅರ್ಜಿ ತೆರೆದುಕೊಳ್ಳುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಂಡು ಝರಾಕ್ಸ್ ಅಂಗಡಿಯಲ್ಲಿ ಪ್ರಿಂಟ್ ತೆದೆಗುಕೊಳ್ಳಬೇಕು. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಯಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಲಗತ್ತಿಸಬೇಕು.
ಗ್ರಾಮೀಣ ಹಾಗೂ ನಗರ ಪ್ರದಶದಲ್ಲಿ ಒಕ್ಕಲಿಗ ಸಮುದಾಯದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನ ಖರೀದಿಸಿ ಜೀವನ ನಡೆಸಬಹುದು.
ಯಾರು ಅರ್ಜಿ ಸಲ್ಲಿಸಬೇಕು?
ಒಕ್ಕಲಿಗ, ವಕ್ಕಲಿಗ, ಸರ್ವ ಒಕ್ಕಲಿಗ, ಹಳ್ಳಿಕಾರ್, ಒಕ್ಕಲಿಗ, ನಾಮದಾರಿ ಒಕ್ಕಲಿಗ, ಗಂಗಡ್ ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮಧಾರಿಗೌಡ, ಉಪ್ಪಿನ ಕೊಳಗ, ಉತ್ತಕಮ ಕೊಳಗ ಸಮುದಾಯಕ್ಕೆ ಸೇರಿದವರಾಗಿರಬೇಕು.
ಸಾಲ ಮಂಜೂರಾದ ನಂತರ ಸಲ್ಲಿಸಬೇಕಾದ ದಾಖಲೆಗಳು
ಖರೀದಿಸಿದ ವಾಹನವನ್ನು ಟ್ಯಾಕ್ಸಿ ಉದ್ದೇಶಕ್ಕೆ (ಯೆಲ್ಲೋ ಬೋರ್ಡ್) ಸಾರಿಗೆ ಪ್ರಾಧಿಕಾರದಲ್ಲಿ ನೋಂದಾಯಿಸಬೇಕು. ಈ ಯೋಜನೆಯಲ್ಲಿ ಖರೀದಿಸಿದ ವಾಹನವನ್ನು ಬ್ಯಾಂಕ್ ಸಾಲ ತಿರುಳಿಯಾಗುವವರೆಗೂ ಅಥವಾ ಕನಿಷ್ಠ 2 ವರ್ಷಗಳ ಅವಧಿಯೊಳಗೆ ಮಾರಲು ಅಥವಾ ಯೆಲ್ಲೋ ಬೋರ್ಡ್ ದಿಂದ ವೈಟ್ ಬೋರ್ಡ್ ಬದಲಿಸಲು ಅವಕಾಶವಿರುವುದಿಲ್ಲ.. ಅರ್ಜಿದಾರರು ಖರೀದಿಸಿದ ವಾಹನದ ಆರ್.ಸಿ ಪುಸ್ತಕ, ಟ್ಯಾಕ್ಸಿ ಕಾರ್ಡ್, ವಿಮೆ ಪಾವತಿ ರಸೀದಿ ದಾಖಲೆಗಳ ಝರಾಕ್ಸ್ ಪ್ರತಿಯನ್ನು ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಬೇಕು. ಹಾಗೂ ಅರ್ಜಿದಾರರು ಸಲ್ಲಿಸಿದ ಈ ದಾಖಲೆಗಳನ್ನು ಸಂಗ್ರಹಿಸಿಡಬೇಕು. ಕಚೇರಿ ತಪಾಸಣೆ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒದಗಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ https://kvcdc.karnataka.gov.in/kn
ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡಯಬಹುದು. ಯೋಜನೆ ಕುರಿತಂತೆ ವ್ಯವಸ್ಥಾಪಕರು,080 29904268 ಗೆ ಸಂಪರ್ಕಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನವಾಗಿದೆ.