ಇಂದಿನಿಂದ ಭಾರಿ ಮಳೆಯಾಗುವ ಸಾಧ್ಯತೆ

Written by Ramlinganna

Updated on:

Two days heavy rain  ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡು ವ್ಯಾಪ್ತಿಯ ಅಲ್ಲಲ್ಲಿ ಶನಿವಾರ ಹಾಗೂ ಭಾನುವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಆಖೆ ಮುನ್ಸೂಚನೆ ನೀಡಿದೆ.

ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆಯು ಅಲ್ಲಲ್ಲಿ ರಭಸದಿಂದ ಸುರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈಸುಳಿಗಾಳಿ ಬೀಸುವ ಸಾಧ್ಯತೆಯಿದ್ದು, ಉಷ್ಣಾಂಶವು ಗರಿಷ್ಠ 29 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ರ ಇರಲಿದೆ ಎಂದು ತಿಳಿಸಿದೆ.

ಕಳೆದ 20 ದಿನಗಳಿಂದ ಕಣ್ಮರೆಯಾಗಿದ್ದ ಮಳೆಯಿಂದಾಗಿ ರೈತರ ಬೆಳಗಳು ಕಮರಿಹೋಗಿದ್ದವು. ನಿರಾಶೆಯಲ್ಲಿದ್ದ ರೈತರಿಗೆ ಮಳೆಯ ಮುನ್ಸೂಚನೆ ಆಸೆಗೆ ನೀರೆರೆದಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದರಿಂದ ಮಳೆಯ ನಿರೀಕ್ಷೆಯಲ್ಲಿದ್ದಾರೆ ರೈತರು.

Two days heavy rain  ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಿಲ್ಲಿ ಎಷ್ಟು ಪ್ರಮಾಣ ಮಳೆಯಾಗುತ್ತದೆ ? ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ

https://www.ksndmc.org/default.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹವಾಮಾನ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ನಿಮಗೆ ಕರ್ನಾಟಕದ ಮ್ಯಾಪ್ ಕಾಣಿಸುತ್ತದೆ. ಒಂದು ವೇಳ ನಿಮಗೆ ಕರ್ನಾಟಕದ ಮ್ಯಾಪ್ ಕಾಣಿಸದಿದ್ದರಿಂದ  ಅಲ್ಲಿ ಮೇಲ್ಗಡೆ ಕಾಣುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಡೆಸ್ಕ್ ಟಾಪ್ ಸೈಟ್ ಮೇಲೆ ಕ್ಲಿಕ್ ಮಾಡಬೇಕು. ಕರ್ನಾಟಕ ಮ್ಯಾಪ್ ನ್ನು ಝೂಮ್ ಮಾಡಬೇಕು. ಅಲ್ಲಿ ಎಡಗಡೆ ಪ್ಲಸ್ ಸಿಂಬಲ್ ಪಕ್ಕದಲ್ಲಿ Today’s weather, Forecast, Lightning and All map ಕಾಣಿಸುತ್ತದೆ. ಅಲ್ಲಿ Forecast ಮೇಲೆ ಕ್ಲಿಕ್ ಮಾಡಬೇಕು.

ಆಗ ನಮ್ಮ ಕರ್ನಾಟಕ ಮ್ಯಾಪ್ ನಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿಮಳೆಯಾಗುತ್ತದೆ ಎಂಬುದನ್ನು ಚೆಕ್ ಮಾಡಬಹುದು.  ಆಗ ನಿಮ್ಮ ಜಿಲ್ಲೆಯಲ್ಲಿ ಮಳೆಯಿದ್ದರೆ ಯಾವ ತಾಲೂಕಿನಲ್ಲಿ ಮಳೆಯಿದೆ ಅಲ್ಲಿ ಕಾಣಿಸುತ್ತದೆ. ನಿಮ್ಮ ಜಿಲ್ಲೆ ಮೇಲೆ ಕ್ಲಿಕ್ ಮಾಡಿದರೆ ಯಾವ ತಾಲೂಕಿನಲ್ಲಿ ಮಳೆಯಿದೆ ಎಂಬುದನ್ನು ಚೆಕ್ ಮಾಡಬಹುದು.

ಪೋನ್ ಕರೆ ಮಾಡಿ ಮಳೆಯ ಮಾಹಿತಿ ಪಡೆಯಿರಿ

ಒಂದು ವೇಳೆ ನಿಮಗೆ ಮೇಲಿನ ಲಿಂಕ್ ಮೂಲಕ ಹವಾಮಾನದ ವರದಿ ನೋಡಲು ಸಮಸ್ಯೆಯಾಗುತ್ತಿದ್ದರೆ ವರುಣಮಿತ್ರ ನಂಬರಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಹೌದು, ರೈತರು, ಸಾರ್ವಜನಿಕರು ತಮ್ಮ ಊರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು

ಈ  92433 45433 ನಂಬರಿಗೆ

ಕರೆ  ಮಾಡಿದರೆ ಸಾಕು, ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆ- ನಿಮ್ಮ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಿ

ಹೌದು, ನೀವು ಕರೆ ಮಾಡಿದ ನಂತರ ನಿಮ್ಮ ಜಿಲ್ಲೆ, ತಾಲೂಕು, ಕೇಳಲಾಗುವುದು. ಅಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬ ಮಾಹಿತಿಯನ್ನು ಪಡೆಯಬಹುದು.

ಹವಾಮಾನ ವರದಿ ನೀಡಲು ರೈತರಿಗಾಗಿ ಸರ್ಕಾರವು ವಿವಿಧ ಆ್ಯಪ್ ಗಳನ್ನು ಅಭಿವೃದ್ಧಿಪಿಡಿಸಿದೆ. ಹೌದು, ಐದು ದಿನ ಮೊದಲೇ ಮಳೆಯ ಮಾಹಿತಿ ನೀಡಲು ಮೇಘದೂತ್ ಉಮಂಗ್ ಹಾಗೂ ಮೌಸಮ್ ಎಂಬ ಆ್ಯಪ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಸಿಡಿಲಿನ ಕುರಿತು ಮಾಹಿತಿ ಪಡೆಯಲು ದಾಮಿನಿ ಲೈಟ್ನಿಂಗ್ ಹಾಗೂ ಸಿಡಿಲು ಎಂಬ ಆ್ಯಪ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.ಈ ಆ್ಯಪ್ ಗಳ ಸಹಾಯದಿಂದ ಐದು ನಿಮಷ ಮೊದಲು ನೀವು ಎಲ್ಲಿ ಸಿಡಿಲು ಬೀಳುತ್ತದೆ ಎಂಬುದನ್ನು ಚೆಕ್ ಮಾಡಬಹುದು.ಆ್ಯಪ್ ಇನಸ್ಟಾಲ್ ಮಾಡಿಕೊಂಡು ಸಿಡಿಲಿನ ಮಾಹಿತಿ ಪಡೆಯಬಹುದು. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಎಷ್ಟು ಕಿ.ಮೀ ಅಂತರದಲ್ಲಿ ಸಿಡಿಲು ಬೀಳುವ ಸಾಧ್ಯತೆಯಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Leave a Comment