ಅರ್ಹತೆಯಿದ್ದರೂ ಪಿಎಂ ಕಿಸಾನ್ ಜಮೆಯಾಗುತ್ತಿಲ್ಲವೇ?

Written by Ramlinganna

Updated on:

farmers not received pmkisan money ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಎಲ್ಲಾ ಅರ್ಹತೆಯಿದ್ದರೂ ಕೆಲವು ರೈತರಿಗೆ ಪಿಎಂ ಕಿಸಾನ್ ಹಣ ಏಕೆ ಜಮೆಯಾಗುತ್ತಿಲ್ಲ? ಯಾವ ಕಾರಣಕ್ಕಾಗಿ ಹಣ ತಡೆಹಿಡಿಯಲಾಗುತ್ತಿದೆ? ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರೈತರು ತಮ್ಮ ಹೆಸರನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಸಿರುತ್ತಾರೆ.ಇನ್ನೂ ಕೆಲವು ರೈತರ ಹೆಸರು ಕೃಷಿ ಇಲಾಖೆಯಲ್ಲಿ ಇರುವ ರೈತರ ಮಾಹಿತಿ ಆಧಾರದ ಮೇಲೆ ನೋಂದಣಿಯಾಗಿರುತ್ತದೆ. ಆರಂಭದಲ್ಲಿ ರೈತರ ಹೆಸರುಗಳನ್ನು ತಾವಾಗಿಯೇ ನೋಂದಣಿ ಮಾಡಲಾಗಿರುತ್ತದೆ. ಆದರೆ ಆಗ ದಾಖಲೆಗಳನ್ನು ಪರಿಶೀಲನೆ ಮಾಡದೆ ಕೃಷಿ ಇಲಾಖೆಯಲ್ಲಿರುವ ಮಾಹಿತಿ ಆಧಾರದ ಮೇಲೆ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಲಾಗಿರುತ್ತದೆ. ಆದರೆ ಇತ್ತೀಚೆಗೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

farmers not received pmkisan money ಯಾವ ಯಾವ ದಾಖಲೆ ಪರಿಶೀಲಿಸಲಾಗುತ್ತಿದೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿದ ರೈತರ ಜಮೀನಿಗೆ ಸಂಬಂಧಿಸಿದ ಪಹಣಿಗಳು (ಆರ್.ಟಿ.ಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಈ ದಾಖಲೆಗಳ ಪರಿಶೀಲನೆಯಲ್ಲಿ ವ್ಯತ್ಯಾಸವಿದ್ದುದ್ದರಿಂದ ಕೆಲವು ರೈತರಿಗೆ ಪಿಎಂ ಕಿಸಾನ್ ಹಣ ತಡೆ ಹಿಡಿಯಲಾಗುತ್ತಿದೆ. ಅಂದರೆ ಜಮೀನಿನ ದಾಖಲೆಗಳು, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಈ ಮೂರು ದಾಖಲೆಗಳಲ್ಲಿ ರೈತರ ಹೆಸರು, ತಂದೆಯ ಹೆಸರು ಒಂದೇ ಆಗಿರಬೇಕು. ಸ್ವಲ್ಪ ವ್ಯತ್ಯಾಸವಿದ್ದರೂ ಸಮಸ್ಯೆಯಾಗುತ್ತಿದೆ.

ಜಮೀನಿನ ಪಹಣಿಗಳಲ್ಲಿ ರೈತರ ಹೆಸರು, ತಂದೆಯ ಹೆಸರಿನಲ್ಲಿ ಸ್ಪೆಲಿಂಗ್ ಮಿಸ್ಟೆಕ್ ಇದ್ದರೂ ಸಮಸ್ಯೆಯಾಗುತ್ತಿದೆ. ಹೆಸರು ಹೊಂದಾಣಿಕೆಯಾಗುತ್ತಿಲ್ಲವೆಂದು ಪಿಎಂ ಕಿಸಾನ್ ಯೋಜನೆಯ ಹಣ ತಡೆಹಿಡಿಯಲಾಗುತ್ತಿದೆ.

ಇದನ್ನೂ ಓದಿ : ನಿಮ್ಮೂರಿನಲ್ಲಿ ಯಾರಿಗೆ Pension ಬರುತ್ತಿದೆ? ಯಾರಿಗೆ ಬರುತ್ತಿಲ್ಲ: ಮೊಬೈಲ್ ನಲ್ಲೇ ಚೆಕ್ ಮಾಡಿ

ಹಾಗಾಗಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಒಮ್ಮೆ ತಮ್ಮಲ್ಲಿರುವ ಜಮೀನಿನ ದಾಖಲೆಗಳು, ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿರುವ ಹೆಸರು ಹೊಂದಾಣಕೆಯಾಗುತ್ತಿದೆಯೇ? ಒಂದು ವೇಳೆ ಹೊಂದಾಣಿಕೆಯಾಗುತ್ತಿಲ್ಲವಾದರೆ ಯಾವ ದಾಖಲೆಯಲ್ಲಿ ಹೆಸರು ಹೊಂದಾಣಕೆಯಾಗುತ್ತಿಲ್ಲೆಂದು ಪರಿಶೀಲನೆ ಮಾಡಿಕೊಂಡು ಸರಪಿಡಿಸಕೊಳ್ಳಬೇಕು.

ಎಲ್ಲಾ ದಾಖಲೆ ಸರಿಯಿದ್ದರೂ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲವೇ? ಇಲ್ಲೊಮ್ಮೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಎಲ್ಲಾ ದಾಖಲೆಗಳಲ್ಲಿ ಹೆಸರು ತಂದೆಯ ಹೆಸರು ಒಂದೇ ತರಹವಾಗಿದ್ದರೂ ನಿಮಗೆ ಪಿಎಂ ಕಿಸಾನ್ ಏಕಾಏಕಿ ತಡೆಹಿಡಿಯಲಾಗಿದ್ದರೆ ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿಂದ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಏಕೆವೈಸಿ ಸ್ಟೇಟಸ್ ಚೆಕ್ ಮಾಡಬೇಕು.

ಅಂದರೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕು. ನಂತರ ಎಲಿಜಿಬಿಲಿಟಿ ಚೆಕ್ ಮಾಡಬೇಕು. ಇಲ್ಲಿಯೂ ಯಸ್ ಇರಬೇಕು. ನಂತರ ಲ್ಯಾಂಡ್ ಸೀಡಂಗ್ ನಲ್ಲಿ ಚೆಕ್ ಮಾಡಬೇಕು. ಲ್ಯಾಂಡ್ ಸೀಡಿಂಗ್ ನಲ್ಲಿ ನೋ ಇದ್ದರೆ ನೀವು ಆನ್ಲೈನ್ ನಲ್ಲಿ ನೋಂದಣಿ ಮಾಡಿಸುವಾಗ ನಿಮ್ಮ ದಾಖಲೆ ಸರಿಯಾಗಿ ಅಪ್ಲೋಡ್ ಆಗಿರಿಲಿಕ್ಕಿಲ್ಲ.

ಜಮೀನಿಗೆ ಸಂಬಂಧಿಸಿದ ದಾಖಲೆಗಳು ಪರಿಶೀಲನೆಯಾಗುತ್ತಿಲ್ಲವೆಂದರ್ಥ. ಹಾಗಾಗಿ ನೀವು ಒಮ್ಮೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಲ್ಯಾಂಡಿ ಸೀಡಿಂಗ್ ನೋ ಎಂದು ಬರುತ್ತಿದೆ ಎಂದು ಸಂಬಧಿಸಿದ ಅಧಿಕಾರಿಗಳಿಗೆ ಹೇಳಿ ದಾಖಲೆಯನ್ನು ಅಪ್ಲೋಡ್ ಮಾಡಿಸಬೇಕು.  ಇಲ್ಲದಿದ್ದರೆ ಸಿಎಸ್.ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

Leave a Comment