ರೈತರಿಗೆ ಇ-ಕೆವೈಸಿ ಮಾಡಿಸಲು ಏಪ್ರೀಲ್ 30 ರವರೆಗೆ ಅವಕಾಶ

Written by Ramlinganna

Published on:

EKYC process complete soon :  ರೈತರು ಕೃಷಿ ಇಲಾಖೆಯ ಸೌಲಭ್ಯ ಪಡೆದುಕೊಳ್ಳಲು ಇಕೆವೈಸಿ ಮಾಡಿಸಿಕೊಳ್ಳಲು ಕಡ್ಡಾಯವಾಗಿದೆ.

ಹೌದು, ರೈತರು ಏಪ್ರೀಲ್ 30 ರವರೆಗೆ ರೈತರು ಇಕೆವೈಸಿ ಮಾಡಿಸುವ ಗಡುವನ್ನು ವಿಸ್ತರಿಸಲಾಗಿದ್ದು, ಈ ಕಾಲಾವಧಿಯಲ್ಲಿ ಕಡ್ಡಾಯವಾಗಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸದಿದ್ದರೆ ರೈತರು ಪಿಎಂ ಕಿಸಾನ್ ಹಣ, ಬೆಳೆ ವಿಮೆ ಹಣ, ಬೆಳೆ ಹಾನಿ ಪರಿಹಾರ ಸೇರಿದಂತೆ ಇತರ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ರೈತರು ಈ ಕೆಳಗೆ ನೀಡಿದ ಮಾಹಿತಿಯಂತೆ ಇಕೆವೈಸಿ ಮಾಡಿಸಿಕೊಳ್ಳಲು ಕೋರಲಾಗಿದೆ.

ಇಕೆವೈಸಿ ಪ್ರಕ್ರಿಕೆಯೆ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ಒಂದು ಕೇಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಸೃಜಿಸಲಾಗುವುದು. ಈ ರೀತಿಯಾಗಿ ಸೃಜಿಸಲಾದ ಕೇಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು. ಈ ಸಂಖ್ಯೆ  ಪಡೆದು ರೈತರು ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆ, ಪಿಎಂ ಕಿಸಾನ್ ಸೇರಿದಂತೆ ಸರ್ಕಾರದ ಇತರ ಎಲ್ಲಾ ಯೋಜನೆಗಳಲ್ಲೂ ಕಡ್ಡಾಯವಾಗಿ ಬಳಸಲಾಗುತ್ತದೆ. ಇದೇ ಕಾರಣಕ್ಕೆ ತಕ್ಷಣವೇ ರೈತರು ಇಕೆವೈಸಿ ಮತ್ತು ಡಿಜಿಟಲ್ ಸಮ್ಮತಿ ನೀಡಬೇಕು ಎಂದು ಕೃಷಿ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಫೆಬ್ರವರಿ 26 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಬಹುತೇಕ ರೈತರು ಇನ್ನೂ ಇಕೆವೈಸಿ ಮಾಡಿಸಿಲ್ಲ. ಹಾಗಾಗಿ ಮತ್ತೆ  ರೈತರಿಗಾಗಿ ಗಡವು ವಿಸ್ತರಿಸಲಾಗಿದೆ.

EKYC process complete soon  ಇಕೆವೈಸಿ ಕೂಡಲೇ ಮಾಡಿಸಿ

ಫ್ರೂಟ್ಸ್ ಐಡಿಯನ್ನು ಹೊಸದಾಗಿ ಸೃಜಿಸಲು ಹಾಗೂ ಈಗಾಗಲೇ ಐಡಿ ಹೊಂದಿರುವ ಫ್ರೂಟ್ಸ್ ಐಡಿ ನವೀಕರಣಕ್ಕಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬೇಕು. ತಮ್ಮ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಹಾಗೂ ಎಲ್ಲಾ ಪಹಣಿಗಳನ್ನು ತೆಗೆದುಕೊಂಡು ಹೋಗಿ ಕಡ್ಡಾಯವಾಗಿ ಇಕೆವೈಸಿ ಡಿಜಿಟಲ್ ಸಹಮತಿ ಪತ್ರ ನೀಡುವುದು ಹಾಗೂ ತಮ್ಮ ಎಲ್ಲಾ ಭೂ ಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್ಐಡಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳಲು ಕೃಷಿ ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೇಷ್ಮೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.

Check here FID Number ಆಧಾರ್ ನಂಬರ್ ಹಾಕಿ ಎಫ್ಐಡಿ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಆಧಾರ್ ನಂಬರ್ ಹಾಕಿ  ಮೊಬೈಲ್ ನಲ್ಲಿ ಎಫ್ಐಡಿ ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ತಂತ್ರಾಂಶದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಇದನ್ನೂ ಓದಿ ಗ್ರಾಮೀಣ ಆಸ್ತಿಗಳ ಫಾರ್ಮ 9, 11ಬಿ ಮೊಬೈಲ್ ನಲ್ಲೇ ಹೀಗೆ ಡೌನ್ಲೋಡ್ ಮಾಡಿ

ಅಲ್ಲಿ ಫಾರ್ಮರ್ಸ್ ಡಿಟೇಲ್ಸ್ ಕೆಳಗಡೆ FruitID ಇರುತ್ತದೆ. ನಿಮ್ಮ ಎಫ್ಐಡಿ ಸಂಖ್ಯೆಯು  FID ಇದ್ದು, ಅದರ ಮುಂದುಗಡೆ ಕೆಲವು ಅಂಕಿಗಳು ಇರುತ್ತದೆ. ಉದಾಹರಣೆಗೆ FID0395494984848484  ಹೀಗೆ ಇರುತ್ತದೆ.  ಅದರ ಕೆಳಗಡೆ ಪಿಎಂಕೆಐಡಿ ಇರುತ್ತದೆ.

Check FID Number ಎಫ್ಐಡಿ ಆಗದಿದ್ದರೆ ರೈತರೇನು ಮಾಡಬೇಕು?

ಯಾವ ರೈತರಿಗೆ ಎಫ್ಐಡಿ ಆಗಿಲ್ಲವೋ ಆ ರೈತರು  ಮೊಬೈಲ್ ನಲ್ಲೇ ಎಫ್ಐಡಿ ಗೆ ಅರ್ಜಿ ಸಲ್ಲಿಸಬಹುದು. ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ  ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ  ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?

ಫ್ರೂಟ್ಸ್ ಐಡಿಗೆ ಅರ್ಜಿ ಸಲ್ಲಿಸಲು ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ಆಧಾರ್ ಕಾರ್ಡ್. ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಬೇಕಾಗುತ್ತದೆ.  ಜಮೀನಿಗೆ ಸಂಬಂಧಿಸಿದ ಸರ್ವೆ ನಂಬರ್ (ಆರ್.ಟಿ.ಸಿ)  ಸಲ್ಲಿಸಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆಯಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತ್ತೀಚನ ಭಾವಚಿತ್ರ ಬೇಕಾಗುತ್ತದೆ.

Leave a Comment