124 ಕೋಟಿ ಬೆಳೆ ವಿಮೆ ಬಿಡುಗಡೆ: ನಿಮಗೆಷ್ಟು ಜಮೆ? ಚೆಕ್ ಮಾಡಿ

Written by Ramlinganna

Updated on:

124 crop insurance released ಬೆಳೆ ವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಅವಧಿಗೆ 124 ಕೋಟಿ ಬೆಳೆ ವಿಮೆ ಮೊತ್ತ ಬಿಡುಗಡೆ ಮಾಡಿದೆ.

ಹೌದು, ಜಿಲ್ಲಾಮಟ್ಟದ ಕುಂದುಕೊರತೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಬೆಳೆ ವಿಾ ಕಂಪನಿಯು ನೋಂದಾಯಿತ ರೈತರಗೆ ಬೆಳೆ ವಿಮೆ ಮೊತ್ತ ಬಿಡುಗಡೆ ಮಾಡಿದೆ. ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು.ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ವಿಮಾ ಮಾಡಿಸಿದ 1.23 ಲಕ್ಷ ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರವಾಗಿ 100 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇದರಲ್ಲಿ 1.53 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಸೇರ್ಪಡೆಯಾಗಿದೆ. ಸ್ಥಳೀಯ ವಿಪತ್ತು ಅಡಿ 47,000 ರೈತರು ದೂರು ದಾಖಲಿಸಿದ್ದು, ಮಳೆ ಹೆಚ್ಚಳದಿಂದ ಬೆಳೆ ಹಾನಿ ಆಗಿದ್ದಕ್ಕೆ 18 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಉದ್ದು ಮತ್ತು ಹೆಸರು ಬೆಳೆಗಳ ಕಟಾವು ಮೇಲಿನ ಇಳುವರಿ ಕುಸಿತ ಸಂಬಂಧ 6 ಕೋಟಿ ಸೇರಿ ಒಟ್ಟಾರೆ 124 ಕೋಟಿ ಮಧ್ಯಂತರ ವಿಮಾ ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

1.23 ಲಕ್ಷ ರೈತರು ಗ್ರಾಮ ಪಂಚಾಯತಿವಾರು ಬೆಳೆ ಹಾನಿಯ ಪ್ರಮಾಣ ದಾಖಲಾಗಬೇಕಿದ. ಸ್ಥಳೀಯ ವಿಪತ್ತು ಅಡಿ ದೂರು ನೀಡಿದ 47 ಸಾವಿರ ಬೆಳೆಗಾರರ ಬೆಳೆ ಹಾನಿಯು ಅಂದಾಜು ಮಾಹಿತಿ ಕಲೆಹಾಕುವ ಕಾರ್ಯ ಭರದಿಂದ ನಡೆಯತ್ತಿದೆ. 15 ದಿನಗಳ ಒಳಗೆ ನೋಂದಾಯಿತರೈತರ ಖಾತೆಗೆ ಬೆಲೆ ವಿಮೆಯ ಪರಿಹಾರ ಮೊತ್ತ ಜಮೆ ಆಗಲಿದೆ ಎಂದರು.

ಬೆಳೆ ವಿಮೆ ಮಾಡಿಸಿದ ಎಲ್ಲಾ ರೈತರಿಗೆ ಬೆಳೆ ವಿಮೆ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಮಂಜೂರಾಗಿದ್ದು, ಇದೇ ಪ್ರಥಮ ಬಾರಿಗೆ ಬೆಳೆ ವಿಮೆ ಮಾಡಿಸಿದ ಅಂದರೆ ಬೆಳೆ ವಿಮೆಗಾಗಿ ಪ್ರಿಮಿಯಂ ತುಂಬಿದ ಎಲ್ಲಾ ರೈತರಿಗ ಬೆಳೆ ವಿಮೆ ಸಿಗುತ್ತಿದೆ. ಈ ಹಿಂದೆ ಒಬ್ಬರಿಗೆ ಬೆಳೆವಿಮೆ ಸಿಕ್ಕಿದ್ದರೆ ಇನ್ನೊಬ್ಬರಿಗೆ ಸಿಕ್ಕಿಲ್ಲ. ಆದರೆ ಈಗ ಬೆಳೆ ವಿಮೆ ಮಾಡಿಸಿರುವ ಜಿಲ್ಲೆಯ ಎಲ್ಲಾ1.23 ಲಕ್ಷ ರೈತರಿಗೆ ಬೆಳೆ ವಿಮೆ ದೊರಕುತ್ತಿರುವುದು ಇದು ಇತಿಹಾಸವಾಗಲಿದೆ.

ಇದನ್ನೂ ಓದಿ ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಿ

ಮಧ್ಯಂತರ ಬೆಳೆ ವಿಮೆ ಪರಿಹಾರವೂ  ಪ್ರತಿ ರೈತರಿಗೆ ಈಗ 8 ಸಾವಿರ ರೂಪಾಯಿ ದೊರಕುತ್ತಿದೆ. ಎರಡು ವಾರದೊಳಗೆ ಬೆಳೆ ವಿಮ ಮಾಡಿಸಿರುವ ರೈತರಿಗೆ  ಅವ ಖಾತೆಗೆ ಹಣ ಜಮೆಯಾಗಲಿದೆ. ಆಳಂದ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 36286 ರೈತರಿಗೆಹಾಗೂ ಅಫಜಲ್ಪುರ ತಾಲೂಕಿನಲ್ಲಿ ಕೇವಲ 8499 ಮತ್ತ್ು ಸಣ್ಮ ತಾಲೂಕಾಗಿರುವ ಯಡ್ರಾಮಿ ತಾಲೂಕಿನಲ್ಲಿ5071 ರೈತರಿಗೆ ಬೆಳೆ ವಿಮೆ ಪರಿಹಾರ ಸಿಗಲಿದೆ.

124 crop insurance released ನಿಮಗೆಷ್ಟು ಬೆಳೆ ವಿಮೆ ಜಮೆಯಾಗಿದೆ? ಮೊಬೈಲ್ ನಲ್ಲೇ ತೆರ್ ಮಾಡಿ

ರೈತರು ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂ. ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಬಹುದು.

Leave a Comment