ಏಪ್ರೀಲ್ 25 ರವರೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆ: ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

Written by Ramlinganna

Published on:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು  ಬಿಸಿಲ ಧಗೆಯಿಂದ ದಣಿದಿದ್ದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆಯಲಿದೆ.

ಏಪ್ರೀಲ್ 25 ರವರೆಗೆ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಏಪ್ರೀಲ್ 21 ಮತ್ತು 22 ರಂದು ಉಡುಪಿ ಜಿಲ್ಲೆಯಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಹವೆ ಮುಂದುವರೆಯಲಿದೆ.

ಉತ್ತರ ಒಳನಾಡಿನ ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಏಪ್ರೀಲ್ 21 ರಿಂದ ಏಪ್ರೀಲ್ 25 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏಪ್ರೀಲ್ 22 ಹಾಗೂ ಏಪ್ರೀಲ್ 25 ರಂದು ಬೀದರ್ ಮತ್ತು ಕಲಬುರಗಿಯಲ್ಲಿ ಮಳೆಯಾಗಲಿದೆ. ಏಪ್ರೀಲ್ 23 ರಿಂದ ಏಪ್ರೀಲ್ 25 ರವರೆಗೆ ಕೊಪ್ಪಳ  ಮತ್ತು ಯಾದಗಿರಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಏಪ್ರೀಲ್ 21 ರಿಂದ ಏಪ್ರೀಲ್  ರವರೆಗೆ ಮಳೆಯಾಗಲಿದೆ.

ಚಾಮರಾಜನಗರ, ಕೋಲಾರ ಹಾಗೂ ಮೈಸೂರು ಜಿಲ್ಲೆಗಳ ಕೆಲವು ಕಡೆ ಏಪ್ರೀಲ್ 23 ರಿಂದ ಏಪ್ರೀಲ್ 25 ರವರೆಗೆ ಮಳೆಯಾಗಲಿದೆ. ಇದೇ ಅವಧಿಯಲ್ಲಿ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಕೆಲವು ಮಳೆಯಾಗುವ ಸಾಧ್ಯತೆಯಿದೆ.

ನಿಮ್ಮ ಜಿಲ್ಲೆಯಲ್ಲಿ ಯಾವಾಗ ಮಳೆಯಾಗಲಿದೆ? ಇಲ್ಲೇ ಚೆಕ್ ಮಾಡಿ

ಸಾರ್ವಜನಿಕರು ತಮ್ಮ ಜಿಲ್ಲೆಯಲ್ಲಿ ಯಾವಾಗ ಮಳೆಯಾಗುತ್ತದೆ ಎಂಬುದನ್ನು ಹವಾಮಾನ ಇಲಾಖೆಯ ಈ

https://mausam.imd.gov.in/responsive/districtWiseWarning.php

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೌಸಮ್ ವೆಬ್ ಪೇಜ್ ಅಂದರೆ ಭಾರತದ ನಕ್ಷೆ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತೋ ಇಲ್ಲೋ ಎಂಬುದನ್ನು ತೋರಿಸಲಾಗಿರುತ್ತದೆ. ಅಂದರೆ ನಿಮ್ಮ ಜಿಲ್ಲೆಯ ಹತ್ತಿರದ ಮೋಡ ಆಗುತ್ತೋ ಇಲ್ಲವೋ ಎಂಬುದನ್ನು ತೋರಿಸಲಾಗಿರುತ್ತದೆ.

ಅದೇ ರೀತಿ ನೀವು ಮುಂದಿನ ಐದು ದಿನಗಳ ವರದಿಯನ್ನು ಚೆಕ್ ಮಾಡಬೇಕು. ಅಲ್ಲಿ ದಿನಾಂಕದ ಮೇಲೆ ಕ್ಲಿಕ್ ಮಾಡಿದರೆ ಸಾಕು, ಆ ದಿನಾಂಕದಂದು ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನುಚೆಕ್ ಮಾಡಬಹುದು.

https://mausam.imd.gov.in/responsive/subDivisionWiseWarning.php

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  ದೇಶದ ಯಾವ ಯಾವ ರಾಜ್ಯಗಳಲ್ಲಿ ಮಳೆಯಾಗುತ್ತದೆ. ಹಾಗೂ ರಾಜ್ಯದ ಯಾವ ಭಾಗದಲ್ಲಿ ಮಳೆಯಾಗುತ್ತದೆ ಎಂಬುದನ್ನು ಚೆಕ್ ಮಾಡಬಹುದು. ಮೋಡದ ಚಿತ್ರ ನಿಮಗೆ ಕಾಣಿಸುತ್ತದೆ. ಅಂದರೆ ಆ ಭಾಗದಲ್ಲಿ ಮಳೆಯಾಗುತ್ತದೆ ಎಂದರ್ಥ. ಇದೇ ರೀತಿ ನೀವು ಮೇಲ್ಗಡೆ ದಿನಾಂಕ ಬದಲಾಯಿಸಿ ಚೆಕ್ ಮಾಡಬಹುದು. ಮುಂದಿನ ಐದು ದಿನಗಳಲ್ಲಿ ಯಾವ ಯಾವ ಭಾಗದಲ್ಲಿ ಮಳೆಯಾಗುತ್ತದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು. ಅಂದರೆ ಮುಂದಿನ ದಿನಾಂಕದ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಜಿಲ್ಲೆಯಲ್ಲಾಗುವ ಮಳೆಯ ವರದಿಯನ್ನು ಪಡೆಯಬಹುದು.

ಬೆಂಗಳೂರಿನಲ್ಲಿ ಸುರಿದ ಮಳೆ

ಬಿಸಿಲಿನ ಝಳಕ್ಕೆ ಬೆಂದಿದ್ದ ಬೆಂಗಳೂರಿನ ಜನರಿಗೆ ಶುಕ್ರವಾರ ಮಳೆರಾಯ ತಂಪೆರದಿದ್ದಾನೆ. ಇದರಿಂದಾಗಿ ಜನರು ನಿರಾಳರಾಗಿದ್ದಾರೆ. ನಗರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಬೆಂಗಳೂರು ನಗರ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಅದೇ ರೀತಿ ಗದಗ, ಚಿತ್ರದುರ್ಗ, ಬೀದರ್ ಸೇರಿದಂತೆ ರಾಜ್ಯದ ವಿವಿದ ಭಾಗದಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಕಡೆ ಮಳೆಯಾಗುತ್ತಿದೆ. ಕೆಲವು ಕಡೆ ಸಾಧಾರಣ ಮಳೆಯಾಗಿದೆ.

ಗುರುವಾರ ಕಲಬುರಗಿಯಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Leave a comment