Check you payment status : ರೈತರು ತಮಗೆ ಯಾವ ಯಾವ ಯೋಜನೆಯಿಂದ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರಿಗಾಗಿ ಬಡಜನರಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಯಾವ ಯೋಜನೆಯಿಂದ ಎಷ್ಟು ಹಣ ಹಾಗೂ ಯಾವ ಖಾತೆಗೆ ಹಣ ಜಮೆಯಾಗಿದೆ ಎಂಬುದು ರೈತರಿಗೆ ಗೊತ್ತಿರುವುದಿಲ್ಲ. ಹಾಗಾಗಿ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಯಾವ ಯೋಜನೆಯಿಂದ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನುಚೆಕ್ ಮಾಡಬಹುದು.ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ.ಈ ಯೋಜನೆಯಡಿಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದೆ. ಅದೇ ರೀತಿ ಕಳೆದ ವರ್ಷ ಬಿಜೆಪಿಸರ್ಕಾರವಿದ್ದಾಗ ರೈತ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು ಈಯೋಜನೆಯಡಿ ರೈತರಿಗೆ ಎಕರೆಗನುಸಾರವಾಗಿ ಪ್ರತಿ ಎಕರೆಗೆ 250 ರೂಪಾಯಿ ಡೀಸೆಲ್ ಸಬ್ಸಿಡಿ ಹಣ ಜಮೆ ಮಾಡಿತ್ತು.ಇದನ್ನ ಗರಿಷ್ಟ್ಠ1250 ರೂಪಾಯಿಯವರೆಗೆ ಜಮೆ ಮಾಡಲಾಗಿತ್ತು. ನಂತರ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಡಿಯಲ್ಲಿ ರಾಜ್ಯದ ಜನತೆಯ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಯಾರು ಯಾರಿಗೆ ಈಯೋಜನೆಗಳ ಹಣ ಜಮೆಯಾಗುತ್ತಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಯಾವ ಆ್ಯಪ್ ಸಹಾಯದಿಂದ ನಾವು ಚೆಕ್ ಮಾಡಬಹುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಡಿಬಿಟಿ ಆ್ಯಪ್. ಹೌದು, ಈ ಡಿಬಿಟಿ ಆ್ಯಪ್ ಸಹಾಯದಿಂದ ರಾಜ್ಯದ ಜನರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
Check you payment status ಡಿಬಿಟಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಡಿಬಿಟಿ ಆ್ಯಪ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಈ
https://play.google.com/store/apps/details?id=com.dbtkarnataka
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಡಿಬಿಟಿ ಕೆಳಗಡೆ ಅಲೋ ಮೇಲೆ ಕ್ಲಿಕ್ ಮಾಡಬೇಕು. ಮತ್ತೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಅಲ್ಲಿ ಕೆಳಗಡೆ ಕಾಣಿಸುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಆಧಾರ್ ಕಾರ್ಡಿಗೆ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನೀವು ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ಈ ಪಿನ್ ನೀವು ನೆನಪಿಟ್ಟುಕೊಳ್ಳಬೇಕು. ಮೇಲ್ಗಡೆ ನಮೂದಿಸಿ ಪಿನ್ ನ್ನು ಮತ್ತೇ ಕೆಳಗಡೆ ಹಾಕಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು..ಆಗ ನಿಮ್ಮ ಫೋಟೋ ಕಾಣಿಸುತ್ತದೆ.
ಇದನ್ನೂ ಓದಿ : ರೈತರು ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಅಲ್ಲಿ ನಿಮ್ಮ ಹೆಸರು, ವಿಳಾಸ ಕಾಣಿಸುತ್ತದೆ. ಹುಟ್ಟಿದ ದಿನಾಂಕ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಓಕೆ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಪೇಮೆಂಟ್ ಸ್ಟೇಟಸ್, ಪ್ರೌಫೈಲ್ ಹಾಗೂ ಕಂಟ್ಯಾಕ್ಟ್ ಹೀಗೆ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವ ಯಾವ ಯೋಜನೆಗಳಿಂದ ನಿಮಗೆ ಹಣ ಜಮೆಯಾಗುತ್ತಿದೆ ಎಂಬ ಪಟ್ಟಿ ಕಾಣಿಸುತ್ತದೆ. ಆ ಯೋಜನೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.