ಹಸು ಘಟಕ ಸ್ಥಾಪನೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

subsidy for cow unit ಕೊಪ್ಪಳ, ಚಾಮರಾಜನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಯಾದಗಿರಿ ಜಿಲ್ಲೆಯ ರೈತರಿಂದ ಮಿಶ್ರತಳಿ ಹಸು ಘಟಕ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ 2023-24ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಉಳಿಕೆ ಅನುದಾನದಲ್ಲಿ ಮಿಶ್ರ ತಳಿ ಹಸು ಘಟಕ ಅನುಷ್ಠಾನಗೊಳಿಸಲು ಕೊಪ್ಪಳ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಿಶ್ರ ತಳಿ ಹಸು ಘಟಕದಲ್ಲಿ 1 ಮಿಶ್ರ ತಳಿ ಹಸು ವಿತರಿಸಲಾಗುವುದು. ಘಟಕ ವೆಚ್ಚ 65 ಸಾವಿರ ರೂಪಾಯಿ ಇದ್ದು, ಎಸ್.ಎಸಿ, ಎಸ್.ಎಸ್.ಟಿ ಫಲಾನುಭವಿಗಳಿಗೆ ಶೇ. 90 ರಷ್ಟು ಅಂದರೆ 58500 ರೂಪಾಯಿ ಸಹಾಯಧನ ನೀಡಲಾಗುವುದು. ಅದರಲ್ಲಿ ಶೇ. 10 ರಷ್ಟು ಅಂದರೆ 6500 ರೂಪಾಯಿ ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್ ನಿಂದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು. ಅರ್ಜಿದಾರರು ಫ್ರೂಟ್ಸ್ ಐಡಿ ಹೊಂದಿರಬೇಕು. ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಮತ್ತು ಆಸಕ್ತ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಫಲಾನುಭವಿಗಳು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು. ಸದಸ್ಯತ್ವ ಕಡ್ಡಾಯವಾಗಿ ಪಡೆಯಬೇಕು. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕುಗಳ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಮುಖ್ಯ ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಮತ್ತು ಕುಕನೂರು ಕಚೇರಿಗಳಿಗೆ ಸಂಪರ್ಕಿಸಲು ಮತ್ತು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ರೈತರಲ್ಲಿ ಇಲಾಖೆ ಉಪ ನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಕೋರಿದ್ದಾರೆ

subsidy for cow unit ದೊಡ್ಡಬಳ್ಳಾಪುರ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ 2023-24ನೇ ಸಾಲಿಗೆ ಹಾಲು ಉತ್ಪಾದಕರಿಗೆ ಉತ್ತೇಜನ  ಕಾರ್ಯಕ್ರಮದಡಿ ಫಲಾನುಭವಿ ಆಧಾರಿತ ಕಾರ್ಯಕ್ರಮ ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಅನುಷ್ಠಾನಗೊಳಿಸಲು ಒಂದು ಮಿಶ್ರತಳಿ ಹಾಲು ಕರೆಯುವ ಹಸುಗಳ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ.

ಘಟಕದ ಮೊತ್ತ 65 ಸಾವಿರ ರೂಪಾಯಿ ಆಗಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ. 90 ರಷ್ಟು ಅಂದರೆ 58,500 ರೂಪಾಯಿ ಸಹಾಯಧನ ಒದಗಿಸಲಾಗುವುದು. ಉಳಿದ ಮೊತ್ತವನ್ನು ರೈತರ ವಂತಿಕೆ ಅಥವಾ ಸಾಲದ ರೂಪದಲ್ಲಿ ಪಡೆಯಬಹುದು.

ಇದನ್ನೂ ಓದಿ : ನಿಮ್ಮ ಹೊಲಕ್ಕೆ ಹೋಗುವ ದಾರಿ ಮುಚ್ಚಲಾಗಿದೆಯೇ? ಇಲ್ಲಿ ಚೆಕ್ ಮಾಡಿ ಅರ್ಜಿ ಸಲ್ಲಿಸಿ

ದೊಡ್ಡಬಳ್ಳಾಪುರ ಜಿಲ್ಲೆಗೆ ಪರಿಶಿಷ್ಟ ಜಾತಿಗೆ 21 ಘಟಕ ಹಾಗೂ ಪರಿಶಿಷ್ಟ ಪಂಗಡದವರಿಗೆ 11 ಘಟಕ ಸೇರಿದಂತೆ ಒಟ್ಟು 32 ಘಟಕಗಳ ಗುರಿ ನಿಗದಿಪಡಿಸಲಾಗಿದೆ. ನಿಗದಿಪಡಿಸಲಾಗಿದೆ.ಮಹಿಳೆಯರಿಗೆ ಶೇ. 33.3 ರಷ್ಟು, ಅಂಗವಿಕಲರಿಗೆ ಶೇ. 3 ರಷ್ಟು ಆದ್ಯತೆ ನೀಡಲಾಗುವುದು.ಆಯಾ ತಾಲೂಕಿನ ಶಾಸಕರು ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನುಆಯ್ಕೆ ಮಾಡುತ್ತಾರೆ.

ಆಸಕ್ತ ರೈತರು ಅರ್ಜಿಗಳನ್ನು ತಾಲೂಕಿನ ಪಶುಪಾಲನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಪಡೆದು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ನವೆಂಬರ್ 25 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೇವನಹಳ್ಳಿ ಪಶು ಆಸ್ಪತ್ರೆ  9945322938 ಗೆ, ಹೊಸಕೋಟೆ ಪಶು ಆಸ್ಪತ್ರೆ9480910509, ದೊಡ್ಡಬಳ್ಳಾಪುರ ಪಶು ಆಸ್ಪತ್ರೆ 98453058393,  ನೆಲಮಂಗಲ ಪಶು ಆಸ್ಪತ್ರೆ 9845637387 ಗೆ ಸಂಪರ್ಕಿಸಲು ಕೋರಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ 2023-24ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಒಂದು ಮಿಶ್ರ ತಳಿ ಹಸು ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಆಯಾ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಗೆ ಡಿಸೆಂಬರ್ 2 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 08150 282223, 08156 272375, ಚಿಂತಾಮಣಿ 08154 252106, ಗೌರಿಬಿದನೂರು  08155285301, ಗುಡಿಬಂಡೆ 08156 261031 ಗೆ ಸಂಪರ್ಕಿಸಬಹುದು.

Leave a Comment