ಮಳೆ ಯಾವಾಗ ಬರುತ್ತದೆ? ಈ ನಂಬರಿಗೆ ಕರೆ ಮಾಡಿ

Written by Ramlinganna

Updated on:

Varunmitra helpline number ಕರ್ನಾಟಕದ ಜನರು ಮನೆಯಲ್ಲಿಯೇ ಕುಳಿತು ಒಂದು ಕರೆ ಮಾಡಿ ತಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ? ಮಳೆ ಯಾವಾಗ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.

ಹೌದು, ರೈತರು, ಸಾರ್ವಜನಿಕರು, ತಮ್ಮೂರಿನ ಸುತ್ತಮುತ್ತ ಇಂದು ಮತ್ತು ನಾಳೆ ಮಳೆಯಾಗುತ್ತೋ ಇಲ್ಲವೋ? ಮಳೆಯಾದರೆ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬುದರ ಕುರಿತು ತಿಳಿದುಕೊಳ್ಳಬಹುದು.

Varunmitra helpline number ಸಾರ್ವಜನಿಕರು ವರುಣಮಿತ್ರ ಸಹಾಯವಾಣಿ ನಂಬರ್ 9243345433 ಗೆ

ಕರೆ ಮಾಡಿದರೆ ಸಾಕು, ಮನೆಯಲ್ಲಿಯೇ ಕುಳಿತು ಹವಾಮಾನದ ಮಾಹಿತಿ ಪಡೆಯಬಹುದು.

ನೈಸರ್ಗಿಕ ವಿಕೋಪದಿಂದ ಉಂಟಾಗುವ ಬೆಳೆ ಹಾನಿ ತಪ್ಪಿಸುವ ಉದ್ದೇಶದಿಂದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ದಿನದ 24 ಗಂಟೆ ಮಳೆ ಮತ್ತು ಹವಾಮಾನಕ್ಕೆ ಸಂಬಂಧಿಸಿದಂತೆ ಮುನ್ಸೂಚನೆ ನೀಡಲು ವರುಣಮಿತ್ರ ಸಹಾಯವಾಣಿಯನ್ನು ಆರಂಭಿಸಿದೆ.

ರೈತರಿಗೆ ತಮ್ಮ ಕೃಷಿ ಚಟುವಟಿಕೆಯನ್ನು ಸಮಯೋಚಿತವಾಗಿ ರೂಪಿಸಲು ಹಾಗೂ ಹವಾಮಾನ ವೈಪರಿತ್ಯದಿಂದ ಉಂಟಾಗಬಹುದಾದ ನಷ್ಟವನ್ನು ತಗ್ಗಿಸುವುದು ಈ ವರುಣಮಿತ್ರ ಸಹಾಯವಾಣಿಯ ಉದ್ದೇಶವಾಗಿದೆ.

ಇದನ್ನೂ ಓದಿ : ನಿಮ್ಮ ರೇಷನ್ ಕಾರ್ಡ್ ನಲ್ಲಿಕುಟುಂಬದ ಮುಖ್ಯಸ್ಥರು ಯಾರಿದ್ದಾರೆ? ಮೊಬೈಲ್ ನಲ್ಲೇ ಚೆಕ್ ಮಾಡಿ ಬದಲಾಯಿಸಿ

ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ಉಚಿತ ವರುಣಮಿತ್ರ ಸಹಾಯವಾಣಿಗೆ ರಾಜ್ಯದ ಯಾವುದೇ ಗ್ರಾಮದ ರೈತ ಯಾವಾಗ ಬೇಕಾದರೂ ಕರೆ ಮಾಡಿ, ಮಳೆ ಯಾವಾಗ ಬರುತ್ತದೆ? ಮಳೆ ಎಷ್ಟು ಪ್ರಮಾಣದಲ್ಲಿ ಬರಬಹುದು? ಉಷ್ಣಾಂಶ ಎಷ್ಟಿದೆ. ಗಾಳಿಯ ವೇಗ ಎಷ್ಟಿದೆ. ಯಾವ ದಿಕ್ಕಿನಿಂದ ಯಾವ ದಿಕ್ಕಿನೆಡೆಗೆ ಬೀಸುತ್ತಿದೆ ಎಂಬುದರ ಮಾಹಿತಿಯನ್ನು ಪಡೆಯಬಹುದು.

ಐದು ದಿನ ಮೊದಲೇ ಮಳೆಯ ಮಾಹಿತಿ ನೀಡುತ್ತದೆ ಮೇಘದೂತ್ ಆ್ಯಪ್

ರೈತರು ಐಧು ದಿನ ಮೊದಲೇ ತಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಮೇಘದೂತ್ ಆ್ಯಪ್ ಇನಸ್ಟಾಲ್ ಮಾಡಿಕೊಂಡರೆ ಸಾಕು, ಐದು ದಿನ ಮೊದಲೇ ಮಳೆಯ ಮಾಹಿತಿ ಪಡೆಯಬಹುದು.

ಮೇಘದೂತ್ ಆ್ಯಪ್ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು?

ರೈತರು ತಮ್ಮ ಮೊಬೈಲ್ ನಲ್ಲೇ ಮೇಘದೂತ್  ಆ್ಯಪ್ ಡೌನ್ಲೋಡ್  ಮಾಡಿಕೊಳ್ಳಬೇಕಾದರೆ ಈ

https://play.google.com/store/apps/details?id=com.aas.meghdoot&hl=en&gl=US

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Meghdoot ಎಂದು ಟೈಪ್ ಮಾಡಿ ಇನಸ್ಟಾಲ್ ಮಾಡಿಕೊಳ್ಳಬೇಕು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಇನ್ಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನೀವು ಯಾವ ಭಾಷೆಯಲ್ಲಿ ಮಾಹಿತಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಯಾವ ಮಾಹಿತಿ ನೀಡಲಾಗುವುದು ಹಾಗೂ ಯಾವ ಯಾವ ಭಾಷೆಯಲ್ಲಿ ಆ್ಯಪ್ ಲಭ್ಯವಿದೆ ಎಂಬ ಮಾಹಿತಿ ಕಾಣಿಸುತ್ತದೆ ಅಲ್ಲಿ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಮೊಬೈಲ್ ನಂಬರ್ ಹಾಕಿ ಮೇಘದೂತ್ ಲಾಗಿನ್ ಮಾಡಿ

ಮೇಘದೂತ್ ಲಾಗಿನ್ ಮಾಡಬೇಕಾದರೆ  ನಿಮ್ಮ ಮೊಬೈಲ್ ನಂಬರ್  ನಮೂದಿಸಬೇಕು.ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ಕನಿಷ್ಚ ಮತ್ತು ಗರಿಷ್ಠ ತಾಪಮಾನದ ಮಾಹಿತಿ ಕಾಣಿಸುತ್ತದೆ. ಗಾಳಿಯ ದಿಕ್ಕು ಸಹ ಕಾಣಿಸುತ್ತದೆ.

ಮುನ್ಸೂಚನೆ

ಮುನ್ಸೂಚನೆಮೇಲೆ ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ವಾರದ ಹವಾಮಾನ ವರದಿ ಕಾಣಿಸುತ್ತದೆ. ಮೋಡ ಕವಿದ ವಾತಾವರಣವಿದ್ದರೆ ಮೋಡ ಕವಿದ ವಾತಾವರಣ ಕಾಣಿಸುತ್ತದೆ. ಭೂತಕಾಲ ಮೇಲೆ ಕ್ಲಿಕ್ ಮಾಡಿ ಕಳೆದ ದಿನದ ಮಾಹಿತಿ ಪಡೆಯಬಹುದು.ಇದರೊಂದಿಗೆ ಹೋಂ ಪೇಜ್ ಮೇಲೆ ಕ್ಲಿಕ್ ಮಾಡಿದ ನಿಮ್ಮ ಜಿಲ್ಲೆಯಲ್ಲಿ ಬೆಳೆಯಲಾಗುವ ಬೆಳೆಗಳ ಮಾಹಿತಿ ಸಹ ಕಾಣಿಸುತ್ತದೆ.

Leave a Comment