ಒಬ್ಬ ಮಹಿಳೆಯ ಅವಳಿ ಅಥವಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಬರೊಬ್ಬರಿ ಒಂಬತ್ತು ಮಕ್ಕಳಿಗೆ (women gives birth to 9 babies) ಜನ್ಮನೀಡಿ ಗಿನ್ನಿಸ್ ಬುಕ್  ಆಫ್ ವರ್ಲ್ಡ್ ರಿಕಾರ್ಡ್ ಗೆ ಸೇರಿದ್ದಾಳೆ.

ಹೌದು, ಒಬ್ಬ ಮಹಿಳೆ ಏಕಕಾಲದಲ್ಲಿ ಒಂಬತ್ತು ಜೀವಂತ ಶಿಶುಗಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎನ್ನಲಾಗಿದೆ. ಎಂಟು ಜೀವಂತ ಶಿಶುಗಳಿಗೆ ಜನ್ಮ ನೀಡಿದ್ದು ಇದುವರೆಗಿನ ದಾಖಲೆಯಾಗಿತ್ತು. 25 ವರ್ಷದ ಮಾಲಿ ದೇಶದ  ಹಲಿಮಾ ಸಿಸ್ಸೆ 9 ಶಿಶುಗಳಿಗೆ ಸಿಸೇರಿಯನ್ ಮೂಲಕ ಜನ್ಮ ನೀಡುವ ಮೂಲಕ ಗಿನ್ನೆಸ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿದ್ದಾರೆ

ಮಾಲಿ ಮಹಿಳೆಗೆ ಜನಿಸಿರುವ ಶಿಶುಗಳಲ್ಲಿ ಐದು ಹೆಣ್ಣು ಮತ್ತು ನಾಲ್ಕು ಗಂಡಾಗಿದ್ದು, ತಾಯಿ ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ಮಾಲಿಯ ಆರೋಗ್ಯ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

25 ವರ್ಷದ ಹಲೀಮಾ ಸಿಸ್ಸೆ, ವಿಶೇಷ ಆರೈಕೆಗಾಗಿ ಅಲ್ಲಿಗೆ ಕಳುಹಿಸಿದ ನಂತರ ಮೊರೊಕ್ಕೊದಲ್ಲಿ ಮಂಗಳವಾರ ಸಿಜೇರಿಯನ್ ಮೂಲಕ ಶಿಶುಗಳಿಗೆ ಜನ್ಮ ನೀಡಿದರು. ಶಿಶುಗಳು 500 ಗ್ರಾಂ ಮತ್ತು ಒಂದು ಕಿಲೋಗ್ರಾಂ (1.1 ಮತ್ತು 2.2 ಪೌಂಡ್) ನಡುವೆ ತೂಕಹೊಂದಿರುತ್ತವೆ ಎಂದು ಮಾಲಿಯ ಉನ್ನತ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಸಿಸ್ಸೆ ಏಳು ಶಿಶುಗಳನ್ನು ಜನ್ಮ ನೀಡುತ್ತಾಳೆಂದು  ನಿರೀಕ್ಷಿಸಲಾಗಿತ್ತು.. ಮಾಲಿಯನ್ ವೈದ್ಯರು, ಸರ್ಕಾರದ ಆದೇಶದ ಮೇರೆಗೆ ಅವಳನ್ನು ಜನನಕ್ಕಾಗಿ ಮೊರೊಕ್ಕೊಗೆ ಕಳುಹಿಸಲಾಗಿತ್ತು. ಏಕೆಂದರೆ ವಿಶ್ವದ ಬಡ ರಾಷ್ಟ್ರಗಳಲ್ಲಿ ಒಂದಾದ ಮಾಲಿಯ ಆಸ್ಪತ್ರೆಗಳು ಈ ಅಸಾಧಾರಣ ಬಹು ಗರ್ಭಧಾರಣೆಗೆ ಸಾಕಷ್ಟು ಆರೈಕೆ ಯನ್ನು ಒದಗಿಸಲು ಅಸಮರ್ಥವಾಗಿವೆ.

ತನ್ನ ಪತ್ನಿ 9 ಶಿಶುಗಳಿಗೆ ಜನ್ಮ ನೀಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ,” ಎಂದು ಅವರ ಪತಿ ಸುದ್ದಿವಾಹಿನಿಗೆ ತಿಳಿಸಿದರು. “ನನ್ನ ಹೆಂಡತಿ ಮತ್ತು ಶಿಶುಗಳು (ಐದು ಹುಡುಗಿಯರು ಮತ್ತು ನಾಲ್ಕು ಹುಡುಗರು) ಆರೋಗ್ಯವಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ವಿಶ್ವ ದಾಖಲೆ ಹೊಂದಿರುವ ನಡ್ಯಾ ಸುಲೇಮನ್ ಅವರ ಎಂಟು ಮಕ್ಕಳು ಆರೋಗ್ಯವಾಗಿವೆ. ಈಗ 12 ವರ್ಷ ಗಳಾಗಿವೆ.

Leave a Reply

Your email address will not be published. Required fields are marked *