ರೈತರು ಖರ್ಚು ಉಳಿಸಲು ತಾವೇ ವಿಜ್ಞಾನಿಗಳು, ಇಂಜಿನೀಯರ್ ಗಳಾಗುತ್ತಿರುವುದು ಸಂತಸದ ಸಂಗತಿ. ದಿನದಿಂದ ದಿನಕ್ಕೆ ಕೂಲಿ ಆಳುಗಳ ಖರ್ಚು ಹೆಚ್ಚಾಗುತ್ತಲೇ ಇದೆ. ಮಳೆಗಾಲದಲ್ಲಿ ಕಳೆಯ ನಿರ್ವಹಣೆ ರೈತರಿಗೆ ದೊಡ್ಡ ಸವಾಲಾಗಿರುತ್ತದೆ. ಇದಕ್ಕೆ ರೈತರು ಸುಲಭದ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಹೊಲದಲ್ಲಿ ಬೆಳೆದ ಕಳೆ ತೆಗೆಯಲು ಸಣ್ಣ ರೈತರು ಸ್ವತಃ ಇಂಜಿನಿಯರ್ ಗಳಾಗಿ ತಮ್ಮ ಬುದ್ಧಿ ಉಪಯೋಗಿಸಿ ಹೊಸ ತಂತ್ರಜ್ಞಾನಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ಎಡೆಕುಂಟೆಯೂ (cycle weeder) ಒಂದಾಗಿದೆ.
ಈ ಸೈಕಲ್ ಎಡೆಕುಂಟೆಯಿಂದ ಸಮಯ ಹಣ, ಶ್ರಮ ಉಳಿತಾಯವಾಗುತ್ತದೆ. ಸೈಕಲ್ ಯಂತ್ರ ಬಳಸಿ ಹೆಸರು, ಉದ್ದು, ಶೇಂಗಾ, ಜೋಳಾ, ಮೆಕ್ಕೆಜೋಳ, ರಾಗಿ ಸೇರಿದಂತೆ ಇನ್ನಿತರ ಬೆಳೆಗಳಲ್ಲಿ ಕಳೆ ತೆಗೆಯುತ್ತಾರೆ. ಕುಂಟೆ ಹೊಡೆಯಲು ಎತ್ತು, ಗಂಡು ಆಳು ಬೇಕು. ಕಳೆ ತೆಗೆಯಲು ಹುಲ್ಲು ಆರಿಸಲು ಹೆಣ್ಣಾಳು ಇರುತ್ತಾರೆ. ಇದಕ್ಕೆ ಎಕರೆಗೆ ಸುಮಾರು 2ರಿಂದ ಮೂರು ಸಾವಿರ ರೂಪಾಯಿಯವರಿಗೆ ಖರ್ಚು ಬರುತ್ತದೆ. ಆದರೆ ಈ ಉಪಕರಣದಿಂದ ಎರಡು ದಿನದಲ್ಲಿ ಒಂದು ಎಕರೆ ಸಲೀಸಾಗಿ ಕಳೆ ತೆಗೆಯಬಹುದು.
ಕಡಿಮೆ ಜಮೀನುಳ್ಳ ರೈತರು, ಎತ್ತುಗಳನ್ನು ಖರೀದಿಸುವುದು, ಸಾಕುವುದು ಕಷ್ಟಕರ ಸಂಗತಿ. ಆದರೆ ಬಾಡಿಗೆ ಕೊಟ್ಟು ಬೆಳೆಯಲ್ಲಿನ ಕಸ ತೆಗೆಸಬೇಕೆಂದರೆ ವೆಚ್ಚ ಅಧಿಕವಾಗಿ ಕೃಷಿ ಹೊರೆಯಾಗುವ ಆತಂಕವೇ ಹೆಚ್ಚಾಗಿದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಸೈಕಲ್ ಎಡೆಕುಂಟೆ ತಯಾರಿಸಿ ಯಥೇಚ್ಚವಾಗಿ ಬೆಳೆಗಳ ಸಾಲು ಮಧ್ಯದಲ್ಲಿ ಬೆಳೆದಿರುವ ಕಳೆಯನ್ನು ಸಲೀಸಾಗಿ ತೆಗೆಯಬಹುದು.
ಕಡಿಮೆ ವೆಚ್ಚದ ಈ ಯಂತ್ರ ಬಳಕೆಮೊಡಿಕೊಂಡು ಒಬ್ಬರೇ ತಮ್ಮ ಹೊಲದಲ್ಲಿ ಬೆಳೆದಿರುವ ಕಳೆ ತೆಗೆಯಬಹುದು.ಸೈಕಲ್ ಬಳಸಿ ಒಬ್ಬರೇ ಸುಲಭವಾಗಿ ಕಳೆ ತೆಗೆಯಬಹುದು. ಇದರಿಂದ ಸಮಯ ಹಾಗೂ ಕೂಲಿಯಾಳಿನ ಖರ್ಚು ಉಳಿತಾಯವಾಗುತ್ತದೆ.
ವಿಪರೀತ ಕಲ್ಲು ಜಮೀನನ್ನು ಬಿಟ್ಟು ಎಲ್ಲಾ ಮಣ್ಣಿನಲ್ಲಿ ಈ ಉಪಕರಣ ಬಳಸಬಹುದು. ವಿವಿಧ ಅಳತೆಯ ಕೂರಿಗೆ ಸಾಲುಗಳಲ್ಲಿಯೂ ಇದನ್ನು ಬಳಸಬಹುದು. ಎತ್ತು ಬಳಸಿ ಕುಂಟೆ ಹೊಡೆಯುವಾಗ ಎತ್ತುಗಳ ಕಾಲಿಗೆ ಅಲ್ಪಸ್ವಲ್ಪ ಬೆಳೆಸಿಕ್ಕು ನಾಶವಾಗುತ್ತದೆ. ಬೆಳೆ ಸಾಲಿನ ಹುಲ್ಲು ಹಾಗೆ ಉಳಿಯುತ್ತದೆ. ಆದರೆ ಈ ಉಪಕರಣದಿಂದ ಹುಲ್ಲು ಇರುವೆಲ್ಲೆಲ್ಲಾ ಸಲೀಸಾಗಿ ತಿರುಗಿಸಿ ಕಳೆ ತೆಗೆಯಬಹುದು. 4-5 ಅಡಿ ಎತ್ತರದ ಬೆಳೆ ನಡುವೆಯೂ ಲೀಲಾಜಾಲವಾಗಿ ಹುಲ್ಲು ತೆಗೆಯಬಹುದು. ಹ್ಯಾಂಡಲ್ ಹಿಡಿದು ಮುಂದೆ ಸಾಗಿದರೆ, ಕೆಳಗೆ ಫಿಕ್ಸ್ ಮಾಡಿರುವ ಕುಂಟೆ ಜಮೀನಿನಲ್ಲಿರುವ ಕಳೆಯನ್ನು ತೆಗೆಯುತ್ತದೆ.
ಸೈಕಲ್ ಎಡೆಕುಂಡೆಯಿಂದ ಹೆಸರು, ಕಡಲೆ, ಸೂರ್ಯಕಾಂತಿ, ಗೋಧಿ, ಜೋಳ, ಸೋಯಾಬಿನ್, ಉಳ್ಳಾಗಡ್ಡಿ, ಮತ್ತಿತರ ಬೆಳೆಗಳಲ್ಲಿ ಸಲೀಸಾಗಿ ಎಡೆಕುಂಟೆ ಹೊಡೆಯಬಹುದು.
ಸೈಕಲ್ ಎಡೆಕುಂಟೆ ತಯಾರಿಸುವುದು ಹೇಗೆ (how to make cycle weeder in 500 rupees)
ಸೈಕಲ್ ಎಡೆಕುಂಟೆ ತಯಾರಿಸಲು ಒಂದು ಸೈಕಲ್ ಗಾಲಿ, (ಕಬ್ಬಿದ ಚಕ್ರವನ್ನು ಅಳವಡಿಸಿದರೆ ಸ್ವಲ್ಪ ಖರ್ಚು ಹೆಚ್ಚಾಗುತ್ತದೆ) ಮುಂದಿನ ಹ್ಯಾಂಡಲ್ ಇದ್ದರೆ ಸಾಕು. ಮನೆಯಲ್ಲಿರುವರ ಕಬ್ಬಿಣದ ಸಲಾಕೆಗಳನ್ನು ಬಳಸಿ ಎರಡು ಸಲಾಕೆ ಜೋಡಿಸಿ ಒಂದು ಸೂಣ್ಣ ಚೂರಿ ಕುಡ ಅಳವಡಿಸಿದರೆ ಸಾಕು ಸೈಕಲ್ ಎಡೆಕುಂಟೆ ತಯಾರಾಗುತ್ತದೆ. ಹ್ಯಾಂಡಲ್ ಶೀಟ್ನ ಜಾಗದಲ್ಲಿ ವೆಲ್ಡಿಂಗ್ ಮಾಡಿ ಎರಡು ರೆಕ್ಕೆ ಕುಳ್ಳಿರಿಸಿ, ಪೈಪ್ಗೆ ನಟ್ ಅಳವಡಿಸಿ ಬೇರೆ ಬೇರೆ ಗಾತ್ರದ ಕುಂಟೆ ಅಳವಡಿಸಬಹುದು. ಸೈಕಲ್ ವೆಂಡರ್ ನ್ನು ರೈತರು ತಯಾರು ಮಾಡಿಕೊಂಡರೆ 500 ರೂಪಾಯಿ ಖರ್ಚಾಗುತ್ತದೆ. ಅದೇ ಕೃಷಿ ಇಲಾಖೆಯಿಂದ 2500 ರೂಪಾಯಿಯ ಸಬ್ಸಿಡಿ ಹಣ ಬಿಟ್ಟಾಗ 1800 ರೂಪಾಯಿವರೆಗೆ ಸಿಗುತ್ತದೆ.