7 ನೇ ತರಗತಿಯಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಆಕಾಶ್ ಇನ್ಸ್ ಟಿಟ್ಯೂಟ್ ನಡೆಸುವ ನ್ಯಾಷನಲ್ ಟ್ಯಾಲೇಂಟ್ ಹಂಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಪಾಲಕರಿಗೆ ನಾಸಾ ಪ್ರವಾಸ ಹಾಗೂ ಆಕರ್ಷಕ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಪರೀಕ್ಷೆ ಬರೆಯಬಹುದು. ಪರೀಕ್ಷೆ ಸಿದ್ದತೆಯ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳಿಗೆ ಆಕಾಸ್ ಇನ್ಸ್ಟಿಟ್ಯೂಟ್ ನಡೆಸುವ ನ್ಯಾಷನಲ್ ಟ್ಯಾಲೇಂಟ್ ಹಂಟ್ ಎಕ್ಸಾಂಗೆ (ಅಂಥೆ) ಈ ಪರೀಕ್ಷೆ ಅನುಕೂಲವಾಗಲಿದೆ.

ಕಳೆದ 11 ವರ್ಷಗಳಿಂದ  ಪರೀಕ್ಷೆ ನಡೆಸಲಾಗುತ್ತಿದೆ. ಇದು 12 ನೇ ವರ್ಷವಾಗಿದೆ. ಈ ಬಾರಿ ಹೆಚ್ಚಿನ ಅಂಕಗಳಿಸಿದ ಐದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಲ್ಲಿ ಒಬ್ಬರಿಗೆ ನಾಸಾ ಪ್ರವಾಸ ಆಯೋಜನೆ ಮಾಡಲಾಗಿದೆ. 7 ರಿಂದ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು

ಆನ್ಲೈನ್ಲ್ಲಿ ಅರ್ಜಿ ಸಲ್ಲಿಸುವವರು https://anthe.aakash.ac.in/home ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮತ್ತು ಆಫ್ ಲೈನ್ ಪರೀಕ್ಷೆಗಳು ಡಿ 4 ಮತ್ತು 12 ರ ಅವಧಿಯಲ್ಲಿ ನಡೆಯಲಿದೆ. ದೇಶದ 215 ಪರೀಕ್ಷಾ ಕೇಂದ್ರಗಳಲ್ಲಿ  ಬೆಳಗ್ಗೆ 10.30 ರಿಂದ 11.30 ರವರೆಗೆ ಹಾಗೂ ಸಾಯಂಕಾಲ 4 ರಿಂದ 5 ಗಂಟೆಯವರೆಗೆ ನಡೆಯಲಿದೆ.

ಪರೀಕ್ಷಾ ಶುಲ್ಕ ಕೇವಲ 99 ರೂಪಾಯಿ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಸಮಯ ಹೊಂದಿಸಿಕೊಂಡು ಪರೀಕ್ಷೆ ಅವಧಿ ನಿಗದಿ ಪಡಿಸಿಕೊಳ್ಳಬಹುದು. ಮನಯಲ್ಲಿಯೇ ಕುಳಿತು ಆನ್ಲೈನ್ ನಲ್ಲೇ ಪರೀಕ್ಷೆ ಬರೆಯಬಹುದು. ಆಫ್ಲೈನ್ ನಲ್ಲಿ ಪರೀಕ್ಷೆ ಬರೆಯುವವರು ಆಕಾಶ ಕೇಂದ್ರಗಳಿಗೆ ಭೇಟಿ ನಿಡಿ ಪರೀಕ್ಷೆ ತೆಗೆದುಕೊಳ್ಳಬಹುದು.

ವಿದ್ಯಾರ್ಥಿಗಳ ಪಠ್ಯಕ್ರಮ ಆಧರಿಸಿ ಪ್ರಶ್ನೆ ಪತ್ರಿಕೆ ರೂಪಸಲಾಗಿದೆ. ರ್ಯಾಂಕ್ ಅಧಾರದ ಮೇಲೆ ವಿದ್ಯಾರ್ಥಿ ವೇತನ ನಿಗದಿಪಡಿಸಲಾಗಿದೆ. ಅಲ್ಲದೆ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು.

ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸುವುದು ಹೇಗೆ?

ವಿದ್ಯಾರ್ಥಿಗಳು ಈ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನ ಪರೀಕ್ಷೆಗೆ ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.

ಆನ್ ಲೈನ್ ನೋಂದಣಿಗಾಗಿ https://anthe.aakash.ac.in/home ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ವಿದ್ಯಾರ್ಥಿಗಳುಸಂಖ್ಯೆ ನಮೂದಿಸಬೇಕು. ಆಗ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಲಾಗಿನ್ ನಾವ್ ಮೇಲೆ ಕ್ಲಿಕ್ ಮಾಡಿ. ಹೆಸರು, ಸಂಪರ್ಕ ಸಂಖ್ಯೆ, ವರ್ಗ,  ಪರೀಕ್ಷೆಯ ವಿಧಾನ ಸೇರಿದಂತೆ ಇನ್ನಿತರ ವಿವರಗಳನ್ನು ಭರ್ತಿ ಮಾಡಬೇಕು.  “ಪರೀಕ್ಷೆ ದಿನಾಂಕ ಆಯ್ಕೆ ಮಾಡಿ ಮತ್ತು ಶುಲ್ಕ ಪಾವತಿಸಿ” ಕ್ಲಿಕ್ ಮಾಡಬೇಕು. ಪರೀಕ್ಷೆಯ ದಿನಾಂಕ, ಪ್ರಸ್ತುತ ನಗರ ಮತ್ತು ರಾಜ್ಯ, ಮತ್ತು ಶಾಲಾ ಹೆಸರನ್ನು ಆಯ್ಕೆ ಮಾಡಬೇಕು. ಪರೀಕ್ಷೆ ಶುಲ್ಕಕ್ಗಾಗಿ  ಇ. “ಪಾವತಿಗಾಗಿ ಮುಂದುವರಿಯಿರಿ” ಕ್ಲಿಕ್ ಮಾಡಿ. ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ಡೆಬಿಟ್ /ಕ್ರೆಡಿಟ್ ಕಾರ್ಡ್ ವಿವರಗಳನ್ನು ಒದಗಿಸಿ ಶುಲ್ಕ ಪಾವಿತಿಸಬೇಕು. ಶುಲ್ಕ ಯಶಸ್ವಿ ಪಾವತಿಯ ನಂತರ ನೋಂದಣಿಯನ್ನು ಪೂರ್ಣಗೊಳಿಸಲು ಪಾವತಿ ಗೇಟ್ ವೇ ಸೂಚನೆಗಳನ್ನು ಅನುಸರಿಸಿ.

ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಕೇಳಿದ ಮಾಹಿತಿಗಳನ್ನೆಲ್ಲಾ ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ಡೌನ್ಲೋಡ್ ಮಾಡಿಕೊಳ್ಳಲು ಈ ಮುಂದಿನ ಲಿಂಕ್ https://dcx0p3on5z8dw.cloudfront.net/Aakash/s3fs-public/pdf_management_files/target_solutions/ANTHE%20Enrollment%20Form_Final.pdf

ಮೇಲೆ ಕ್ಲಿಕ್ ಮಾಡಿ ಡೋನ್ಲೋಡ್ ಮಾಡಿಕೊಳ್ಳಬಹುದು.

Leave a Reply

Your email address will not be published.