ಯಾವ ರೈತರಿಗೆ ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹಣ ಜಮೆ?

Written by Ramlinganna

Updated on:

Why you have not received pm kisan  ರಾಜ್ಯ ಸರ್ಕಾರದ ವತಿಯಿಂದ ಬಿಡುಗಡೆಯಾದ ಪಿಎಂ ಕಿಸಾನ್ ಹೆಚ್ಚುವರಿ ಹಣ ಯಾವ ರೈತರಿಗೆ ಜಮೆಯಾಗಿದೆ? ಯಾವ ರೈತರಿಗೆ ಜಮೆಯಾಗಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ರಾಜ್ಯ ಸರ್ಕಾರದ ವತಿಯಿಂದ ಜಮೆಯಾಗುವ ಹೆಚ್ಚುವರಿ ಹಣ ಅಂದರೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ 4 ಸಾವಿರ ರೂಪಾಯಿ ಯಾವ ಯಾವ ರೈತರಿಗೆ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಬಹಬುದು.

ಏನಿದು ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹೆಚ್ಚುವರಿ ಹಣ?

ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ಪ್ರತಿ ವರ್ಷ 4 ಸಾವಿರ ರೂಪಾಯಿಯನ್ನು ತಲಾ ಎರಡು ಸಾವಿರ ರೂಪಾಯಿಯಂತೆ ಆರು ತಿಂಗಳಿಗೊಮ್ಮೆ ಜಮೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು.

ದೇಶದ ಬೇರೆ ರಾಜ್ಯದ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರ ರೂಪಾಯಿ ಜಮೆಯಾದರೆ ರಾಜ್ಯದ ರೈತರಿಗೆ 10 ಸಾವಿರ ರೂಪಾಯಿ ಜಮೆಯಾಗುತ್ತದೆ. ಹೌದು, ರೈತರು ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ಯಾವ ಯಾವ ರೈತರು ಫಲಾನುಭವಿಯಾಗಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು.

ಪಿಎಂ ಕಿಸಾನ್ ಯೋಜನೆಯಡಿ ಹೆಚ್ಚುವರಿ ಹಣ ಪಡೆಯುವ ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಡಿ ಹೆಚ್ಚುವರಿ ಹಣ ಯಾವ ಯಾವ ರೈತರು ಪಡೆಯುತ್ತಾರೆ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪಿಎಂ ಕಿಸಾನ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ವೀಕ್ಷಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ರಾಜ್ಯ ಸರ್ಕಾರದ ಹೆಚ್ಚುವರಿ ಹಣ ಪಡೆಯುವ ರೈತರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಜಲ್ಲೆ, ತಾಲೂಕು, ಹೋಬಳಿ, ಗ್ರಾಮ, ಪಿಎಂಕೆಐಡಿ, ಹೆಸರು, ಅರ್ಜಿಯ ಸ್ಟೇಟಸ್, ಪಿಎಂ ಕಿಸಾನ್ ಗೆ ಕಳುಹಿಸಲಾಗಿದೆಯೋ ಇಲ್ಲವೋ ಎಂಬ ಮಾಹಿತಿ ಇರುತ್ತದೆ. ಈ ಪಟ್ಟಿಯಲ್ಲಿರುವ ರೈತರು ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹೆಚ್ಚುವರಿ ಹಣ ಪಡೆಯಲು ಅರ್ಹತೆ ಪಡೆದಿರುತ್ತಾರೆ.

Why you have not received pm kisan  ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹೆಚ್ಚುವರಿ ಹಣ ಜಮೆಯಾಗುತ್ತಿಲ್ಲವೇ?

ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ಹೆಚ್ಚುವರಿ ಹಣ ಜಮೆಯಾಗದ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ ಪಿಎಂ ಕಿಸಾನ್ 14ನೇ ಕಂತಿನ ಗ್ರಾಮವಾರು ಪಟ್ಟಿ ಬಿಡುಗಡೆ- ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಹೆಸರು ನೋಂದಾಯಿಸಿಕೊಂಡ ರೈತರಗೆ ಮಾತ್ರ ಪಿಎಂಕಿಸಾನ್ ಯೋಜನೆಯ ರಾಜ್ಯ ಸರ್ಕಾರದ ಹೆಚ್ಚುವರಿ ಹಣ ಜಮೆಯಾಗುತ್ತದೆ.

ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ಹೇಗೆ ನೋಂದಾಯಿಸಿಕೊಳ್ಳಬೇಕು?

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಹೆಸರನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕೆ ರೈತರು ಆಧಾರ್ ಕಾರ್ಡ್, ಜಮೀನಿನ ದಾಖಲೆಗಳು ಅಂದರೆ ಪಹಣಿ (ಉತಾರ), ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ, ಪರಿಶಿಷ್ಟ  ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ಇತ್ತೀಚಿನ ಫೋಟೋದೊಂದಿಗೆ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ರೈತರು ಆನ್ಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

Leave a Comment