Google Map ನಲ್ಲಿ ನಿಮ್ಮ ಲೋಕೇಷನ್ ಸೇರಿಸಬೇಕೇ? ಇಲ್ಲಿದೆ ಮಾಹಿತಿ

Written by By: janajagran

Updated on:

Google Map ನಲ್ಲಿ  ನಿಮ್ಮೂರಿನ ಸ್ಥಳ, ನಿಮ್ಮೂರಿನ ಹೆಸರು, ಮಂದಿರ, ನಿಮ್ಮೂರಿನ ರಸ್ತೆ, ಹೊಲ, ನಿಮ್ಮ ಮನೆಯ ಮಾಹಿತಿಯನ್ನು ಸಹ ಗೂಗಲ್ ನಲ್ಲಿ ಸೇರಿಸಬಹುದು.

ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ. ನಮಗೆ ಗೊತ್ತಿಲ್ಲದೆ ಇರುವ ಸ್ಥಳದ ಬಗ್ಗೆ ಮತ್ತು ಅಲ್ಲಿರುವ ಸೌಲಭ್ಯ, ರಸ್ತೆ, ಸೌಕರ್ಯದ ಬಗ್ಗೆ ತಿಳಿಯಲು ಗೂಗಲ್ ಮ್ಯಾಪ್ ಬಳಸುತ್ತೇವೆ. ಅದನ್ನು ಮೂಲವಾಗಿಟ್ಟುಕೊಂಡು ಸಂಚರಿಸುತ್ತೇವೆ. ಇದೀಗ ಗೂಗಲ್ ಹೊಸದಾಗಿ ಪರಿಚಿಯಿಸಿದ ಪ್ರಯೋಜನದಿಂದ ನಿಮ್ಮೂರಿನ ರಸ್ತೆ ಹೆಸರು, ಹೊಸ ರಸ್ತೆಯಾಗಿದ್ದರೆ, ಹೆಸರು ಬದಲಾವಣೆಯಾಗಿದ್ದರೆ ಅದನ್ನೂ ಸಹ ಗೂಗಲ್ ಮ್ಯಾಪ್ ನಲ್ಲಿ ಸೇರಿಸಬಹುದು. ನಿಮ್ಮೂರಿನ ರಸ್ತೆ, ಊರು, ಮಂದಿರದ ಫೋಟೋ ಕ್ಲಿಕಿಸುವುದರ ಜೊತೆಗೆ ಮಾಹಿತಿ ಸೇರಿಸಬಹುದು.

ಗೂಗಲ್ ಮ್ಯಾಪ್ ಈ ನೂತನ ಸೌಲಭ್ಯವನ್ನು ಡ್ರಾಯಿಂಗ್ ಎಂದು ಹೆಸರಿಟ್ಟಿದೆ.  ಗೂಗಲ್ ಮ್ಯಾಪ್ ಬಳಕೆದಾರರು ಒಂದು ಸ್ಥಳದ ಕುರಿತ ಮಾಹಿತಿಯನ್ನು ಜೊತೆಗೆ ಮ್ಯಾಪ್ ನಲ್ಲಿ ಹೊಸ ಬದಲಾವಣೆ ಮಾಡಿದ ಬಳಿಕ ಆ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಏಳು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.

Google Map ನಲ್ಲಿ ಹೆಸರು ಸೇರಿಸುವುದು ಹೇಗೆ? (How to add your place in Google map)

ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಮ್ಯಾಪ್ ಓಪನ್ ಮಾಡಿಕೊಳ್ಳಬೇಕು. ನಂತರ ಗೂಗಲ್ ಮ್ಯಾಪ್ ನಲ್ಲಿ ಪ್ಲೇಸ್ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು ಎಲ್ಲಿರುತ್ತೀರೋ ಆ ಪ್ಲೇಸ್ ತೋರಿಸುತ್ತದೆ. ಆಗ ನೀವು ಆ ಸ್ಥಳದ ಮಾರ್ಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ  ಮೋರ್ ಅಥವಾ ಪ್ಲಸ್ ಸಿಂಬಲ್  ಅಥವಾ ಸೇರಿಸು ಆಪ್ಷನ್  ಮೇಲೆ ಕ್ಲಿಕ್ ಮಾಡಬೇಕು. ನಂತರ Add A missing place ಕನ್ನಡದಲ್ಲಿ ಸ್ಥಳವನ್ನು ಸೇರಿಸು ಎಂದು ಕಾಣುತ್ತದೆ. ಅಲ್ಲಿ Add A missing place ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಊರು, ಅಂಗಡಿ, ಹೋಟೇಲ್ ರಸ್ತೆ, ಗುಡಿ ಯಾವುದನ್ನು ಸೇರಿಸಬೇಕೆಂದುಕೊಂಡಿದ್ದೀರೋ ಅದನ್ನು ಅಲ್ಲಿ ನಮೂದಿಸಬೇಕು. ಕೆಳಗಡೆ ಬಂದರಿ ಅಲ್ಲಿ ಚೂಸ್ ಕೆಟೆಗರಿ ಆಯ್ಕೆ ಮಾಡಿಕೊಳ್ಳಬೇಕು. ಅಂಗಡಿಯಿದ್ದರೆ ಅಂಗಡಿ ಸಂಬಂಧಿಸಿದ ಮಾಹಿತಿ. ರಸ್ತೆ ಇದ್ದರೆ ರಸ್ತೆ ಮಾಹಿತಿ. ಮಂದಿರವಿದ್ದರೆ ಮಂದಿರದ ಮಾಹಿತಿ ಸೇರಿಸಬೇಕು. ಅಂಗಡಿಯಿದ್ದರೆ ಅಂಗಡಿ ಯಾವ ಮಸಯದಲ್ಲಿ ಓಪನ್ ಆಗುತ್ತದೆ. ಮಂದಿರವಿದ್ದರೆ ಮಂದಿರ ಸಮಯ ಸೇರಿಸಬಹುದು. ರಸ್ತೆಯಿದ್ದರೆ ರಸ್ತೆಗೆ ಸಂಬಂಧಿಸಿದ ಮಾಹಿತಿ ಸೇರಿಸಬೇಕು. ನಿಮ್ಮ ವೆಬ್ಸೈಟ್ ಇದ್ದರೆ ಸೇರಿಸಬೇಕು. ಫೋನ್ ನಂಬರ್ ಸೇರಿಸಬಹುದು.

ಇದನ್ನೂ ಓದಿನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ

ಫೋಟೋ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿ ಫೋಟೋ ಸೇರಿಸಬಹುದು. ನಂತರ ಮೇಲ್ಗಡೆ Add a place ಮುಂದಿರುವ Arrow ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಯು ಅರ್ನ್ಡ್ ಪೌಯಿಂಟ್ಸ್ ಬರುತ್ತದೆ.ಟ್ರೈಯಿ ಇಟ್ ನೌ ಮೇಲೆ ಕ್ಲಿಕ್ ಮಾಡಬೇಕು.ನಂತರ ನೀವು 18 ವರ್ಷ ಮೇಲ್ಪಟ್ಟವರೇ ಮತ್ತು ಟರ್ಮ್ಸ್ ಕಂಡಿಷನ್ ಅಗ್ರಿ ಎರಡನ್ನು ಸೆಲೆಕ್ಟ್ ಮಾಡಿ ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಇದು ಅಪಡೇಟ್ ಆಗಲು ಒಂದು ವಾರದಿಂದ 15 ದಿನ ಸಮಯ ತೆಗೆದುಕೊಳ್ಳುತ್ತದೆ. ಗೂಗಲ್ ನವರು ಸ್ಥಳವನ್ನು ಗೂಗಲ್ ಮ್ಯಾಪ್ ನಲ್ಲಿ ಸೇರಿಸಿದ ನಂತರ ಕನ್ಫರ್ಮ್ ಮೇಲ್ ಬರುತ್ತದೆ.ಆಗ ನೀವು ಸೇರಿಸಿದ ಸ್ಥಳ ಗೂಗಲ್ ಮ್ಯಾಪ್ ನಲ್ಲಿ ಸೇರ್ಪಡೆಯಾಗುತ್ತದೆ.

Leave a Comment