ಬೆಳೆ ವಿಮೆ ಹಣ ಜಮೆಯಾಗುತ್ತೋ ಇಲ್ಲವೋ ಇಲ್ಲೇ ಚೆಕ್ ಮಾಡಿ

Written by Ramlinganna

Published on:

Belevime will be credit check : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2026-27ನೇ ಸಾಲಿಗೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಅರ್ಜಿಯ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಬೆಳೆ ವಿಮೆ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ನೀವು ಪಾವತಿಸಿದ ಹಣ ಪಾವತಿಯಾಗಿದೆಯೋ ಇಲ್ಲವೋ ಎಂಬುದನ್ನು ನಿಮ್ಮ ಬಳಿಯಿರುವ ಮೊಬೈಲನಲ್ಲಿ ಒಂದೇ ನಿಮಿಷಯದಲ್ಲಿ ಚೆಕ್ ಮಾಡಬಹುದು ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Belevime will be credit check ಬೆಳೆ ವಿಮೆ ಹಣ ಪಾವತಿಯಾಗಿದೆಯ ಇಲ್ಲವೋ ಚೆಕ್ ಮಾಡುವುದು ಹೇಗೆ ?

ಬೆಳೆ ವಿಮೆಯ ಹಣ ಪಾವತಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಋತು ಆಯ್ಕೆಯ ಎದುರುಗಡೆ Kharif  ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ /Go ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Check Status ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು Mobile No ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಬರೆಯಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕುತ ಇದಾದ ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿನಿಮಗೆ ಪ್ರೊಪಸಲ್ ನಂಬರ್, ಮೊಬೈಲ್ ನಂಬರ್ ಕೊನೆಯ ಮೂರು ನಂಬರ್, ನಿಮ್ಮ ಹೆಸರು, ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಇದಾದ ನಂತರ ಮುಂದಿರುವ Select ಮೇಲೆ ಕ್ಲಿಕ್ ಮಾಡಬೇಕು.

ನಿಮ್ಮ ಅರ್ಜಿಯ ಸ್ಟೇಟಸ್ ಕಾಣಿಸುತ್ತದೆ. ಅರ್ಜಿ ಬೆಳೆಯ ನೋಂದಣಿ ಪ್ರಗತಿಯಲ್ಲಿದೆಯೋ ಅರ್ಜಿಯನ್ನು ತೆಗೆದು ಹಾಕಲಾಗಿದೆಯೇ ಅಥವಾ ಸ್ವೀಕೃತವಾಗಿದೆಯೋ ಎಂಬ ಮಾಹಿತಿ ಕಾಣಿಸುತ್ತದೆ. ನೀವು ಬೆಳೆ ವಿಮೆಯನ್ನು ಎಲ್ಲಿ ಪಾವತಿಸಿದ್ದೀರಿ. ನೀವು ಪಾವತಿಸಿದ ಪೇಮೆಂಟ್ ಸಕ್ಸೆಸ್ ಫುಲ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ View Detailಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರು, ವಿಳಾಸ, ಸರ್ವೆ ನಂಬರ್, ಯಾವ ಬೆಳೆಗೆ ನೀವು ವಿಮೆ ಪಾವತಿಸಿದ್ದೀರಿ ನೀವು ಎಷ್ಟು ಬೆಳೆ ವಿಮೆ ಹಣ ಪಾವತಿಸಿದ್ದೀರಿ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿಯೂ ಕಾಣಿಸುತ್ತದೆ. ಬಿತ್ತನೆ ಮಾಡಿದ ದಿನಾಂಕ ಮಾಹಿತಿಯೂ ನಿಮಗೆ ಕಾಣಿಸುತ್ತದೆ. ಈ ಆಧಾರದ ಮೇಲೆ ನಿಮ್ಮ ಅರ್ಜಿ ಯಾವ ಹಂತದಲ್ಲಿಯೇ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಬೆಳೆ ವಿಮೆ ಜಮೆಯಾಗಬೇಕಾದರೆ ಏನು ಮಾಡಬೇಕು ?

ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಾದರೆ ವಿಮೆ ಹಣ ಪಾವತಿಸಿದ ನಂತರ ಅಥವಾ ಮೊದಲು ಬೆಳೆ ಸಮೀಕ್ಷೆ ಮಾಡಬೇಕು. ಬೆಳೆ ವಿಮೆ ಪಾವತಿಸಿದ ನಂತರ ಒಂದು ವೇಳೆ ನಿಮ್ಮ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಅಂದರೆ ಅತೀವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾಳಾದರೆ ನೀವು ಯಾವ ಬೆಳೆ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ  ಆ ವಿಮಾ ಕಂಪನಿಗೆ ಕರೆ ಮಾಡಬೇಕು. ಆಗ ಬೆಳೆ ವಿಮಾ ಕಂಪನಿಯ ಪ್ರತಿನಿಧಿ ನಿಮ್ಮ ಜಮೀನಿಗೆ ಬರುತ್ತಾರೆ.

ಇದನ್ನೂ ಓದಿ : ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಕೊರೆಯಲು 3.50 ಲಕ್ಷ ರೂಪಾಯಿ ಸಬ್ಸಿಡಿ

ನಿಮ್ಮ ಬೆಳೆಯನ್ನು ಪರಿಶೀಲಿಸುತ್ತಾರೆ. ಅಂದರೆ ನಿಮ್ಮ ಬೆಳೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಚೆಕ್ ಮಾಡುತ್ತಾರೆ. ನಂತರ ಮೇಲಧಿಕಾರಿಗಳಿಗೆ ಅವರು ವರದಿ ಸಲ್ಲಿಸುತ್ತಾರೆ. ಇದಾದ ನಂತರ  ಬೆಳೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆಯೋ ಆ ಆಧಾರದ ಮೇಲೆ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಒಂದು ವೇಳೆ ಬೆಳ ವಿಮೆ ಹಣ ಜಮೆಯಾಗದಿದ್ದರೆ ನೀವು ವಿಮಾ ಕಂಪನಿಯ ಸಹಾಯವಾಣಿ ನಂಬರಿಗೂ ಕರೆ ಮಾಡಿ ವಿಚಾರಿಸಬಹುದು.

Leave a Comment