ರೈತರ ತಮ್ಮ ಜಮೀನಿನ ನಕ್ಷೆಯನ್ನು ತಾವೇ ತಯಾರಿಸಬಹುದು. ಹೌದು ಸ್ವಾವಲಂಬಿ ಆ್ಯಪ್ ಮೂಲಕ ರೈತರು ಮೊಬೈಲ್ ನಲ್ಲೇ ಜಮೀನಿನ ನಕ್ಷೆಯನ್ನು ತಯಾರಿಸಬಹುದು. ಇದನ್ನು ದೇಶದಲ್ಲಿಯೇ ಮೊದಲ ಬಾರಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ.
ರೈತರು ಇನ್ನೂ ಮುಂದೆ ಜಮೀನಿನ 11 ಇ (ಹಿಸ್ಸಾ ನಕ್ಷೆ) ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಭೂ ಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆಯಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಕಲ್ಲಿಸುವುದಕ್ಕಾಗಿ ಸ್ವಾವಲಂಬಿ ಆ್ಯಪನ್ನು ಆರಂಭಿಸಿದೆ.
ಮೊಬೈಲ್ ನಲ್ಲೇ ಜಮೀನಿನ ನಕ್ಷೆ ಪಡೆಯುವುದು ಹೇಗೆ?
ರೈತರು ಮೊಬೈಲ್ ನಲ್ಲಿಯೇ ಜಮೀನಿನ ನಕ್ಷೆ, ತತ್ಕಾಲ್ ಪೋಡಿ ಪಡೆಯುವುದಕ್ಕಾಗಿ ಈ
https://bhoomojini.karnataka.gov.in/service27
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಸ್ವಾವಲಂಬಿ ಆ್ಯಪ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸ್ವಾವಲಂಬಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ ಅರ್ಜಿ ಸಲ್ಲಿಸುವ ಮುನ್ನ ವೀಡಿಯೋ ವೀಕ್ಷಿಸಬಹುದು. ಸಹಾಯಕ್ಕಾಗಿ ವೀಡಿಯೋವನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ಅರ್ಜಿ ಹೇಗೆ ಸಲ್ಲಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಲಾಗುವುದು.
ಅದೇ ರೀತಿ ಅಲ್ಲಿಕಾಣುವ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಬಳಕೆದಾರರ ಮಾರ್ಗದರ್ಶಿಯನ್ನು ನೋಡಿ ಮೇಲೆ ಕ್ಲಿಕ್ ಮಾಡಿದರೆ ಸ್ಟೇಪ್ ಬೈ ಸ್ಟೇಪ್ ಮಾಹಿತಿ ನೀಡಲಾಗಿರುತ್ತದೆ. ಆ ಆಧಾರದ ಮೇಲೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು.
ಹೊಸ ಅರ್ಜಿ New Application ಮೇಲೆ ಕ್ಲಿಕ್ ಮಾಡಬೇಕು. ಆಗ ಎರಡು ಆಪಶನ್ ಕಾಣುತ್ತದೆ. ನಾನೇ ಸ್ಕೆಚ್ ಸಿದ್ದಪಡಿಸಿ ಅಪ್ಲೋಡ್ ಮಾಡುತ್ತೇನೆ ಹಾಗೂ ಭೂ ಮಾಪನ ಇಲಾಖೆಯಿಂದ ಸ್ಕೆಚ್ ಸಿದ್ದಪಡಿಸಲು ನಾನು ಬಯಸುತ್ತೇನೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವೇ ಸ್ಕೆಚ್ ತಯಾರಿಸುತ್ತಿದ್ದರೆ ನಾನೇ ಸ್ಕೆಚ್ ಸಿದ್ದಪಡಿಸಿ ಅಪ್ಲೋಡ್ ಮಾಡುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ಅಧಿಕಾರಿಗಳಿಂದ ಸ್ಕೆಚ್ ಸಿದ್ದಪಡಿಸುತ್ತಿದ್ದರೆ ಭೂಮಾಪನ ಇಲಾಖೆಯಿಂದ ಸ್ಕೆಚ್ ಸಿದ್ದಪಡಿಸಲು ಬಯಸುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : ನಿಮಗೆ ಎಷ್ಟು ಎಕರೆಗೆ ಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ನೀವೇ ಸ್ಕೆಚ್ ತಯಾರು ಮಾಡುವವರಿದ್ದರೆ ಆ ಬಾಕ್ಸ್ ಆಯ್ಕೆ ಮಾಡಿಕೊಂಡನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ತತ್ಕಾಲ್ ಪೋಡಿ, ಭೂ ಪರಿವರ್ತನೆ ಹಾಗೂ ಇ ಸ್ಕೆಚ್ ಮೂರು ಆಪಶನ್ ಗಳಿರುತ್ತವೆ. ಇದರಲ್ಲಿ ನೀವು ಯಾವುದಕ್ಕಾಗಿ ಅರ್ಜಿ ಸಲ್ಲಿಸುತ್ತೀದ್ದೀರೋ ಅದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು, ಆಧಾರ್ ಸಂಖ್ಯೆ, ಸಂಬಂಧ, ತಂದೆ, ಅಥವಾ ಗಂಡನ ಹೆಸರು, ವಿಳಾಸ ಭರ್ತಿ ಮಾಡಿದ ನಂತರ Next Step ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಆನಲೈನ್ ನಲ್ಲೇ ಶುಲ್ಕ ಪಾವತಿಸಿದ ನಂತರ ಅರ್ಜಿಯ ಸ್ಟೇಟಸ್ ಸಹ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಸಹಾಯವಾಣಿ ನಂಬರಿಗೆ ಕರೆ ಮಾಡಿ
ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ರೈತರು ಕಂದಾಯ ಇಲಾಖೆಯ ಸಹಾಯವಾಣಿ ನಂಬರಿಗೆ ಕರೆ ಮಾಡಿ ವಿಚಾರಿಸಬಹುದು. ಈ ಸಹಾಯವಾಣಿಯು ಬೆಳಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಈ ಸಮಯದೊಳಗೆ ಕರೆ ಮಾಡಬಹುದು.
8277864065, 8277864067, 8277864068 ಗೆ ಕರೆ ಮಾಡಬಹುದು.