ಜೇನು ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಗ್ರಾಮೀಣ ಪ್ರದೇಶದ ಯುವಕರಿಗೆ 10 ದಿನಗಳ ಕಾಲ ಉಚಿತವಾಗಿ ಜೇನು ಸಾಕಾಣಿಕೆ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿಯ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಈ ತರಬೇತಿ ಆಯೋಜಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮೇ 16 ರಿಂದ 25 ರವರೆಗೆ ಹತ್ತು ದಿನಗಳ ಕಾಲ ಉಚಿತವಾಗಿ ಜೇನು ಸಾಕಾಣಿಕೆ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯಎಸ್.ಬಿ.ಐ ಆರ್.ಸೆಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತರಬೇತಿ ಸಂದರ್ಭದಲ್ಲಿ ಉಚಿತವಾಗಿ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುವುದು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು. ಬಿಪಿಎಲ್, ಅಂತ್ಯೋದಯ ರೇಷನ್, ಎಮ್.ಜಿ.ಎನ್.ಆರ್.ಇ.ಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅವಶ್ಯಕ ದಾಖಲಾತಿಗಳೊಂದಿಗೆ ಮೇ 14 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳುತರಬೇತಿ ಸಂಸ್ಥೆಯಲ್ಲಿ ಮೇ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಇದನ್ನೂ ಓದಿ : ಜಮೀನಿನ ಪೋಡಿ, ಹದ್ದುಬಸ್ತು, 11 ಇ ನಕ್ಷೆ Mobileನಲ್ಲೇ ಪಡೆಯಬೇಕೇ? ಇಲ್ಲಿದೆ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9243602888, 9886781239 ಹಾಗೂ 9900135705ಗೆ ಸಂಪರ್ಕಿಸಲು ಕೋರಲಾಗಿದೆ.
ಜೇನು ಸಾಕಾಣಿಕೆ ತರಬೇತಿಯ ಉದ್ದೇಶ
ರೈತರಿಗೆ ಜೇನು ಕೃಷಿ ತರಬೇತಿ ನೀಡಿ ಹೆಚ್ಚು ಜನರು ಜೇನು ಕೃಷಿಯಲ್ಲಿ ತೊಡಗುವಂತೆ ಮಾಡುವುದು. ಜೇನು ಸಾಕಾಣಿಕೆ ಮೂಲಕ ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಪರಾಗ ಸ್ಪರ್ಶ ಕ್ರಿಯೆಯನ್ನು ಉತ್ತೇಜಿಸುವುದು, ರೈತ ಸಮುದಾಯಕ್ಕೆ ಪೂರಕ ಆದಾಯ ತರುವಂತಹ ಉಪ ಉದ್ಯೋಗವಾಗಿ ಜೇನು ಕೃಷಿಯನ್ನು ಅಭಿವೃದ್ಧಿಪಡಿಸುವುದು. ಜೇನು ಕೃಷಿಯ ಮೂಲಕ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವ ಅಗತ್ಯವಿರುವ ತಂತ್ರಜ್ಞಾನಗಳ ಅಭಿವೃದ್ಧಿ ಪ್ರಚಾರ ಮತ್ತು ಪ್ರಸರಣೆ ಮಾಡುವುದು.
ಜೇನು ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗಿಲ್ಲಿದ ಸಂಕ್ಷಿಪ್ತ ಮಾಹಿತಿ
ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನು ನೊಣಗಳು ಒಂದು ಜಾತಿಯ ಕೀಟಗಳಾಗಿವೆ. ಇವು ಮಾನವನಿಗೆ ವಿಶೇಷವಾಗಿ ರೈತರಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ಆದರೆ ಇಂದು ಭಾರತದಲ್ಲಿ ಜೇನು ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಆರೋಗ್ಯಕ್ಕೆ ಉಪಯೋಗಕಾರಿಯಾಗಿರುವ ಜೇನುತುಪ್ಪಾ ಉತ್ಪಾದಿಸುವ ಜೇನು ಸಾಕಾಣಿಕೆ ಇಂದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಉಚಿತ ತರಬೇತಿ ಆಯೋಜಿಸಲಾಗುತ್ತಿದೆ. ಪರಾಗಸ್ಪರ್ಶ ಹೊಂದಿರುವ ಜೇನು ಸ್ನೇಹಜೀವಿಯಾಗಿದೆ. ಗಿಡಬಳ್ಳಿಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ ಜೇನು ಉತ್ಪಾದಿಸುತ್ತದೆ.
ಐದು ಪ್ರ್ರಕಾರದ ಜೇನ್ನೋಣಗಳು
ನಮ್ಮ ದೇಶದಲ್ಲಿ ಐದು ಬಗೆಯ ಜೇನುಗಳಿವೆ. ನಾಲ್ಕು ದೇಶಿಯ ಜೇನುಗಳಿದ್ದರೆ ಒಂದು ವಿದೇಶಿ ಜೇನು ನೋಣವಾಗಿದೆ.
ಹೆಜ್ಜೇನು, ಮುಜಂಟಿ ಜೇನು, ಕೋಲು ಜೇನು ಹಾಗೂ ತುಡುವೆ ಜೇನು. ಯುರೋಪಿಯನ್ ವಿದೇಶಿ ಜೇನು. ಇದರಲ್ಲಿ ಭಾರತದ ತುಡುವೆ ಜೇನು ಹಾಗೂ ಯುರೋಪಿಯನ್ ಜೇನು ಕೃಷಿಯಲ್ಲಿ ಸಾಕಾಣಿಕೆ ಮಾಡುತ್ತಾರೆ.
ಜೇನು ಸಾಕಾಣಿಕೆಗೆ ಯಾವ ಸಮಯ ಸೂಕ್ತ
ಜೇನು ಸಾಕಾಣಿಕೆ ಪ್ರಾರಂಭಿಸಲು ಹೂಗಳು ಅರಳುವ ಕಾಲ ಸೂಕ್ತ. ಅಂದರೆ ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಜನು ಸಾಕಾಣಿಕೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಇತ್ತೀಚೆಗೆ ತೋಟಗಾರಿಕೆ ಮಾಡುವ ರೈತರು ಹೂವು ಅರಳು ಸಂದರ್ಭದಲ್ಲಿ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ.