Bele vime jame ಆಗಬೇಕಾದರೆ ರೈತರೇನು ಮಾಡಬೇಕು?

Written by Ramlinganna

Published on:

ಬೆಳೆ ವಿಮೆ ಪಾವತಿಸಿದ ನಂತರ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಯಾರಿಗೆ ಸಂಪರ್ಕಿಸಬೇಕು? Bele vime jame ಯಾಗಬೇಕಾದರೆ ಯಾವಾಗ ಕರೆ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ

ಮುಂಗಾರು ಹಿಂಗಾರು ಹಂಗಾಮಿಗೆ ರೈತರು ಬೆಳೆ ವಿಮೆ ಪಾವತಿಸುತ್ತಾರೆ. ಆದರೆ ಬೆಳೆ ವಿಮೆ ಪಾವತಿಸಿದ ನಂತರ ಬೆಳೆ ಹಾನಿಯಾದರೆ ಏನು ಮಾಡಬೇಕು? ಯಾರಿಗೆ ಕರೆ ಮಾಡಬೇಕು? ಯಾವಾಗ ಕರೆ ಮಾಡಬೇಕು? ಕರೆ ಮಾಡಿದಿದ್ದರೆ ಬೆಳೆ ವಿಮೆ ಹಣ ಜಮೆಯಾಗುವುದಿಲ್ಲವೇ ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ರೈತರು ಬೆಳೆ ವಿಮೆ ಹಣವನ್ನು ಪಾವತಿಸಿರುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದಾರೆ? ಬೆಳೆ ಹಾನಿಯಾದರೆ ವಿಮೆ ಹಣ ಜಮೆಯಾಗಲು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವು ರೈತರಿಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಬೆಳೆ ಹಾಳಾದರೂ ಸಹ ಮಾಹಿತಿಯ ಕೊರತೆಯಿಂದಾಗಿ ವಿಮೆ ಹಣದಿಂದ ವಂಚಿತರಾಗಿರುತ್ತಾರೆ. ಅಂತಹ ರೈತರಿಗಾಗಿ ಇಲ್ಲಿದೆ ಮಾಹಿತಿ.

ಬೆಳೆ ವಿಮೆ ಪಾವತಿಸಿದ ನಂತರ Bele vime jame ಜಮೆಯಾಗಬೇಕಾದರೆ ರೈತರೇನು ಮಾಡಬೇಕು?

ಬೆಳೆ ವಿಮೆ ಪಾವತಿಸಿದ ನಂತರ ರೈತರ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೂ72 ಗಂಟೆಯೊಳಗೆ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ದೂರು ನೀಡಿದ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ. ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಿ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಲು ವರದಿ ಸಲ್ಲಿಸುತ್ತಾರೆ. ಆಗ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.

ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ? ತಿಳಿದುಕೊಳ್ಳುವುದು ಹೇಗೆ?

ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ? ಎಂಬುದನ್ನು ತಿಳಿದುಕೊಳ್ಳಲು ಈ

https://samrakshane.karnataka.gov.in/HomePages/frmKnowYourInsCompany.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ನಂತರ ನೀವು ಆ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ.

ವಿಮೆ ಹಣ ಪಾವತಿಸಿದ್ದರೆ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Search ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು. ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಇಲ್ಲೇ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ ಪಹಣಿಗೆ Aadhaarcard link ಮೊಬೈಲ್ ನಲ್ಲಿ ಹೀಗೆ ಮಾಡಿ

Leave a Comment