ಸಾಮಾನ್ಯವಾಗಿ ಬಹುತೇಕ ಜನರಿಗೆ ಪೋಡಿ ಬಗ್ಗೆ ಗೊತ್ತಿರುತ್ತದೆ. ಒಬ್ಬರಿಗಿಂತ ಹೆಚ್ಚು ಜನರ ಹೆಸರು ಒಂದೇ ಸರ್ವೆ ನಂಬರ್ ನಲ್ಲಿದ್ದರೆ ಅದನ್ನು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿ ಪಹಣಿ ಮಾಡಿಸಿಕೊಳ್ಳಬಹುದು. ಆದರೆ ಪೋಡಿಯಲ್ಲಿಯೂ ನಾಲ್ಕು ವಿಧಗಳಿರುತ್ತವೆ. ತತ್ಕಾಲ್ ಪೋಡಿ, ದರ್ಖಾಸ್ ಪೋಡಿ, ಅಲಿನೇಷನ್ ಪೋಡಿ ಹಾಗೂ ಮುಟೇಷನ್ ಪೋಡಿ. ರೈತರ ಮಾಹಿತಿಗಾಗಿ ದರ್ಖಾಸ್ ಪೋಡಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ದರ್ಖಾಸ್ ಪೋಡಿಯನ್ನು ಸರ್ಕಾರದ ಜಮೀನು ಗಡಿಭಾಗ ಗುರುತಿಸಲು ಬಳಸುತ್ತಾರೆ. (ಉದಾಹರಣೆಗೆ ಗೋಮಾಳ, ಗಾಯರಾಣ, ಹುಲ್ಲುಬನ್ನಿ) ಅಥವಾ ಸರ್ಕಾರದ ಅಧೀನದಲ್ಲಿರುವ ಭೂಮಿಯಾಗಿರುತ್ತದೆ.
ಭೂರಹಿತರಿಗೆ, ಸಣ್ಣ ರೈತರಿಗೆ ಕೃಷಿ ಮಾಡಲು ಗೋಮಾಳ, ಗಾಯರಾಣ, ಹುಲ್ಲುಬನ್ನಿ ಜಮೀನಿನನ್ನು ಗುರುತಿಸಿ ಸರ್ಕಾರದಿಂದ ಗೋಮಾಳ, ಗಾಯರಾಣ, ಹುಲ್ಲುಬನ್ನಿ ಜಮೀನನ್ನು ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಮಂಜೂರು ಮಾಡಲಾಗುತ್ತದೆ. ಹತ್ತಾರು ವರ್ಷಗಳಿಂದ ಗೋಮಾಳದಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೂ ಸರ್ಕಾರ ಜಮೀನು ಮಂಜೂರು ಮಾಡಲಾಗುತ್ತದೆ. ಆದರೆ ಮಂಜೂರು ಮಾಡಿದ ಜಮೀನಿಗೆ ದರಖಾಸ್ತು ಪೋಡಿ ಸಿಕ್ಕರೆ ಮಾತ್ರ ಆ ಜಮೀನಿಗೆ ನೀವು ಸಂಪೂರ್ಣ ಮಾಲೀಕರಾಗುತ್ತೀರಿ. ದರಖಾಸ್ತು ಪೋಡಿ ಪಡೆದುಕೊಂಡರೆ ಸಾಲ, ಮಾರಾಟ ಮಾಡಲಾಗುವುದು. ಅಷ್ಟೇ ಅಲ್ಲ ಜಮೀನು ವಿಭಾಗ ಮಾಡಲು ದರಖಾಸ್ತು ಪೋಡಿ ಬೇಕಾಗುತ್ತದೆ.
ಗೋಮಾಳದಲ್ಲಿ ಕೃಷಿ ಮಾಡಲು ಸರ್ಕಾರ ಜಮೀನು ಮಂಜೂರು ಮಾಡುತ್ತದೆ. ಆದರೆ ರೈತರು ನಂತರ ರೈತರು ಸರ್ಕಾರದ ಭೂ ಮಂಜೂರು ಪ್ರಮಾಣ ಪತ್ರ ಮತ್ತು ರೈತ ಸ್ವಾಧೀನ ಜಾಗದಲ್ಲಿ ಇರುವ ಸ್ಥಳವನ್ನು ಅಳತೆ ಮಾಡಿ ಪೋಡಿ ಪೋಡಿಸುವುದಿಲ್ಲ. ಪೋಡಿ ಮಾಡಿದ ನಂತರ ಪ್ರತ್ಯೇಕವಾಗಿ ರೈತರು ಪಹಣಿ ನಂಬರ್ ಮಾಡಿಕೊಳ್ಳಬೇಕು. ಅಂದಾಗ ನಿಮಗೆ ಸಂಪೂರ್ಣ ಅಧಿಕಾರವಿರುತ್ತದೆ.
ಗೋಮಾಳ, ಗಾಯರಾಣ, ಹುಲ್ಲುಬನ್ನಿ ಪ್ರದೇಶಗಳಲ್ಲಿ ಭೂರಹಿತರು ಸಾಗುವಳಿ ಮಾಡಿದರೆ ಅಂತಹವರ ಪೂರ್ವಾಪರಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿ ನೀಡುವ ಪರಿಪಾಟ ಹಿಂದಿನಿಂದಲೂ ನಡೆದುಬಂದಿದೆ. ಇದಕ್ಕೆ ಪ್ರತ್ಯೇಕ ಕಾನೂನು ಮತ್ತು ಭೂ ಮಂಜೂರಾತಿ ಸಮಿತಿಗಳಿರುತ್ತವೆ. ಅಕ್ರಮ ಸಕ್ರಮದಡಿಯಲ್ಲಿ ಒಂದು ಊರಿನಲ್ಲಿ ಎಷ್ಟು ಅರ್ಜಿಗಳು ಬಂದಿರುತ್ತವೆ ಎಂಬುದನ್ನು ಪರಿಶೀಲಿಸಿ ಭೂ ರಹಿತರಿಗೆ ಗೋಮಾಳ ಜಮೀನು ಮಂಜೂರು ಮಾಡಲಾಗುತ್ತದೆ.
ಪೋಡಿಗೆ ಬೇಕಾಗುವ ದಾಖಲೆಗಳು
ದರ್ಖಾಸ್ ಪೋಡಿಗೆಗೆ ಭೂ ಮಂಜೂರು ಪ್ರಮಾಣ ಪತ್ರ, ರೈತನ ಆಧಾರ್ ಕಾರ್ಡ್ ಪಹಣಿ, ಫೋಟೋ ಬೇಕಾಗುತ್ತದೆ. ನಾಡ ಕಚೇರಿಯ ಅಥವಾ ತಹಶೀಲ್ ಕಚೇರಿ ಸುತ್ತಮುತ್ತಲಿರುವ ಝರಾಕ್ಸ್ ಅಂಗಡಿಯಲ್ಲಿ ಅರ್ಜಿ ನಮೂನೆ ಸಿಗುತ್ತದೆ. ಇನ್ನೂ ಅಗತ್ಯ ದಾಖಲೆಗಳು ಬೇಕಾಗಬಹುದು.ಈ ಎಲ್ಲಾ ಅಗತ್ಯ ದಾಖಲೆಗಳನ್ನು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ ಸರ್ವೆ ಮಾಡುವವರು ನಿಮ್ಮ ಜಮೀನಿಗೆ ಬಂದು ಅಳತೆ ಮಾಡುತ್ತಾರೆ. ಅಲ್ಲಿ ಬೌಂಡ್ರಿ ಗುರುತಿಸಿ ಅಗತ್ಯ ದಾಖಲೆಗಳನ್ನು ತಯಾರು ಮಾಡುತ್ತಾರೆ. ಆಗ ಕಂದಾಯ ಇಲಾಖೆಯಿಂದ ನಿಮ್ಮ ಹೆಸರಿನ ಮೇಲೆ ಸರ್ವೆ ನಂಬರ್ ಬರುತ್ತದೆ.
ಪೋಡಿ ಮಾಡುವುದರಿಂದ ಆಗುವ ಪ್ರಯೋಜನ?
ರೈತನ ಹೆಸರಿಗೆ ಪೋಡಿ ಮಾಡಿಸುವುದು ಅಗತ್ಯವಾಗಿದೆ, ನಿಮ್ಮ ಹೆಸರಿಗೆ ಪೋಡಿಯಾದರೆ ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲಕತ್ವ ಖಾತ್ರಿ ಪಡೆದುಕೊಳ್ಳಬಹುದು. ಅಕ್ರಮಣ ಆಗುವುದಿಲ್ಲ. ಬೆಳೆ ವಿಮೆ ಮಾಡಿಸಬಹುದು. ಸರ್ಕಾರದಿಂದ ಸೌಲಭ್ಯಗಳೂ ಸಿಗುತ್ತದೆ.