ಹೈನುಗಾರಿಕೆ ಮಾಡುವ ರೈತರಿಗೆ ಸಂತಸದ ಸುದ್ದಿ. ಹೈನೋದ್ಯಮ ಮಾಡುವ ರೈತರಿಗಾಗಿ 25 ದಿನಗಳ ಕಾಲ ತರಬೇತಿ ನೀಡಲಾಗುವುದು. ಹೌದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಮತ್ತಿಕೊಪ್ಪದ ಕೆ.ಎಲ್.ಇ. ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಕೃಷಿಕರಿಗೆ 25 ದಿನಗಳ ಹೈನೋದ್ಯಮ ತರಬೇತಿ (Training for animal Husbandry to farmers ) ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಮಾರ್ಚ್‌ 4ರ ಒಳಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9535604747 ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಾ.ಬಸವಪ್ರಭು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ – ಯುವತಿಯರಿಗಾಗಿ 30 ದಿನಗಳ ಉಚಿತ ’ಟೈಲರಿಂಗ್‘ ತರಬೇತಿ ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು ಕನಿಷ್ಠ 7ನೇ ತರಗತಿಯವರೆಗೆ ವಿಧ್ಯಾಬ್ಯಾಸ ಪಡೆದಿರಬೇಕು. 18 ರಿಂದ 45 ವರ್ಷ ವಯೋಮಾನದವರಿರಬೇಕು.

ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ. ತರಬೇತಿ ಮುಖ್ಯ ಉದ್ದೇಶ ಯುವಜನರು ಸ್ವ-ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸುವುದಾಗಿರುತ್ತದೆ. ಆಸಕ್ತರು ಇತ್ತೀಚಿನ 3 ಭಾವಚಿತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಅಂಕ ಪಟ್ಟಿ ನಕಲಿಯೊಂದಿಗೆ ನೇರವಾಗಿ ಮಾರ್ಚ್.31ರೊಳಗೆ ನೋಂದಾಯಿಸಿಕೊಳ್ಳಬೇಕು. ತರಬೇತಿ ಮೇ.5ರಿಂದ ಆರಂಭವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 9482682900,  9591752123, 9686269653ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *