Crop loan is there : ರೈತ ಬಾಂಧವರು ಈಗ ತಮ್ಮಲ್ಲಿರುವ ಮೊಬೈಲ್ ನಲ್ಲಿಯೇ ನಿಮ್ಮ ಜಮೀನಿನ ಮೇಲೆ ಸಾಲವಿದೆಯೇ ಅಥವಾ ನಿಮಗೆ ಗೊತ್ತಿಲ್ಲದೆ ಹಿಂದೆ ಯಾರಾದರೂ ಸಾಲ ಪಡೆದಿದ್ದಾರೆ ಸಾಲ ತೀರಿಸಿದರೂ ಇನ್ನೂ ಸಾಲವಿದೆಯೆಂದು ಕಾಣಿಸುತ್ತಿದೆಯೇ ಎಂಬುದು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Crop loan is there ನಿಮ್ಮ ಜಮೀನಿನ ಮೇಲೆ ಸಾಲವಿದೆಯೇ ಚೆಕ್ ಮಾಡುವುದು ಹೇಗೆ ?
ರೈತ ಬಾಂಧವರು ತಮ್ಮ ಹೆಸರಿಗಿರುವ ಜಮೀನಿನ ಮೇಲೆ ಸಾಲ ಇದೆಯೇ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ವೀವ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ Current Year, Old Year, Mr. Mutation Status, Khata Extract, Survey Document Akarband ಎಂಬ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು Select Survey Number ಕೆಳಗಡೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಜಮೀನು ಇರುವ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು Go ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು ಇದಾ ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
Crop loan is there ಸರ್ವೆ ನಂಬರಿನಲ್ಲಿ ಯಾವ ಯಾವ ಮಾಹಿತಿಗಳು ಇರುತ್ತವೆ ?
ಅಲ್ಲಿ ನಿಮ್ಮ ನೀವು ಆಯ್ಕೆ ಮಾಡಿಕೊಂಡ ಜಮೀನಿನ ಐಡಿ ನಂಬರ್ ಕಾಣಿಸುತ್ತದೆ. ಅದರ ಕೆಳಗಡೆ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬ ಹೆಸರುಗಳು ಕಾಣಿಸುತ್ತವೆ. ನಂತರ ನೀವು View ಮೇಲೆ ಕ್ಲಿಕ್ ಮಾಡಬೇಕು. ಆಗ ಪಹಣಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಎಖರೆ ಜಮೀನಿಗೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ನಂತರ ಆ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ ಆ ರೈತರ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ. ಒಂದು ವೇಳೆ ನೀವು ಬ್ಯಾಂಕಿನಿಂದ ಬೆಳೆ ಸಾಲ ಪಡೆದಿದ್ದರೆ ಅಲ್ಲಿ ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದೀರಿ ಹಾಗೂ ಎಷ್ಟು ರೂಪಾಯಿ ಸಾಲ ಪಡೆದಿದ್ದೀರಿ ಯಾವಾಗ ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಯಾವ ಬೆಳೆ ಬಿತ್ತಿದ್ದೀರಿ ಎಂಬ ಮಾಹಿತಿಯೂ ಅಲ್ಲಿ ಕಾಣಿಸುತ್ತದೆ. ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯೂ ಕಾಣಿಸುತ್ತದೆ.
ಇದನ್ನೂ ಓದಿ : ಇ ಸ್ವತು ನೀಡಲು ಅರ್ಜಿ ಆರಂಭ ನಿಮ್ಮ ಇ ಸ್ವತ್ತು ದಾಖಲೆ ಹೀಗೆ ಡೌನ್ಲೋಡ್ ಮಾಡಿ
ಇದರೊಂದಿಗೆ ನಿಮ್ಮ ಸರ್ವೆ ನಂಬರ್ ನಲ್ಲಿ ಯಾವ ಯಾವ ರೈತರಿದ್ದಾರೆ. ಆ ರೈತರ ಹೆಸರು ಯಾರೊಂದಿಗಾದರೂ ಜಂಟಿ ಇದೆಯೋ ಎಂಬ ಮಾಹಿತಿ ಸಹ ನಿಮಗೆ ಕಾಣಿಸುತ್ತದೆ. ನೀವು ನಿಮ್ಮ ಮೊಬೈಲ್ ನಲ್ಲಿ ಆಗಾಗ ಈ ರೀತಿ ಪರಿಶೀಲಿಸಿಕೊಳ್ಳಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಕೇವಲ ಇಲ್ಲಿ ತಿಳಿಸಿದ ಮಾಹಿತಿಯಂತೆ ನೀವು ಅತ್ಯಂತ ಸುಲಭವಾಗಿ ನಿಮ್ಮ ಜಮೀನಿನ ಮಾಹಿತಿ ಪಡೆಯಬಹುದು.





