ಈ ರೈತರಿಗೇಕೆ ಬರ ಪರಿಹಾರ ಜಮೆಯಾಗಿಲ್ಲ ಇಲ್ಲೇ ಚೆಕ್ ಮಾಡಿ

Written by Ramlinganna

Updated on:

these farmer not received compensation 2022-2023ನೇಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ರೈತರು ತಮಗೇಕೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿಲ್ಲವೆಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಕಳೆದ ವರ್ಷ ಅಂದರೆ ಮಂಗಾರು ಹಂಗಾಮಿಗೆ ಅತೀವೃ ಷ್ಟಿಯಿಂದ ಪ್ರವಾಹ ಉಂಟಾಗಿ ರೈತರ ಅಪಾರ ಬೆಳೆ ಹಾನಿಯಾಗಿತ್ತು. ಇದರಿಂದಾಗಿ ಸರ್ಕಾರವು ಸಹ ಬೆಳೆ ಹಾನಿ ಪರಿಹಾರ ಹಣವನ್ನು ಘೋಷಣೆ ಮಾಡಿತ್ತು. ಆದರೆ ಯಾವ ರೈತರಿಗೆ ಬೆಳೆ ಹಾನಿ ಜಮೆಯಾಗಿದೆ? ಯಾವ ರೈತರಿಗೆ ಬೆಳೆ ಹಾನಿ ಜಮೆಯಾಗಿಲ್ಲ? ಹಾಗೂ ಯಾವ ಕಾರಣಕ್ಕಾಗಿ ಜಮೆಯಾಗಿಲ್ಲವೆಂಬುದನ್ನು  ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

these farmer not received compensation ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

2022-2023ನೇ ಸಾಲಿನಲ್ಲಿ ನಿಮ್ಮ ಬೆಳೆ ಅತೀವೃಷ್ಟಿ, ಪ್ರವಾಹದಿಂದಾಗಿ ಬೆಳೆ ಹಾನಿಯಾಗಿತ್ತೇ? ಬೆಳೆ ಹಾನಿಯಾದ ನಂತರ ನಿಮಗೆಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮತ್ತೆರಡು ಆಯ್ಕೆಗಳು ಕಾಣಿಸುತ್ತವೆ. ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿFlood  ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು.

ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಲು /Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ನಿಮಗೆ ಯಾವ ದಿನಾಂಕದಂದು ಯಾವ ಬ್ಯಾಂಕಿನಲ್ಲಿ ಬೆಳೆ ಹಾನಿ ಪರಿಹಾರ  ಜಮೆಯಾಗಿದೆ ಹಾಗೂ ಎಷ್ಟು ಹಣ ಜಮೆಯಾಗಿದೆ? ನಿಮ್ಮ ಹೆಸರು ತಂದೆಯ ಹೆಸರು ಕಾಣಿಸುತ್ತದೆ. ಇದರೊಂದಿಗೆ ಪೇಮೆಂಟ್ ಸಕ್ಸೆಸ್ ಆಗಿ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಇದನ್ನೂ ಓದಿ : ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ಇಲ್ಲೇ ಚೆಕ್ ಮಾಡಿ

ಒಂದು ವೇಳೆ ನಿಮಗೆ ಬೆಳೆ ಹಾನಿ ಪರಿಹಾರ ಪೇಮೆಂಟ್ ಸಕ್ಸೆಸ್ ಆಗದಿದ್ದರೆ ಯಾವ ಕಾರಣಕ್ಕಾಗಿ ಜಮೆಯಾಗಿಲ್ಲ ಎಂಬುದನ್ನು ಅಲ್ಲಿ ತೋರಿಸಲಾಗಿರುತ್ತದೆ. ಅದರ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಊರು ಸರ್ವೆ ನಂಬರ್ ಹಾಗೂ ಯಾವ ಬೆಳೆಗೆ ಜಮೆ ಮಾಡಲಾಗಿದೆ ಎ ಷ್ಟು ಎಕರೆಗೆ ಜಮೆ ಮಾಡಲಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಈ ರೈತರಿಗೇಕೆ ಬೆಳೆ ಹಾನಿ ಪರಿಹಾರ ಜಮೆಯಾಗಿಲ್ಲ?

ಮುಂಗಾರು ಹಂಗಾಮಿಗೆ ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಬೆಳೆ ಹಾನಿಯಾಗಿರುತ್ತದೆ. ಆದರೆ ಕೆಲವು ರೈತರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿರುವುದಿಲ್ಲ. ನಿಮ್ಮ ಯಾವ ಬೆಳೆ ಎ ಷ್ಟು ಎಕರೆ ಬೆಳೆ ಹಾಳಾಗಿದೆ ಎಂಬುದನ್ನು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೀವು ಅರ್ಜಿ ಸಲ್ಲಿಸುವುದನ್ನು ಮರೆತಿದ್ದರೂ ನಿಮಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿರುವುದಿಲ್ಲ.

ಕಳೆದ ವರ್ಷ ಅರ್ಜಿ ಸಲ್ಲಿಸದೆ ಬೆಳೆ ಹಾನಿ ಪರಿಹಾರ ಹಣ ಪಡೆಯುವುದಲ್ಲಿ ವಂಚಿತರಾಗಿದ್ದರೆ ಮುಂದಿನ ವರ್ಷ ಅಂದರೆ 2023-24ನೇ ಸಾಲಿನಲ್ಲಿ ಒಂದು ವೇಳೆ ನಿಮ್ಮ ಬೆಳೆ ಪ್ರವಾಹ ಹಾಗೂ ಅತೀವೃಷ್ಟಿಯಿಂದ ಬೆಳೆ ಅಕಸ್ಮಾತ್ ಹಾಳಾದರೆ ನಿಮ್ಮಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸುವುದನ್ನು ಮರೆಯಬಾರದು. ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಪೋರ್ಟಲ್ ಗೆ ಅಪ್ಲೋಡ್ ಮಾಡುತ್ತಾರೆ. ಆಗ ನಿಮಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗುತ್ತದೆ.

Leave a Comment