ಬೆಳೆ ಹಾನಿ ಪರಿಹಾರ ಹೆಚ್ಚಳ ಇಲ್ಲಿ ಅರ್ಜಿ ಸಲ್ಲಿಸಿ

Written by Ramlinganna

Updated on:

apply for crop compensation ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಬೆಳೆ ಹಾನಿಯಾದರೆ ರೈತರಿಗೆ ಸರ್ಕಾರವು ಬೆಳೆ ಹಾನಿ ಪರಿಹಾರ ಘೋಷಿಸುತ್ತದೆ. ಹೌದು, ಈ ವರ್ಷ ಬೆಳೆ ಹಾನಿ ಪರಿಹಾರವನ್ನು ಹೆಚ್ಚಿಸಿದೆ. ಯಾವ ಬೆಳೆಗೆ ಎಷ್ಟು ಪರಿಹಾರ ಹಣ ಹೆಚ್ಚಿಸಿದೆ? ಯಾವ ರೈತರಿಗೆ ಈ ಪರಿಹಾರ ಹಣ ಸಿಗಲಿದೆ ಎಂಬಿತ್ಯಾದಿಗಳ ಮಾಹಿತಿ ಇಲ್ಲಿದೆ.

ರಾಜ್ಯದ ಹಲವೆಡೆ ಅತೀವೃಷ್ಟಿಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಅತೀ ಮಳೆಯಿಂದಾಗಿ ರೈತರ ಜಮೀನಿನಲ್ಲಿ ಅಪಾರ ಪ್ರಮಾಣದ ನೀರು ನಿಂತು ರೈತರ ಬೆಳೆ ಹಾನಿಯಾಗುತ್ತಿದೆ.ಹಾಗೂ ಕೆಲವು ಕಡೆ ನದಿ ದಂಡೆಯಲ್ಲಿ ಪ್ರವಾಹ ನೀರು ಜಮೀನಿಗೆ ನುಗ್ಗಿ ಅಪಾರ ಬೆಳೆ ಹಾನಿಯಾಗುತ್ತಿದ್ದರಿಂದ ಸರ್ಕಾರವು ಪರಿಹಾರ ಹಣ ಹೆಚ್ಚಿಸಿದೆ.

ಹೌದು, ರಾಜ್ಯ ಸರ್ಕಾರವು2023ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅತೀವೃಷ್ಟಿ ಪ್ರವಾಹದಿಂದಾಗಿ ಬೆಳೆ ಹಾನಿಗೆ ಅರ್ಹ ರೈತರಿಗೆ ಗರಿಷ್ಠ 2 ಹೆಕ್ಟೇರಿಗೆ ಸೀಮಿತವಾಗಿ ಇನಪುಟ್ ಸಬ್ಸಿಡಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆ ನಷ್ಟಕ್ಕೆ ಕ್ರಮವಾಗಿ ಹೆಕ್ಟೇರಿಗೆ 5100 ರೂಪಾಯಿ 8000 ರೂಪಾಯಿ ಹಾಗೂ 5500 ರೂಪಾಯಿ ಇನ್ಪುಟ್ ಸಬ್ಸಿಡಿ ಹೆಚ್ಚಳ ಮಾಡಿದೆ.

ಅರ್ಹ ರೈತರಿಗೆ ಎಸ್.ಡಿ.ಆರ್.ಎಫ್ / ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಮೊತ್ತ ಪಡೆಯಲು ಸರ್ಕಾರ ಷರತ್ತು ವಿಧಿಸಿದೆ.

apply for crop compensation ಪ್ರತಿ ಹೆಕ್ಟೇರಿಗೆ ಎಷ್ಟು ಪರಿಹಾರ ಹಣ ಹೆಚ್ಚಿಸಿದೆ?

ಮಳೆಯಾಶ್ರಿತ ಬೆಳೆಗಳಿಗೆ ಮಾರ್ಗಸೂಚಿ ದರ 8500 ರೂಪಾಯಿ ಇದ್ದು ಇದಕ್ಕೆ 5100 ಹೆಚ್ಚುವರಿಯಾಗಿ ಒಟ್ಟು 13600 ರೂಪಾಯಿ ನೀಡಲಾಗುವುದು. ನೀರಾವರಿ ಬೆಳೆಗೆ ಮಾರ್ಗಸೂಚಿ ದರ 17000 ರೂಪಾಯಿ ಆಗಿದ್ದು ಹೆಚ್ಚುವರಿ ದರ 8000 ರೂಪಾಯಿ ಆಗಿದೆ. ಒಟ್ಟು 25 ಸಾವಿರ ರೂಪಾಯಿ ನೀಡಲಾಗುವುದು. ಅದೇ ರೀತಿ ಬಹುವಾರ್ಷಿಕ ಬೆಳೆಗಳಿಗೆ ಮಾರ್ಗಸೂಚಿ ದರ 22500 ರೂಪಾಯಿ ಆಗಿದೆ. ಇದಕ್ಕೆ 5500 ಹೆಚ್ಚುವರಿ ದರ ನಿಗದಿ ಪಡಿಸಿ ಒಟ್ಟು 28 ಸಾವಿರ ರೂಪಾಯಿ ನೀಡಲಾಗುವುದು.

ಬೆಳೆ ಹಾನಿ ಪರಿಹಾರ ಯಾವಾಗ ಘೋಷಿಸಲಾಗುವುದು?

ಪ್ರತಿ ವರ್ಷ ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾದರೆ  ರೈತರಿಗೆ ಸಹಾಯವಾಗಲೆಂದು ಪರಿಹಾರ ಹಣ ಘೋಷಿಸುತ್ತದೆ. ರಾಜ್ಯದಲ್ಲಿ ನಷ್ಟವಾದ ಬೆಳೆಗಳ ಪ್ರಮಾಣದ ಆಧಾರದ ಮೇಲೆ ರೈತರಿಗೆ ಪರಿಹಾರ ಹಣ ನೀಡಬೇಕೆಂದು ಸರ್ಕಾರ ಸೂಚಿಸುತ್ತದೆ.

ಇದನ್ನೂ ಓದಿ ಈ ಜಿಲ್ಲೆಯ ರೇಶನ್ ಕಾರ್ಡ್ ದಾರರಿಗೆ ಅನ್ನಭಾಗ್ಯದ ಹಣ ಜಮೆ : ಯಾರಿಗೆ ಎಷ್ಟು ಜಮೆ? ಇಲ್ಲಿದೆ ಮಾಹಿತಿ

ಆಗ ರೈತರಿಂದ ಅರ್ಜಿ ಪಡೆದು ಪರಿಹಾರ ತಂತ್ರಾಂಶದಲ್ಲಿ ರೈತರ ಮಾಹಿತಿ ಅಪ್ಲೋಡ್ ಮಾಡಿದ ನಂತರ ಪರಿಹಾರ ನೀಡಲಾಗುವುದು.

ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಕಳೆದ ವರ್ಷ ಅಂದರೆ 2022-2023, 2021-2022 ನೇ ಸಾಲಿನಲ್ಲಿ ತಮಗೆಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು  ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು ಫ್ಲಡ್ , ವರ್ಷ, ಆಯ್ಕೆ ಮಾಡಿಕೊಂಡು ಆಧಾರ್ ಕಾರ್ಡ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ಪರಿಹಾರ ಹಣ ಪಡೆಯಲು ರೈತರು ಅರ್ಜಿ ಎಲ್ಲಿ ಸಲ್ಲಿಸಬೇಕು?

ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ರೈತರ ಬೆಳೆ ಹಾನಿಯಾದರೆ ಅಂದರೆ ನೀರಿನಿಂದ ಕೊಚ್ಚಿ ಹೋದರೆ ಸಂಪೂರ್ಣ ನೀರಲ್ಲಿ ಮುಳಗಿ ಹೋದರೆ ಅರ್ಜಿ ಕರೆದರೆ ಹತ್ತಿರದ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಬೇಕು. ರೈತರು ಬೆಳೆ ಬೆಳೆ, ಎಷ್ಟುಎಕರೆ ಜಮೀನಿನಲ್ಲಿ ಬೆಳೆಯಿದೆ ಹಾಗೂ ಬೆಳೆ ಹೇಗೆ ಹಾನಿಯಾಗಿದೆ ಎಂಬುದನ್ನು ರೈತರು ಅರ್ಜಿಯಲ್ಲಿ ನಮೂದಿಸಬೇಕು. ರೈತರ ಸರ್ವೆ ನಂಬರ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕಾಗುತ್ತದೆ.

Leave a Comment