ನಿಮಗೆ ಬೆಳೆ ವಿಮೆ ಏಕೆ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ

Written by Ramlinganna

Published on:

crop insurance jame  : ಬೆಳೆ ವಿಮೆ ಮಾಡಿಸಿದ ನಂತರ ಬಹುತೇಕ ರೈತರು ವಿಮೆ ಹಣ ಜಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗಲ್ಲ. ಬೆಳೆ ವಿಮೆ ಮಾಡಿಸಿದ ನಂತರ ರೈತರೇನು ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು? ಯಾವಾಗ ಸಂಪರ್ಕಿಸಬೇಕು? ಬೆಳೆ ವಿಮೆ ಹಣ ಯಾವಾಗ ಜಮೆಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ 2023-24ನೇ ಸಾಲಿನಲ್ಲಿ ವಿಮೆ ಪಾವತಿಸಿದ ಇನ್ನೂ ಬಹಳಷ್ಟು ರೈತರಿಗೆ ಹಣ ಜಮೆಯಾಗಿಲ್ಲ. ಯಾವ ಕಾರಣಕ್ಕಾಗಿ ಬೆಳೆ ವಿಮೆ ಜಮೆಯಾಗಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಬೆಳೆ ವಿಮೆ ಮಾಡಿಸಿದ ರೈತರು ಯಾವ ಯಾವ ಮಾಹಿತಿ ತಿಳಿದುಕೊಳ್ಳಬೇಕು?

ರೈತರು ವಿಮೆ ಹಣ ಕಟ್ಟಿರುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಕಟ್ಟಿರುತ್ತಾರೆ. ತಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ.ಆ ವಿಮಾ ಕಂಪನಿಯ ಸಹಾಯವಾಣಿ ನಂಬರ್ ತಿಳಿದುಕೊಳ್ಳಲೇಬೇಕು. ಏಕೆಂದರೆ ನಿಮ್ಮ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಹಾಳಾದರೆ ನೀವು 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ. ಆಗ ನಿಮಗೆ ವಿಮಾ ಕಂಪನಿಯ ಹಣ ಜಮೆಯಾಗುತ್ತದೆ.

ನಿಮ್ಮ ಜಿಲ್ಲೆಯ ವಿಮಾ ಕಂಪನಿ ತಿಳಿದುಕೊಳ್ಳಲು ಈ

https://samrakshane.karnataka.gov.in/PublicHome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Know Your Insurance Co ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.ಅಲ್ಲಿ ನಿಮಗೆ ಜಿಲ್ಲೆಯ ಹೆಸರು ಹಾಗೂ ವಿಮಾ ಕಂಪನಿಯ ಹೆಸರು ಕಾಣಿಸುತ್ತದೆ. ನೀವು ನಿಮ್ಮ ಜಿಲ್ಲೆಯ ಎದುರುಗಡೆಯಿರುವ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಿರುತ್ತೀರಿ.

ನಿಮ್ಮ ಬೆಳೆ ಹಾಳಾದಾಗ ನಿಮ್ಮ ಜಿಲ್ಲೆಯ ಎದುರುಗಡೆಯಿರುವ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕಾಗುತ್ತದೆ. ಹಾಗಾದರೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಬೇಕಲ್ಲವೇ? ಇಲ್ಲಿದೆ ನೋಡಿ ಸಹಾಯವಾಣಿ ನಂಬರ್ ಗಳು

crop insurance jame ವಿಮಾ ಕಂಪನಿಗಳ ಸಂಪರ್ಕಿಸುವ ನಂಬರ್ ಗಳು

ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್  ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ. ಇಫ್ಕೋ ಟೋಕಿಯೋ ಜನರಲ್ ಇನ್ಸುರೆನ್ಸ್ ಕಂ ನಂಬರ್.

ಇದನ್ನೂ ಓದಿ :     ನಿಮ್ಮ ಯಾವ ಯಾವ ಜಮೀನು ಜಂಟಿಯಲ್ಲಿದೆ? ಇಲ್ಲೇ ಚೆಕ್ ಮಾಡಿ                                                          

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ  ರೈತರು 080 2656 4535, ಅಥವಾ 080 2656 4536 ಗೆ ಂಪರ್ಕಿಸಬಹುದು.

ಬೆಳೆ ವಿಮೆ ಪಾವತಿಸಿದ ನಂತರ ಮತ್ತೇನು ಮಾಡಬೇಕು?

ಬೆಳೆ ವಿಮೆ ಹಣ ಪಾವತಿಸಿದ ನಂತರ ರೈತರು ತಮ್ಮಜಮೀನಿನಲ್ಲಿ ಯಾವ ಬೆಳೆ ಬಿತ್ತಿದ್ದಾರೆ ಎಂಬುದರ ಬಗ್ಗೆ ಬೆಳೆ ಸಮೀಕ್ಷೆ ಮಾಡಿರುವುದು ಕಡ್ಡಾಯವಾಗಿದೆ. ಬೆಳೆ ಸಮೀಕ್ಷೆಯಾದರೆ ಮಾತ್ರ ನಿಮಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.  ಹಾಗಾಗಿ ರೈತರು ಕೂಡಲೇ ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು. ನಿಮಗೆ ಬೆಳೆ ಸಮೀಕ್ಷೆ ಮೊಬೈಲ್ ನಲ್ಲಿ ಮಾಡಲು ಸಮಸ್ಯೆಯಾಗುತ್ತಿದ್ದರೆ ನಿಮ್ಮ ಸ್ನೇಹಿತರು ಅಣ್ಣತಮ್ಮಂದಿರ, ಮಕ್ಕಳ ಫೋನ್ ಗಳಿಂದ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು..

Leave a Comment