ಕೃಷಿ ಹೊಂಡ ನಿರ್ಮಾಣಕ್ಕೆ 75 ಸಾವಿರ ಸಬ್ಸಿಡಿ

Written by Ramlinganna

Updated on:

75 thousand farmpond subsidy ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಹೊಂಡ ನಿರ್ಮಾಣಕ್ಕೆ 72 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ತೋಟಗಾರಿಕೆ ಇಲಾಖೆಯ ವತಿಯಿಂದ 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಎಲ್ಲಾ ವರ್ಗದ ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಹೊಂಡಾ ಯೋಜನೆಯಡಿ 20 * 20 *3 ಮೀ ಅಳತೆಯ ನೀರು ಸಂಗ್ರಹಣಾ ಘಟಕ ನಿರ್ಮಿಸಲು 75 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು.

ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅಂಗಾಂಶ ಕೃಷಿ ಬಾಳೆ, ಹೈಬ್ರಿಡ್ ತರಕಾರಿ, ಸೇವಂತಿಗೆ ಮತ್ತು ಚೆಂಡು ಹೂ ಬೆಳೆಗಳ ಬೇಸಾಯ ಕೈಗೊಳ್ಳಲು ಪ್ರೋತ್ಸಾಹ ಧನ ನೀಡಲಾಗುವುದು.

ಈರುಳ್ಳಿ ಬೆಳೆ ಕಟಾವಿನ ನಂತರ ಹೊಲದಲ್ಲಿ ಶೇಖರಣೆ ಮಡಲು ಕೊಯ್ಲೋತ್ತರ ಚಟುವಟಿಕೆ ಕೈಗೊಳ್ಳಲು 12 * 3.60 * 2.10 ಮೀಟರ್ ಅಳತೆಯ ಈರುಳ್ಳಿ ಶೇಖರಣಾ ಘಟಕ ನಿರ್ಮಿಸಲು 87,500 ರೂಪಾಯಿ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ Gruha jyothi status ಗೃಹ ಜ್ಯೋತಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಯೋಜನೆಯಡಿ ಎಲ್ಲಾ ವರ್ಗದ ರೈತರಿಗೂ ಶೇ. 50 ರಂತೆ ಸಹಾಯಧನ ನೀಡಲಾಗುವುದು.  ಆಸಕ್ತ ಚಾಮರಾಜನಗರದ ಜಿಲ್ಲೆಯ ರೈತರು ಕೂಡಲೇ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಕೋರಿದ್ದಾರೆ.

ಗೋಡಂಬಿ ಕೃಷಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ಗದಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಕೆಂಪು ಮಣ್ಣಿನಲ್ಲಿ ಗೋಡಂಬಿ ಬೆಳೆಯನ್ನು ಯಶಸ್ವಿಯಾಗಿ ಬೆಳೆದು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದು, ಇಲಾಖೆಯಿಂದ ಪ್ರಸಕ್ತ ಸಾಲಿಗೆ ಜಿಲ್ಲೆಯ ರೈತರಿಗೆ ಬೆಳೆ ಬೆಳೆಯಲು ಗೇರು ಹಾಗೂ ಕೋಕೋ ನಿರ್ದೇಶನಾಲಯ, ಕೋಚ್ಚಿನ್ ಅವರ ಪ್ರಾಯೋಜಕತ್ವದಲ್ಲಿ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತಿದೆ.  ಆಸಕ್ತ ರೈತರಿಗೆ ನಿರ್ದೇಶನಾಲಯದ ವತಿಯಿಂದ ಉಚಿತವಾಗಿ ಗೋಡಂಬಿ ಗಿಡಗಳನ್ನು ವಿತರಿಸಲಾಗುವುದು.

 75 thousand farmpond subsidy ಸಹಾಯಧನ ಪಡೆಯಲು ಯಾವ ಯಾವ ದಾಖಲೆ ಬೇಕು?

ಸಹಾಯಧನ ಪಡೆಯಲಿಚ್ಚಿಸುವಆಸಕ್ತ ರೈತ ಬಾಂಧವರು ನಿಗದಿತ ನಮೂನೆಯ ಅರ್ಜಿ, ಪಹಣಿ ಪತ್ರಿಕೆ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್ ಬುಕ್ ದಾಖಲಾತಿಗಳನ್ನು ಸಮೀಪದ ತಾಲೂಕು ಕಚೇರಿಗೆ ಮತ್ತು ಹುಲಕೋಟಿ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕರ ಸಂಸ್ಥೆಗೆ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾರಿಗೆ ಸಂಪರ್ಕಿಸಬೇಕು?

ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ) ಗದಗ, ರೋಣ, ಮುಂಡರಗಿ, ಶಿರಹಟ್ಟಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ಹುಲಕೋಟಿ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕರ ಸಂಸ್ಥೆಯನ್ನು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಾಂಡುರಂಗ ಹೊನ್ನಿನಾಯ್ಡರ 8431478855 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗದಗ ಹಾಗೂ ಚಾಮರಾಜನಗರ ಜಿಲ್ಲೆಯಂತೆ ಇತರ ಜಿಲ್ಲೆಗಳಿಂದಲೂ ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಕೃಷಿ ಯಂತ್ರೋಪಕರಣಗಳು ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯಲ್ಲಿ ಸಂಪರ್ಕಿಸಿ ಈ ಕುರಿತು ವಿಚಾರಿಸಬಹುದು. ಅಥವಾ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೂ ಸಂಪರ್ಕಿಸಿ ಸರ್ಕಾರದ ವತಿಯಿಂದ ಸಿಗುವ ಸಬ್ಸಿಡಿ ಹಾಗೂ ಯಾವ ಯಾವ ಕೃಷಿ ಯತ್ರೋಪಕರಣಗಳಿಗೆ ಎಷ್ಟು ಸಹಾಯಧನ ಸಿಗುವುದು ಎಂಬಿತ್ಯಾದಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಆಯಾ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ ಕರೆದಾಗ  ಅರ್ಜಿ ಸಲ್ಲಿಸಲು ಸಹಾಯಧನ ಪಡೆದುಕೊಳ್ಳಬಹುದು.

Leave a Comment