ನಾಳೆ ಈ ಪಟ್ಟಿಯಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆ

Written by Ramlinganna

Updated on:

Tomarrow pmkisan fund release : ಪಿಎಂ ಕಿಸಾನ್ ಫಲಾನುಭವಿಗಳಿಗೆ ಸಂತಸದ ಸುದ್ದಿ. ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ನಾಳೆ ಅಕ್ಟೋಬರ್ 30 ರಂದು ರೈತರ ಖಾತೆಗೆ ಜಮೆಯಾಗಲಿದೆ.

ಹೌದು, ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವನ್ನು ಗುಜರಾತ ರಾಜ್ಯದ ಬನಸ್ಕಂತಾ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುವ ಮೂಲಕ ದೇಶದ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಿದ್ದಾರೆ.

ದೇಶದ 9.34 ಕೋಟಿಗಿಂತ ಅಧಿಕ ರೈತರ ಖಾತೆಗೆ 18680 ಕೋಟಿ ಹಣವನ್ನು ರೈತರ ಖಾತೆಗೆ ಜಮೆಯಾಗಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿಯೇ ರೈತರ ಖಾತೆಗೆ ಡಿಬಿಟಿ ಮೂಲಕ ಜಮೆಯಾಗಲಿದೆ.

Tomarrow pmkisan fund release ಯಾವ ರೈತರ ಖಾತೆಗೆ ಹಣ ಜಮೆಯಾಗಲಿದೆ ?

ಪಿಎಂ ಕಿಸಾನ್ 24ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ರಾಜ್ಯವನ್ನು ಅಂದರೆ ಕರ್ನಾಟಕ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ಯಾವ ಜಿಲ್ಲೆಗೆ ಸಂಬಂಧಿಸಿದ್ದೀರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟಾದನಂತರ ನೀವು ಅಲ್ಲಿ ಕಾಣುವ Get Report ಮೇಲೆ ಕ್ಲಿಕ್ ಮಾಡಬೇಕು. ಆಗ  ನಿಮ್ಮ ಊರಿನಲ್ಲಿ ಯಾರು ಯಾರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿದ್ದಾರೆ ಅವರ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬ ಆಧಾರದ ಮೇಲೆ ಮುಂದಿನ ಪೇಜ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.

ಇಕೆವೈಸಿ ಮಾಡಿಸದಿದ್ದರೆ ಇಂದೇ ಇಕೆವೈಸಿ ಮಾಡಿಸಿಕೊಳ್ಳಿ

ಪಿಎಂ ಕಿಸಾನ್ ಫಲಾನುಭವಿಗಳಿಗೆ ಇನ್ನೂ ಕಾಲಾವಕಾಶವಿದೆ. ಯಾರು ಯಾರು ಇಕೆವೈಸಿ ಮಾಡಿಸಿಲ್ಲವೋ ಅವರು ತಮ್ಮ ಹತ್ತಿರದ ಸಿ.ಎಸ್.ಸಿ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ : ನಿಮ್ಮ ಜಮೀನಿನ ಟೊಂಚ್ ನಕ್ಷೆ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ

ಇಕೆವೈಸಿ ಮಾಡಿಸಿದರೆ ಮಾತ್ರ ನಿಮಗೆ ಮುಂದಿನ ಕಂತು ಅಂದರೆ 24ನೇ ಕಂತು ಅಕ್ಟೋಬರ್ 30 ರಂದು ನಿಮ್ಮ ಖಾತೆಗೆ ಜಮೆಯಾಗುತ್ತದೆ.

2019 ರ ನಂತರ ಜಮೀನು ರೈತರ ಹೆಸರಿಗಿದ್ದರೆ ಜಮೆಯಾಗಲ್ಲ

ಹೌದು, ಪಿಎಂ ಕಿಸಾನ್ ಯೋಜನೆ 2019 ರ ಮೊದಲು ತಮ್ಮ ಹೆಸರಿನ ಮೇಲೆ ಜಮೀನಿದ್ದರೆ ಮಾತ್ರ ಅವರು ಅರ್ಹತೆ ಪಡೆದಿರುತ್ತಾರೆ. ಏಕೆಂದರೆ 01-02-2019 ರಂದು ಈ ಯೋಜನೆ ಜಾರಿಗೆ ಬಂದಿದೆ. 2019 ರ ನಂತರ ರೈತರ ಹೆಸರಿಗೆ ಜಮೀನು ವರ್ಗಾವಣೆಯಾಗಿದ್ದರೆ ಅವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಹೌದು, ಎಲ್ಲಾ ಅರ್ಹತೆ ಪಡೆದಿದ್ದರೂ ಸಹಿತ ಅವರ ಖಾತೆಗೆ ಪಿಎಂ ಕಿಸಾನ್ ಯೋಜನೆಯ ಹಣ ಅವರ ಖಾತೆಗೆ ಜಮೆಯಾಗುವುದಿಲ್ಲ.  2019 ರ ಮೊದಲು ರೈತರ ಹೆಸರಿಗೆ ಜಮೀನಿದ್ದರೂ ಸಹ ಅವರು ಅರ್ಹತೆ ಪಡೆದಿರಬೇಕು. ಅವರ ಕುಟುಂಬದಲ್ಲಿ ಸರ್ಕಾರಿ ನೌಕರರಿರಬಾರದು. ಹಾಗೂ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಇದರೊಂದಿಗೆ ಪೆನ್ಶನ್ ಪಡೆಯುವವರಿದ್ದರೆ ಅವರ ಖಾತೆಗೆ ಹಣ ಜಮೆಯಾಗುವುದಿಲ್ಲ. ಇಕೆವೈಸಿ ಆಗಿರಬೇಕು. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್  ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಪಹಣಿಯಲ್ಲಿ ಹೆಸರು ಒಂದೇ ರೀತಿಯಾಗಿರಬೇಕು.

Leave a Comment