ವ್ಯಾಟ್ಸ್ ಆ್ಯಪ್ ಬಳಸುವವರಿಗಿಲ್ಲೆರಿಗೂ ಈಗ ಹೊಸ Updates ಬಂದಿದೆ. ಹೊಸ ಅಪ್ಡೇಟ್ ನೋಂದಿಗೆ ವ್ಯಾಟ್ಸ್ ಆ್ಯಪ್ ಚಾನೆಲ್ ನ ಸಂಪೂರ್ಣ ಮಾಹಿತಿ ಇಲ್ಲಿದೆ.
ತಮಗೆಲ್ಲಾ ಗೊತ್ತಿದ್ದ ಹಾಗೆ ಹಿಂದೆ ವ್ಯಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಸೇರಲು 256 ಜನರಿಗೆ ಲಿಮಿಟ್ ಇತ್ತು. ನಂತರ ಇದನ್ನು ವ್ಯಾಟ್ಸ್ ಆ್ಯಪ್ ಗ್ರೂಪ್ ಸೇರಲು 512 ಜನರಿಗೆ ಲಿಮಿಟ್ ಗೆ ಏರಿಸಲಾಯಿತು. ವ್ಯಾಟ್ಸ್ ಅಪ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ವ್ಯಾಟ್ಸ್ ಆ್ಯಪ್ ಗ್ರೂಪ್ ಸೇರಲು ಇದ್ದ ಲಿಮಿಟ್ ನ್ನುಮತ್ತೆ512 ರಿಂದ1024 ಕ್ಕೆ ಹೆಚ್ಚಿಸಲಾಯಿತು. ಈಗ ಪ್ರಸ್ತುತ ಒಂದು ವ್ಯಾಟ್ಸ್ ಆ್ಯಪ್ ಗ್ರೂಪ್ ಸೇರಲು 1024 ಜನರಿಗೆ ಅವಕಾಶವಿದೆ. ಆದರೆ ಈಗ unlimited ಫಾಲೋವರ್ಸ್ ಮಾಡಲು ಹೊಸ ಅಪಡೇಟ್ ಬಂದಿದೆ.
ಹೌದು, ಇತ್ತೀಚೆಗೆ ನಿಮ್ಮ ವಾಟ್ಸ್ ಆ್ಯಪ್ ನಲ್ಲಿ ಸ್ಟೇಟಸ್ ಸ್ಥಳದಲ್ಲಿ ಅಪಡೇಟ್ಸ್ ಕಾಣಿಸುತ್ತಿರಬಹುದು. ಒಂದು ವೇಳೆ ಅಪಡೇಟ್ಸ್ ಕಾಣಿಸದೆ ಇದ್ದರೆ ಮುಂದಿನ ವಾರದೊಳಗೆ ಅಪಡೇಟ್ ಕಾಣಿಸಬಹುದು. ಈಗಾಗಲೇ ವ್ಯಾಟ್ಸ್ ಆ್ಯಪ್ ಬಳಕೆದಾರರ ಬಹಳಷ್ಟು ಮೊಬೈಲಿಗೆ ಹೊಸ ಅಪಡೇಟ್ ಬಂದಿದೆ.
ವ್ಯಾಟ್ಸ್ ಆ್ಯಪ್ ನ ಮೊದಲಿನ ಸ್ಟೇಟಸ್ ಸ್ಥಳದಲ್ಲಿ ಈಗ ನಿಮ್ಮ ಮೊಬೈಲ್ ನಲ್ಲಿ update ಕಾಣಿಸುತ್ತಿರಬಹುದು. ಆ ಅಪ್ಡೇಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಅಲ್ಲಿ ಹೊಸದಾಗಿ ರಚನೆಯಾದ ವ್ಯಾಟ್ಸ್ ಆ್ಯಪ್ ಚಾನೆಲ್ ಕಾಣಿಸುತ್ತದೆ. ಅಂದರೆ ಇಲ್ಲಿಯವರೆಗೆ ವ್ಯಾಟ್ಸ್ ಚಾನೆಲ್ ಯಾರ ಯಾರ ಹೆಸರಿಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಅವರಿಗೆ ಇಲ್ಲಿಯವರೆಗೆ ಎಷ್ಟು ಜನ ಫಾಲೋವರ್ಸ್ ಇದ್ದಾರೆ ಎಂಬುದು ಸಹ ಕಾಣಿಸುತ್ತದೆ. ಅಲ್ಲಿ ನಿಮಗೆ ಇಷ್ಟವಾದ ಚಾನೆಲ್ ಗೆ ನೀವು ಫಾಲೋ ಮಾಡಿದರೆ ಸಾಕು, ಅವರು ದಿನನಿತ್ಯ ಹಾಕುವ ಮಾಹಿತಿಗಳು ನಿಮಗೆ ಕಾಣಿಸುತ್ತವೆ.
ವ್ಯಾಟ್ಸ್ ಆ್ಯಪ್ ಚಾನೆಲ್ ನಲ್ಲಿ ಸೇರಿದ ಸದಸ್ಯರ ಫೋಟೋ, ಮೊಬೈಲ್ ನಂಬರ್ ಗಳು ಈಗ ಇನ್ನೊಬ್ಬ ಸದಸ್ಯರಿಗೆ ಕಾಣಿಸುವುದಿಲ್ಲ. ಆದರೆ ಹಿಂದೆ ವ್ಯಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಸೇರಿದ ಎಲ್ಲಾ ಸದಸ್ಯರ ಮೊಬೈಲ್ ನಂಬರ್ ಗಳು ಇನ್ನೊಬ್ಬ ಸದಸ್ಯರಿಗೆ ಕಾಣಿಸುತ್ತಿತ್ತು. ಈಗ ವ್ಯಾಟ್ಸ್ ಆ್ಯಪ್ ಚಾನೆಲ್ ನಲ್ಲಿ ಸೇರಿದ ಎಲ್ಲಾ ಸದಸ್ಯರ ಮಾಹಿತಿಯನ್ನು ಗೌಪ್ಯವಾಗಿಡಲು ಈ ಅಪಡೇಟ್ ಬಂದಿದೆ.
ಏನಿದು ವ್ಯಾಟ್ಸ್ ಆ್ಯಪ್ ಚಾನೆಲ್ ?
ತಮಗೆಲ್ಲಾ ಗೊತ್ತಿದ್ದ ಹಾಗೆ ನೀವು instagram, face book, twitter, telegram ಗಳ ಬಗ್ಗ ಕೇಳಿರಬಹುದು. ಇವುಗಳನ್ನು ನೀವು ಬಳಸುತ್ತಿರಬಹುದು. ಈಗ ವ್ಯಾಟ್ಸ್ ಆ್ಯಪ್ ಸಹ ಅದೇ ಗುಂಪಿಗೆ ಸೇರಿಸಲು ಈ ಹೊಸ ಅಪ್ಡೇಟ್ ಬಂದಿದೆ.
ಅಂದರೆ ಟೆಲಿಗ್ರಾಮ್, ಇನಸ್ಟಾಗ್ರಾಮ, ಫೇಸ್ಬುಕ್ ಹಾಗೂ ಟ್ವೀಟರ್ ನಲ್ಲಿ ಫಾಲೋವರ್ಸ್ ಗಳಿರುತ್ತಾರೆ. ಅಲ್ಲಿ ಅನಲಿಮಿಟೆಡ್ ಫಾಲೋವರ್ಸ್ ಗಳನ್ನು ಸೇರಿಸಬಹುದು. ಇಲ್ಲಿಯೂ ಸಹ ನಿಮ್ಮ ಚಾನೆಲ್ಗೆ ಈಗ ಕೋಟ್ಯಾಂತರ ಫಾಲೋವರ್ಸ್ ಗಳು ಸೇರಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ನೀವು ಟ್ವಿಟರ್ ಮತ್ತು ಟೆಲಿಗ್ರಾಮ್ ನಂತೆ ಇಲ್ಲಿಯೂ ಹೊಸ ಚಾನೆಲ್ ಆರಂಭಿಸಬಹುದು.
ಹೌದು, ನಿಮ್ಮ ವ್ಯಾಟ್ಸ್ ಆ್ಯಪ್ ಓಪನ್ ಮಾಡುವಾಗ ನಿಮಗೆ ಅಪಡೇಡ್ಸ್ ಮೇಲೆ ಕ್ಲಿಕ್ ಮಾಡಿದ ನಂತರ channels ಕಾಣಿಸುತ್ತದೆ. ಅಲ್ಲಿ ಕಾಣುವ ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ ನೀವು ಹೊಸ ಚಾನೆಲ್ ಆರಂಭಿಸಬಹುದು. ನೀವು ಸಹ ಇಲ್ಲಿ ಚಾನೆಲ್ ಆರಂಭಿಸಿ ನಿಮ್ಮದೇ ಆದ ಫಾಲೋವರ್ಸ್ ಗಳನ್ನು ಬೆಳೆಸಬಹುದು. ಅತೀ ಶೀಘ್ರದಲ್ಲಿ ಹೊಸ ಚಾನೆಲ್ ಆರಂಭಿಸುವ ಆಯ್ಕೆ ಎಲ್ಲರಿಗೂ ಬರಬಹುದು. ಸದ್ಯ ಕೆಲವು ಸೆಲೆಬ್ರಿಟಿ, ರಾಜಕಾರಣಿಗಳು, ನಟ ನಟಿಯರು, ನ್ಯೂಸ್ ಚಾನೆಲ್ ಗಳಿಗೆ ಈ ಅವಕಾಶ ನೀಡಲಾಗಿದೆ.