Gruhalakshmi Application ಎಲ್ಲಿ ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

Written by Ramlinganna

Updated on:

ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂಪಾಯಿ ಜಮೆಯಾಗಲಿದೆ.  Gruhalakshmi Application ಅರ್ಜಿ ಎಲ್ಲಿ ಸಲ್ಲಿಸಬೇಕು? ಹಣ ಹೇಗೆ ವರ್ಗಾವಣೆ ಮಾಡಲಾಗುವುದು? ಯಾವ ಯಾವ ಮಹಿಳೆಯರು ಅರ್ಹರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯೂ ಒಂದಾಗಿದೆ. ಇದೇ ತಿಂಗಳು ಜುಲೈ 19 ರಿಂದ ಈ ಯೋಜನೆಯ ಜಾರಿಯಲ್ಲಿ ಬರಲಿದೆ.  ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜೂನ್ 15 ರಿಂದ ಹಲವು ಬಾರಿ ದಿನಾಂಕ ಮುಂದೂಡಿ ಅಂತಿಮವಾಗಿ ಯೋಜನೆಯ ಚಾಲನೆಗೆ ದಿನಾಂಕ ಪ್ರಕಟಿಸಿದೆ. ಜುಲೈ 19 ರಿಂದ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯಧನವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು.

ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ನೋಂದಣಿಗೆ ಯಾವುದೇ ದಿನಾಂಕ ನಿಗದಿಮಾಡಿಲ್ಲ ಎಂದು ಈಗಾಗಲೇ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಇಲ್ಲಿ ಸ್ವಯಂ ನೋಂದಣಿಗೂ ಅವಕಾಶವಿಲ್ಲ.ಸರ್ಕಾರವು ಸೂಚಿಸಿದ ಕೇಂದ್ರಗಳಿಗೆ ಹೋಗಿ ಅರ್ಜಿ ನೋಂದಣಿ ಮಾಡಬೇಕು.

ಗೃಹಲಕ್ಷ್ಮೀ ಯೋಜನೆಗೆ ಯಾವ ಯಾವ ಮಹಿಳೆಯರು ಅರ್ಜಿ ಸಲ್ಲಿಸಬಹುದು?

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಮನೆಯೊಡತಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಹ ಫಲಾನುಭವಿಗಳ ಖಾತೆಗೆ ಆಗಸ್ಟ್ ತಿಂಗಳಿಂದ ನೇರವಾಗಿ ಹಣ ಅವರ ಖಾತೆಗೆ ಜಮೆ ಮಾಡಲಾಗುವುದು.

Gruhalakshmi Application ಎಲ್ಲಿ ಸಲ್ಲಿಸಬೇಕು?

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೋಂದಣಿ ಮಾಡಲು ಪಡಿತರ ಚೀಟಿಯಲ್ಲಿ ಮನೆಯೊಡತಿ ನೀಡಿರುವ ಮೊಬೈಲ್ ನಂಬರ್ ಗೆ ದಿನಾಂಕ, ಸಮಯ ಹಾಗೂ ಸ್ಥಳದ ಕುರಿತು ಮೆಸೆಜ್ ಕಳುಹಿಸಲಾಗುವುದು.

ಇದನ್ನೂ ಓದಿ : ಈ ದಿನ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ- ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ? ಇಲ್ಲೇ ಚೆಕ್ ಮಾಡಿ

ನಿಗದಿತ ದಿನ, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಗೆ ಹೋಗಿ ನೋಂದಣಿ ಮಾಡಿಸಬೇಕು.

ಪಡಿತರ ಚೀಟಿದಾರರಿಗೆ ಗೃಹಲಕ್ಷ್ಮೀ ಯೋಜನೆಯ ವತಿಯಿಂದ ಯಾವುದೇ ಮೆಸೆಜ್ ಬರದಿದ್ದರೆ 1902 ಗೆ ಕರೆ ಮಾಡಬಹುದು. ಅಥವಾ 8147500500 ಗೆ ವ್ಯಾಟ್ಸಪ್ ಮಾಡಿ ನೋಂದಣಿ ವಿವರ ಪಡೆದುಕೊಳ್ಳಬಹುದು.

ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ ಅದೇ ಸೇವಾ ಕೇಂದ್ರಕ್ಕೆ ಸಂಜೆ 5 ರಿಂದ 7 ಗಂಟೆಯೊಳಗೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು.

ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆಂದು ನೇಮಿಸಲ್ಪಟ್ಟ ಪ್ರಜಾಪ್ರತಿನಿಧಿಗಳು ಮನೆಗೆ ಬಂದು ನೋಂದಣಿ ಮಾಡುವರು.

ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಲು ಯಾವ ಯಾವ ದಾಖಲೆ ಬೇಕು?

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಲು ಪಡಿತರ ಚೀಟಿ ಹೊಂದಿರಬೇಕು. ಪತಿ- ಪತ್ನಿ ಇಬ್ಬರ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಬೇರೆಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಬೇಕಿದ್ದರೆ ಆ ಖಾತೆ ಪಾಸ್ ಬುಕ್ ಝರಾಕ್ಸ್ ಪ್ರತಿ ನೀಡಬೇಕು.  ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀಡಬೇಕು.

ನೋಂದಣಿ ಮಾಡಿದ ಬಳಿಕ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲಾಗುತ್ತದೆ. ಹಾಗಾಗಿ ನೋಂದಣಿ ಮಾಡಿಸುವಾಗ ಮಂಜೂರಾತಿ ಪ್ರಮಾಣ ಪತ್ರ ಪಡೆಯುವುದನ್ನು ಮರೆಯಬಾರದು.

ಹೆಚ್ಚಿನ ಮಾಹಿತಿಗಾಗಿ  1902 ಗೆ ಕರೆ ಮಾಡಿ ವಿಚಾರಿಸಬಹುದು

ಒಂದು ಮಾತು ನೆನಪಿಟ್ಟುಕೊಳ್ಳಬೇಕು.. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಸ್ವ.ಯಂ  ನೋಂದಣಿಗ ಅವಕಾಶವಿಲ್ಲ. ಸೇವಾ ಕೇಂದ್ರಗಳಿಗೆ ಹೋಗಿ ನೋಂದಣಿ  ಮಾಡಿಸಿಕೊಳ್ಳಬೇಕಾಗುತ್ತದೆ

Leave a Comment