ನಿಮ್ಮ ಸರ್ವೆ ನಂಬರಿನ ಪಹಣಿಯಲ್ಲಿ ಯಾವ ರೈತರಿಗೆ ಎಷ್ಟು ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನಿದೆ? ಯಾರ ಯಾರ ಹೆಸರಿದೆ? ಯಾರಿಗೆ ಎಷ್ಟು ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ದೇಶದ ಯಾವ ಮೂಲೆಯಿಂದಲೂ ತಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ಅಕ್ಕಪಕ್ಕದ ಮಾಲಿಕರ ಹೆಸರು, ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಇದು ತುಂಬಾ ಸರಳವಾಗಿದೆ?  ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಬೇಕೆಂದುಕೊಂಡಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ರೈತರು ಮೊಬೈಲ್ ನಲ್ಲೇ ಸರ್ವೆ ನಂಬರ್ ನಲ್ಲಿ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಚೆಕ್ ಮಾಡುವುದು ಹೇಗೆ?

ರೈತರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ತಮ್ಮ ಸರ್ವೆ ನಂಬರಿನಲ್ಲಿ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಸೆಲೆಕ್ಟ್ ಸರ್ವೆ ನಂಬರ್ ಕೆಳಗಡೆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ  ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಸರ್ವೆ ನಂಬರ್ ನಮೂದಿಸಿದ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಸರ್ನೋಕ್ ಕಾಲಂ ನಲ್ಲಿ ಹಿಸ್ಸಾ ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಪಿರಿಯಡ್ ನಲ್ಲಿ ಪ್ರಸಕ್ತ ವರ್ಷ 2022-2023 ಆಯ್ಕೆ ಮಾಡಿಕೊಳ್ಳಬೇಕು. ಇಯರ್ ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Fetch Details ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ಅಪಡೇಟ್ ಆಗುತ್ತದೆ. Owner Details  ಕೆಳಗಡೆ ಆ ಸರ್ವೆ ನಂಬರ್ ನಲ್ಲಿರುವ ಮಾಲಕರ ಹೆಸರು ಹಾಗೂ ಅವರ ಹೆಸರಿಗೆ ಎಷ್ಟಿದೆ? ಆ ಜಮೀನಿನ ಖಾತಾ ನಂಬರ್ ಕಾಣುತ್ತದೆ. ಅದರ ಮುಂದುಗಡೆ ಇರುವ Details ಕೆಳಗಡೆ ಊರು, ಸರ್ವೆ ನಂಬರ್, ಸರ್ನೋಕ್ ನಂಬರ್, ಹಿಸ್ಸಾ ನಂಬರ್, ಪಹಣಿ ನೋಡುವ ಅವಧಿ ಕಾಣುತ್ತದೆ. ಅದರ ಕೆಳಗಡೆ View ಕಾಣುತ್ತದೆ. ಇಲ್ಲಿ ರೈತರು ಗಮನಿಸಬೇಕಾದ ಸಂಗತಿ ಏನೆಂದರೆ Owner ಜಮೀನು ಮಾಲಿಕರ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು. ಆಗ Details ಜಮೀನಿನ ಡಿಟೇಲ್ ನೋಡಲು ಅವಕಾಶವಿರುತ್ತದೆ. ಹಾಗಾಗಿ ಹೆಸರಿನ ಮೇಲೆ ಕ್ಲಿಕ್ ಮಾಡುವುದು ಮುಖ್ಯವಾಗಿರುತ್ತದೆ. ಹೆಸರಿನ ಮೇಲೆ ಕ್ಲಿಕ್ ಮಾಡಿದ ಮೇಲೆ View ಮೇಲೆ ಕ್ಲಿಕ್ ಮಾಡಬೇಕು. ನಂತರ ಪ್ರಸಕ್ತ ವರ್ಷದ ಪಹಣಿ ಓಪನ್ ಆಗುತ್ತದೆ.

ಇದನ್ನೂ ಓದಿ : ಬೆಳೆ ಹಾನಿಯಾದ ರೈತರು ಇಂದೇ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ: ಅರ್ಜಿ ಎಲ್ಲಿ ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

ನೀವು ನಮೂದಿಸಿದ ಸರ್ವೆ ನಂಬರ್, ಆ ಸರ್ವೆ ನಂಬರಿನಲ್ಲಿರು ಒಟ್ಟು ಜಮೀನು ಎಷ್ಟು ಎಕರೆ ಹಾಗೂ ಗುಂಟೆಯಲ್ಲಿದೆ. ಮಾಹಿತಿ ಇರುತ್ತದೆ. ಖರಾಬು ಜಮೀನು ಇದ್ದರೆ ಅದು ಸಹ ಕಾಣುತ್ತದೆ. ಆ ಸರ್ವೆ ನಂಬರಿನಲ್ಲಿ ಕಬ್ಜೆ ಅಥವಾ ಸ್ವಾಧೀನದಾರರ ಹೆಸರು ಆಗು ಅವರ ಹೆಸರಿಗೆ ಜಮೀನು ಎಷ್ಟಿದೆ ಹಾಗೂ ಖಾತಾ ನಂಬರ್ ಕಾಣುತ್ತದೆ. ಜಮೀನು ಮುಟೇಶನ್ ಆಗಿದ್ದರೆ ಯಾವ ದಿನಾಂಕದಂದು ಮುಟೇಶನ್ ಆಗಿದೆ. ಒಂದು ವೇಳೆ ರೈತರು ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ ಹಾಗೂ ಎಷ್ಟುರೂಪಾಯಿ ಸಾಲ ಪಡೆದಿದ್ದಾರೆ ಎಂಬ ಸಂದೇಶವೂ ಕಾಣುತ್ತದೆ.

ಪ್ರಸಕ್ತ ವರ್ಷ ಅಂದರೆ 2022-2023ನೇ ಸಾಲಿನ ಮುಂಗಾರು ಹಂಗಾಮಿಗೆ ಯಾವ ಬೆಳೆ ಬಿತ್ತಿದ್ದಾರೆ? ಎಷ್ಟು ಎಕರೆ ಜಮೀನು ಬಿತ್ತಿದ್ದಾರೆ ಎಂಬ ಮೆಸೆಜ್ ಸಹ ಕಾಣುತ್ತದೆ.

Leave a comment