Do you know your property tax pending : ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜನರು ತಮ್ಮ ಮನೆಯ ಆಸ್ತಿ ತೆರಿಗೆ ಕಟ್ಟುವುದೆಷ್ಟಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು ಇದಕ್ಕಾಗಿ ಈಗ ಗ್ರಾಮ ಪಂಚಾಯತಿಗೆ ಹೋಗಿ ವಿಚಾರಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಆಸ್ತಿ ತೆರಿಗೆ ಕಟ್ಟುವುದೆಷ್ಟಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
ಗ್ರಾಮಗಳಲ್ಲಿ ಸಾಮಾನ್ಯವಾಗಿ ಆಸ್ತಿ ತೆರಿಗೆ ಕಟ್ಟಲು ಹಿಂದೇಟು ಹಾಕಲಾಗುತ್ತಿದೆ. ಪ್ರತಿ ವರ್ಷ ಕಟ್ಟುವ ಮನೆಯ ಆಸ್ತಿ ತುಂಬಾ ಕಡಿಮೆಯಿದ್ದರೂ ಸಹ ಆಸ್ತಿ ತೆರಿಗೆ ಪಾವತಿಸಲು ಮುಂದೂಡಲಾಗುವುದರಿಂದ ಮುಂದೊಂದು ದಿನ ದೊಡ್ಡ ಮೊತ್ತ ಪಾವತಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಆಸ್ತಿ ತೆರಿಗೆ ಎಷ್ಟಿದೆ ಎಂಬುದನ್ನು ಈಗಲೇ ಚೆಕ್ ಮಾಡಿಕೊಳ್ಳಿ.
Do you know your property tax pending ಆಸ್ತಿ ತೆರಿಗೆ ಕಟ್ಟುವುದೆಷ್ಟಿದೆ ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು, ಗ್ರಾಮಾಸ್ಥರು ತಮ್ಮ ಮನೆಯ ಆಸ್ತಿ ತೆರಿಗೆ ಎಷ್ಟಿದೆ ಎಂಬುದನ್ನು ಚೆಕ್ ಮಾಡಲು
https://mahitikanaja.karnataka.gov.in/PTBank/PTDemandCollectionAndBalance?ServiceId=23&Type=TABLE&DepartmentId=2065
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಾಹಿತಿ ಕಣಜದ ಸಾರ್ವಜನಿಕರ ಮಾಹಿತಿ ವ್ಯವಸ್ಥೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಗ್ರಾಮ ಪಂಚಾಯತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ವರ್ಷ ಆಯ್ಕೆ ಮಾಡಿಕೊಳ್ಳಬೇಕು.ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿದರೆಸಾಕು, ನಿಮ್ಮ ತೆರಿಗೆ ಎಷ್ಟು ಬಾಕಿಯಿದೆ ಎಂಬುದು ಕಾಣಿಸುತ್ತದೆ. ಅಲ್ಲಿ ನಿಮ್ಮೂರಿನಲ್ಲಿ ಯಾರ ಯಾರ ತೆರಿಗ ಬಾಕಿ ಎಷ್ಟಿದೆ ಎಂಬುದು ಕಾಣಿಸುತ್ತದೆ.
ಆಸ್ತಿ ತೆರಿಗೆ ವಿವರಗಳು ಕೆಳಗಡೆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ 2021-22 ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿಲೇಜ್ ನಲ್ಲಿ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಊರು, ಆಸ್ತಿ ಮಾಲೀಕರ ಹೆಸರು, ಪ್ರಾಪರ್ಟಿ ಐಡಿ, ಸರ್ವೆ ನಂಬರ್, ಹೌಸ್ ನಂಬರ್, ಆಸ್ತಿ ತೆರಿಗೆ ಪಾವತಿಸಿದ್ದರೆ ಹಾಗೂ ಆಸ್ತಿ ತೆರಿಗೆ ಎಷ್ಟುಪಾವತಿಸಬೇಕಾಗಿದೆ ಬ್ಯಾಲೆನ್ಸ್ ಕಾಣುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ನಿಮ್ಮ ಗ್ರಾಮದಲ್ಲಿ 100ಕ್ಕೂ ಹೆಚ್ಚು ಹೆಸರುಗಳಿರುವುದರಿಂದ ನಿಮ್ಮ ಹೆಸರು ಯಾವ ಪೇಜ್ ನಲ್ಲಿದೆ ಎಂಬುದನ್ನು ಚೆಕ್ ಮಾಡಬೇಕಾಗುತ್ತದೆ. ಒಂದನೇ ಪುಟದಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮುಂದಿನ ಪೇಜ್ ನಲ್ಲಿರುತ್ತದೆ. ಹಾಗಾಗಿ ಕೆಳಗಡೆ 1, 2, 3, 4,5 ಹೀಗೆ ಪೇಜ್ ಗಳಿರುತ್ತವೆ.
ಒಂದೊಂದಾಗಿ ನಂಬರ್ ಮೇಲೆ ಕ್ಲಿಕ್ ಮಾಡುತ್ತಾ ನಿಮ್ಮ ಹೆಸರು ಚೆಕ್ ಮಾಡಬೇಕು. ನಿಮ್ಮ ಹೆಸರಿನ ಮುಂದುಗಡೆ ಕೊನೆಯಲ್ಲಿ ಎಷ್ಟು ತೆರಿಗೆ ಪಾವತಿಸಬೇಕು ಎಂಬುದು ಕಾಣುತ್ತದೆ. ಈ ಆಧಾರದ ಮೇಲೆ ನೀವು ನಿಮ್ಮಗ್ರಾಮ ಪಂಚಾಯತಿಗೆ ಹೋಗಿ ಆಸ್ತಿ ತೆರಿಗೆ ಪಾವತಿಸಬಹುದು. ಆಸ್ತಿ ತೆರಿಗೆ ಸರಿಯಾದ ಸಮಯಕ್ಕೆ ಪಾವತಿಸಿ ಮುಂದೆ ದುಪ್ಪಟ್ಟು ಹಣ ಕಟ್ಟುವುದರಿಂದ ಪಾರಾಗಬಹುದು. ಆಸ್ತಿ ತೆರಿಗೆ ಸರಿಯಾದ ಸಮಯಕ್ಕೆ ಪಾವತಿಸುತ್ತಿದ್ದರೆ ಗ್ರಾಮ ಪಂಚಾಯತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ
ಗ್ರಾಮ ಪಂಚಾಯತಿ ಮಾಹಿತಿಯೊಂದಿಗೆ ಅಲ್ಲಿ ನಡೆಯುವ ಕಾರ್ಯಗಳು, ಕಾಮಗಾರಿಗಳು ಸಹ ನೀವು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇವೆಲ್ಲಾ ಮಾಹಿತಿಗಳು ಮಾಹಿತಿ ಕಣಜ ಪೇಜ್ ನಲ್ಲಿ ಸಿಗುತ್ತವೆ.