belegala vime 2021-22ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ (crop insurance) ಯೋಜನೆ ಜಾರಿಗೊಳಿಸಲಾಗಿದ್ದು, ಬೆಳೆವಿಮೆ ಪಡೆಯಲು ಅರ್ಹ ರೈತರು ಅರ್ಜಿ ಸಲ್ಲಿಸಬಹುದು.
ಹಸಿ ಮೆಣಸಿನ ಕಾಯಿ (ನೀರಾವರಿ) ಮತ್ತು ದಾಳಿಂಬೆ ಬೆಳೆದಂತೆ ರೈತರು ಅರ್ಜಿ ಸಲ್ಲಿಸಬಹುದು. ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವ, ಬೆಳೆಸಾಲ ಪಡೆದ ಹಾಗೂ ಪಡೆಯದೆ ಇರುವ ರೈತರು belegala vime ಗೆ ಅರ್ಜಿ ಸಲ್ಲಿಸಬಹುದು.
ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಹಸಿ ಮೆಣಸಿನಕಾಯಿ (ನೀರಾವರಿಗೆ) 3550 ರೂರಪಾಯಿಗಳು ದಾಳಿಂಬೆ ಬೆಳೆಗೆ 6350 ರೂಪಾಯಿ ಗಳು ಇದೆ.
ಪ್ರತಿ ಹೆಕ್ಟೇರಿಗೆ ಬೆಳೆಯಲಾದ ಅಡಿಕೆಗೆ 6400 ರೂಪಾಯಿ ಪ್ರಿಮಿಯಂ ವಿಮೆ ಪಾವತಿಸಬೇಕು.1,28,000 ರೂಪಾಯಿ ವಿಮೆ ಮೊತ್ತವಿದೆ. ಅದೇ ರೀತಿಗೆ ಒಂದು ಹೆಕ್ಟೇರಿಗೆ ಬೆಳೆಯಲಾದ ದಾಳಿಂಬೆಗೆ 6350 ರೂಪಾಯಿ ರೈತರಿಗೆ ಪ್ರಿಮಿಯಂ ಇದ್ದು 1,17000 ವಿಮೆ ಹಣ ಸರ್ಕಾರ ರೈತರಿಗೆ ಪಾವತಿಸುವುದು. ಅದೇ ರೀತಿ ಒಂದು ಹೆಕ್ಟೇರಿಗೆ ಬೆಳೆಯಲಾದ ವೀಳ್ಳೆದೆಲೆಗೆ 5850 ರೂಪಾಯಿ ಪ್ರಿಮಿಯಂ ಇದೆ. ಸರ್ಕಾರ 1,17,000 ರೂಪಾಯಿ ಪಾವತಿಸಲಿದೆ. ಮೆಣಸಿನಕಾಯಿಗೆ ರೈತರು 2350 ರೂಪಾಯಿ ಪ್ರಿಮಿಯಂ (Premium ) ಪಾವತಿಸಬೇಕು. ಸರ್ಕಾರವು 47,000 ರೂಪಾಯಿ ವಿಮೆ ಮೊತ್ತ ನಿಗದಿಪಡಿಸಿದೆ. ಒಂದು ಹೆಕ್ಟೇರಿಗೆ ಮಾವು ಬೆಳೆದ ರೈತರು 4000 ರೂಪಾಯಿ ಪ್ರಿಮಿಯಂ ಪಾವತಿಸಿದರೆ ಸರ್ಕಾರು 80,000 ರೂಪಾಯಿ ವಿಮೆ ಮೊತ್ತ ನೀಡುತ್ತದೆ.
ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ವಿಮೆ ಮಾಡಿಸಬಹುದು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇದೇ ತಿಂಗಳ ಜೂನ್ 30ರೊಳಗೆ ವಿಮಾ ಮೊತ್ತ ಪಾವತಿಸಿ ಯೋಜನೆಯ ಲಾಭ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಏನಿದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ? (What is pradhan mantri fasal bima yojana)
ಬೆಳೆ ನಷ್ಟ ಅಥವಾ ಬೆಳೆ ವಿಫಲವಾದಾಗ ನಷ್ಟ ಹೊಂದಿದ ರೈತರ ಕೈ ಹಿಡಿಯಲು ಸರಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಗಳೊಳಗಾಗಿ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ರೈತರು ಬೆಳೆವಾರು ವಿಮಾ ಮೊತ್ತ ಹಾಗೂ ಉಳಿದ ಬೆಳೆಗಳ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ನೋಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಲು ಕೋರಲಾಗಿದೆ.