ಗೃಹಲಕ್ಷ್ಮೀ 3 ಕಂತಿನ ಹಣ 6 ಸಾವಿರ ರೂಪಾಯಿ ಈ ಮಹಿಳೆಯರ ಖಾತೆಗೆ ಜಮೆ

Written by Ramlinganna

Published on:

Gruhalakshmi three installment released : ಗೃಹಲಕ್ಷ್ಮೀ ಯೋಜನೆಯ 34, 35 ಹಾಗೂ 36ನೇ ಕಂತುಗಳನ್ನು ಒಳಗೊಂಡ ಮೂರು ಕಂತಿನ 7405.86 ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವರು ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ ಗೂಳಿಗೌಡ ಅವರು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಇದುವರೆಗೂ 33 ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಈಗ 34ನೇ ಕಂತಿನ 2500 ಕೋಟಿ ರೂಪಾಯಿ 35ನೇ ಕಂತಿನ 2452.93 ಕೋಟಿ ರೂಪಾಯಿ ಮತ್ತು 36ನೇ ಕಂತಿನ 2452 ಕೋಟಿ ರೂಪಾಯಿ ಹಣ ಒಮ್ಮೆಲೆ ಬಿಡುಗಡೆಯಾಗಿದೆ.

ಇದರಿಂದ ಅಕ್ಟೋಬರ್ ವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ 86838.36 ಕೋಟಿ ರೂಪಾಯಿ ಗೃಹಲಕ್ಷ್ಮೀ ಹಣ ತಲುಪಲಿದೆ. ಈ ಮೂಲಕ ಪ್ರತಿ ಭಾನುಭವಿಗಳಿಗೆ ಒಟ್ಟಾರೆ 72 ಸಾವಿರ ರೂಪಾಯಿ ತಲುಪಿದಂತಾಗಲಿದೆ. ತಕ್ಷಣವೇ ಖಚಾದೆ 2 ರಿಂದ ಹಣ ಬಿಡುಗಡೆ ಮಾಡುವಂತೆ ಎಲ್ಲಾ 31 ಜಿಲ್ಲೆಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬರ ಹಾಗೂ ದರ ಏರಿಕೆಯ ಈ ಸಂದರ್ಭದಲ್ಲಿ ಗೃಹಲಕ್ಷ್ಮೀ ಹಣ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ನೀಡಲಿದೆ. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡಿರುವ ಡಿ.ಕೆ. ಶಿವಕುಮಾರ ಅವರಿಗೆ ದಿನೇಶ ಧನ್ಯವಾದ  ತಿಳಿಸಿದ್ದಾರೆ.

Gruhalakshmi three installment released ಮೂರು ಕಂತಿನ ಗೃಹಲಕ್ಷ್ಮೀ ಹಣ

ಮೂರು ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣ ಒಟ್ಟಿಗೆ ಜಮೆಯಾಗುವುದರಿಂದ ಫಲಾನುಭವಿಗಳಿಗೆ ದೀಪಾವಳಿ ಹಬ್ಬಕ್ಕೆ ಸಂಭ್ರಮ ಹೆಚ್ಚಾಗಿದೆ. ಹೌದು, ಬರಗಾಲದ ಸಮಯದಲ್ಲಿ ಮಹಿಳೆಯರಿಗೆ ಅತ್ಯಂತ ಸಂತಸದ ಸುದ್ದಿ ಇದಾಗಿದೆ. ದೀಪಾವಳಿ ಹಬ್ಬಕ್ಕೆ ಭರ್ಜರಿಯಾಗಿ ಮಹಿಳೆಯರು ಖರೀದಿ ಮಾಡಬಹುದು. ಒಟ್ಟಿಗೆ 6 ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಮೂರು ಕಂತಿನ ಹಣ ಒಟ್ಟಿಗೆ ಬಿಡುಗಡೆ ಮಾಡಿದ್ದರಿಂದ ಮಹಿಳೆಯರ ಮುಖದಲ್ಲಿ ಸಂತಸ ಮೂಡಿದೆ.

ಯಾರು ಯಾರಿಗೆ ಹಣ ಜಮೆಯಾಗಿದೆ

ಗೃಹಲಕ್ಷ್ಮೀ ಯೋಜನೆಯ 34, 35 ಹಾಗೂ 36 ನೇ ಕಂತಿನ ಹಣ ಯಾವ ಯಾವ ಮಹಿಳೆಯರ ಖಾತೆಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅಧು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಮಾಹಿತಿ.

ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಗೃಹಲಕ್ಷ್ಮೀ ಯೋಜನೆಯ 33ನೇ ಕಂತಿನ ಹಣ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು

https://play.google.com/store/apps/details?id=com.dbtkarnataka&hl=en_IN

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಡಿಬಿಟಿ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಸಂಖ್ಯೆ ಬರುತ್ತದೆ. ಈ ಓಟಿಪಿ ಸಂಖ್ಯೆನ್ನು ನಮೂದಿಸಿದ ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಗೃಹಲಕ್ಷ್ಮೀ ಬಟನ್ ಒತ್ತಿದರೆ ಸಾಕು ನಿಮ್ಮ ಖಾತೆಗೆ  ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯಿಂದ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.

ಇಲ್ಲಿಯವರೆಗೆ ನಿಮಗೆಷ್ಟು ಕಂತುಗಳು ಬಂದಿವೆ? ಎಷ್ಟು ಹಣ ಜಮೆಯಾಗಿದೆ?

ಗೃಹಲಕ್ಷ್ಮೀ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಒಟ್ಟು 36 ಕಂತುಗಳ ಹಣ ಜಮೆಯಾಗಿದೆ. ಹೌದು, 36 ಕಂತುಗಳು ಒಟ್ಟು ಹಣ 72 ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.

ಇದನ್ನೂ ಓದಿ ಇ ಸ್ವತು ನೀಡಲು ಅರ್ಜಿ ಆರಂಭ ನಿಮ್ಮ ಇ ಸ್ವತ್ತು ದಾಖಲೆ ಹೀಗೆ ಡೌನ್ಲೋಡ್ ಮಾಡಿ

Leave a Comment