ಗೃಹಲಕ್ಷ್ಮೀ ಹಣ ನಿಮಗೆಷ್ಟು ಕಂತು ಜಮೆಯಾಯಿತು ? ಸ್ಟೇಟಸ್ ಹೀಗೆ ಚೆಕ್ ಮಾಡಿ

Written by Ramlinganna

Published on:

Grahalakshmi amount credit check : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಹಬ್ಬಕ್ಕೆ ಅತ್ಯಂತ ಸಂತಸದ ಸುದ್ದಿ ನೀಡಲಾಗಿತ್ತು. ಹೌದು ಕಳೆದ ಎರಡು ದಿನಗಳ ಹಿಂದೆ ಗೃಹಲಕ್ಷ್ಮೀ ಯೋಜನೆಯ 34, 35 ಹಾಗೂ 36ನೇ ಕಂತಿನ ಹಣ ಒಟ್ಟು 6 ಸಾವಿರ ರೂಪಾಯಿ  ದೀಪಾವಳಿ ಹಬ್ಬಕ್ಕೆ ಜಮೆ ಮಾಡಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ ಗೂಳಿಗೌಡ ತಿಳಿಸಿದ್ದರು.

Grahalakshmi amount credit check  ಗೃಹಲಕ್ಷ್ಮೀ ಯೋಜನೆಯ ಎಷ್ಟು ಹಣ ಬಿಡುಗಡೆಯಾಗಿದೆ ?

ಗೃಹಲಕ್ಷ್ಮೀ ಯೋಜನೆಯ ಮೂರು ಕಂತು ಸೇರಿ 7405.86 ಕೋಟಿ ರೂಪಾಯಿ ಮೊತ್ತವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುದವಾರ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದರು. ಹೌದು, ಇದುವರೆಗೆ 33 ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಈಗ 34ನೇ ಕಂತಿನ ಹಣ 2500 ಕೋಟಿ ರೂಪಾಯಿ, 35ನೇ ಕಂತಿನ 2452.93 ಕೋಟಿ ರೂಪಾಯಿ ಅದೇ ರೀತಿ 36ನೇ ಕಂತಿನ 2452.93 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಪ್ರತಿ ಫಲಾನುಭವಿಗೆ ಇಲ್ಲಿಯವರೆಗೆ 72 ಸಾವಿರ ರೂಪಾಯಿಯಂತೆ 1.24 ಕೋಟಿ ಮಹಿಳೆಯರಿಗೆ 86838.36 ಕೋಟಿ ರೂಪಾಯಿ ಮಹಿಳೆಯರ ಖಾತೆಗೆ ಜಮೆಯಾಗಿದೆ.

ನಿಮ್ಮ ಖಾತೆಗೆ ಇಲ್ಲಿಯವರೆಗೆ ಎಷ್ಟು ಕಂತುಗಳ ಹಣ ಜಮೆಯಾಗಿದೆ ಎಷ್ಟು ಕಂತುಗಳ ಹಣ ಸ್ಥಗಿತಗೊಳಿಸಲಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮ ಖಾತೆಗೆ ಎಷ್ಟು ಕಂತುಗಳು ಜಮೆಯಾಗಿದೆ ? ಹೀಗೆ ಚೆಕ್ ಮಾಡಿ

ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಎಷ್ಟು ಕಂತುಗಳ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.dbtkarnataka&hl=en_IN

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಡಿಬಿಟಿ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಸಂಖ್ಯೆ ಬರುತ್ತದೆ. ಈ ಓಟಿಪಿ ಸಂಖ್ಯೆನ್ನು ನಮೂದಿಸಿದ ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಗೃಹಲಕ್ಷ್ಮೀ ಬಟನ್ ಒತ್ತಿದರೆ ಸಾಕು ನಿಮ್ಮ ಖಾತೆಗೆ  ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯಿಂದ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.

ಇಲ್ಲಿಯವರೆಗೆ ನಿಮಗೆಷ್ಟು ಕಂತುಗಳು ಬಂದಿವೆ? ಎಷ್ಟು ಹಣ ಜಮೆಯಾಗಿದೆ?

ಗೃಹಲಕ್ಷ್ಮೀ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಒಟ್ಟು 36 ಕಂತುಗಳ ಹಣ ಜಮೆಯಾಗಿದೆ. ಹೌದು, 36 ಕಂತುಗಳು ಒಟ್ಟು ಹಣ 72 ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.

 ಉಚಿತ ಸಹಾಯವಾಣಿ ನಂಬರ್ 181

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ. ಹೌದು, 181 ಎಂಬ ಸಂಖ್ಯೆಗೆ ಕರೆ ಮಾಡಿದರೆ ಸಾಕು ಎಲ್ಲಾ ಮಾಹಿತಿ ನಿಮಗೆ ಸಿಗಲಿದೆ.

ಇದನ್ನೂ ಓದಿ : ಇ ಸ್ವತು ನೀಡಲು ಅರ್ಜಿ ಆರಂಭ ನಿಮ್ಮ ಇ ಸ್ವತ್ತು ದಾಖಲೆ ಹೀಗೆ ಡೌನ್ಲೋಡ್ ಮಾಡಿ

ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೋ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಇಲ್ಲವೆ ತೆರಿಗೆ ಪಾವತಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿ ಗೃಹಲಕ್ಷ್ಮೀ ಹಣ ನಿಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಖರವಾದ ಮಾಹಿತಿ ಪಡೆಯಬಹುದು.

ಕೆಲವು ಮಹಿಳೆಯರಿಗೇಕೆ ಗೃಹಲಕ್ಷ್ಮೀ ಹಣ ಜಮೆಯಾಗುತ್ತಿಲ್ಲ

ಗೃಹಲಕ್ಷ್ಮೀ ಯೋಜನೆಯ ಹಣ ಕೆಲವು ಮಹಿಳೆಯರಿಗೆ ಜಮೆಯಾಗುತ್ತಿಲ್ಲ. ಏಕೆಂದರೆ ಅವರು ಇಕೆವೈಸಿ ಮಾಡಿಸಿಲ್ಲದ್ದರಿಂದ ಅವರ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಹಾಗಾಗಿ ಯಾರು ಯಾರು ಇನ್ನೂ ಇಕೆವೈಸಿ ಮಾಡಿಸಿಲ್ಲವೋ ಅವರು ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಕಂತುಗಳ ಹಣದಿಂದಲೂ ವಂಚಿತರಾಗುವ ಸಾಧ್ಯತೆಯಿದೆ.

Leave a Comment