Check neighbor land here : ರೈತರಿಗೆ ಗುಡ್ ನ್ಯೂಸ್, ಈಗ ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಹೌದು, ಇದಕ್ಕಾಗಿ ನೀವು ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಯಾವ ಕಚೇರಿಗೆ ಹೋಗಬೇಕಿಲ್ಲ. ನೀವು ಒಂದೇ ನಿಮಿಷದಲ್ಲಿ ತಮ್ಮ ಬಳಿಯಿರುವ ಮೊಬೈಲ್ ಚಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.
Check neighbor land here ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಎಕರೆ ಜಮೀನಿದೆ ಹೀಗೆ ಚೆಕ್ ಮಾಡಿ
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅಕ್ಕಪಕ್ಕದ ರೈತರ ಹೆಸರಿಗಿರುವ ಜಮೀನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Bhoomi Online Land Records View ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ (District) ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು (Taluka) ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ (Hobli) ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಊರು (village) ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು ನಂತರ Go ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ surnoc ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿಯೂ ಸಹ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಇದಾದ ನಂತರ ನೀವು ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಂದರೆ ನಿಮ್ಮ ಜಮೀನಿನ ಪಹಣಿ ಕಾಣಿಸುತ್ತದೆ. ಅಲ್ಲಿ ನೀವು ನಮೂದಿಸಿ ಸರ್ವೆ ನಂಬರ್ ಅಕ್ಕಪಕ್ಕದ ಮಾಲಿಕರ ಹೆಸರು ಕಾಣಿಸುತ್ತದೆ. ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯೂಕಾಣಿಸುತ್ತದೆ. ಇದರೊಂದಿಗೆ ಆ ಜಮೀನಿನ ಮಾಲಿಕರೊಂದಿಗೆ ಯಾವ ಯಾವ ರೈತರ ಹೆಸರು ಜಂಟಿಯಾಗಿದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಆ ಜಮೀನಿಗೆ ಮೊಟೇಶನ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇಲ್ಲಿ ಕಾಣಿಸುತ್ತದೆ. ಇದರೊಂದಿಗೆ ಮುಟೇಶನ್ ನಂಬರ್ ಯಾವ ವರ್ಷದಲ್ಲಿ ಮುಟೇಶನ್ ಆಗಿದೆ ಎಂಬ ಮಾಹಿತಿ ಕಾಣಿಸಲಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಅಥವಾ ಹಿಂಗಾರು ಹಂಗಾಮಿಗೆ ಯಾವ ರೈತರು ಯಾವ ಬೆಳೆ ಹಾಕಿದ್ದರು ಎಂಬ ಮಾಹಿತಿಯೂ ರೈತರಿಗೆ ಕಾಣಿಸಲಿದೆ.
ಒಂದು ವೇಳೆ ಜಮೀನಿನ ಮಾಲಿಕರು ಅಂದರೆ ಅದೇ ರೈತರಾಗಲಿ ಅಥವಾ ಅಕ್ಕಪಕ್ಕದ ರೈತರಾಗಲಿ ಸಾಲ ಪಡೆದಿದ್ದಾರೆಯೇ ಒಂದು ವೇಳೆ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಬೆಳೆ ಸಾಲ ಪಡೆದಿದ್ದಾರೆ ಎಷ್ಟು ಬೆಳೆ ಸಾಲ ಪುಡೆದಿದ್ದಾರೆ ಯಾವ ಬ್ಯಾಂಕಿನಿಂದ ಬೆಳೆ ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ರೈತರಿಗೆ ಕಾಣಿಸುತ್ತದೆ.
ಇದನ್ನೂ ಓದಿ ಟ್ರ್ಯಾಕ್ಟರ್, ಹನಿ ನೀರಾವರಿಗೆ ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನ
ಮೇಲೆ ತಿಳಿಸಿದ ಮಾಹಿತಿಯಂತೆ ಸುಲಭವಾಗಿ ನೀವು ನಿಮ್ಮ ಎಲ್ಲಾ ಸರ್ವೆ ನಂಬರ್ ಅಕ್ಕಪಕ್ಕದ ರೈತರ ಹೆಸರು,ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದೆಲ್ಲಾ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಪಡೆಯಬಹುದು.
ಇದಕ್ಕಾಗಿ ರೈತರಿಗೆ ಹೆಚ್ಚು ಜ್ಞಾನದ ಅವಶ್ಯಕತೆಯೂ ಇಲ್ಲ. ಕೇವಲ ಮೊಬೈಲ್ ಬಳಕೆ ಮಾಡುವುದು ಬಂದರೆ ಸಾಕು, ಮೇಲೆ ತಿಳಿಸಿದ ಮಾಹಿತಿಯನ್ನು ಒಂದೊಂದಾಗಿ ಅತೀ ಸುಲಭವಾಗಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ಮೊಬೈಲ್ ನಲ್ಲಿ ಪಡೆಯಬಹುದು.





