ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾರ್ಚ್ 26 ರಿಂದ 30ರವರೆಗೆ ಐದು ದಿನಗಳ ಕಾಲ (Weather forecast five days rain alert)ಮಳೆಯಾಗಲಿದೆ ಎಂದು ಹವಾಮಾನ ತಿಳಿಸಿದೆ.
ಕಳೆದ ನಾಲ್ಕೈದು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುತ್ತಿದ್ದರಿಂದ ಮಾವು, ದ್ರಾಕ್ಷಿ ಬೆಳೆಗಾರರನ್ನು ಆತಂಕಕ್ಕೀಡುಮಾಡಿದೆ.
ಕಲಬುರಗಿ ಜಿಲ್ಲೆ ಹುಲಸೂರ, ದೇವನಾಳ, ಮಾಚನಾಳ, ಮಿರಕಲ್ ಗ್ರಾಮಗಳಲ್ಲಿ ಸುರಿದ ಗುಡುಗು ಮಿಂಚಿನ ಅಕಾಲಿಕ ಮಳೆಯಿಂದಾಗಿ ಬೀಸಿದ ಗಾಳಿಗೆ ಮಾವಿನ ಹಣ್ಣುಗಳು ಧರೆಗುರುಳಿವೆ. ಬಿಳಿಜೋಳ ನೆಲಸಮವಾಗಿದೆ. ಟೊಮ್ಯಾಟೋ, ಹೀರೇಕಾಯಿ, ಸೌತೆಕಾಯಿ, ಗೋಧಿ, ಇತರ ತರಕಾರಿಗಳು ಹಾನಿಯಾಗಿವೆ.
ಗುರುವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ, ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯತಾಲೂಕು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿಯೂ ಚದುರಿದ ಮಳೆಯಾಗಿದೆ.
ಇದನ್ನೂ ಓದಿ: ಸಿಡಿಲು ಬೀಳುವ ಮೊದಲೇ ಮುನ್ಸೂಚನೆ ನೀಡುತ್ತದೆ ದಾಮಿನಿ ಆ್ಯಪ್: ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಕರಾವಳಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು, ರಾಮನಗರ ಹಾಗೂ ಮೈಸೂರಿನಲ್ಲಿ ಅಲ್ಲಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ ಸೇರಿದಂತೆ ಇತರ ಕೆಲವು ಜಿಲ್ಲೆಗಳಲ್ಲಿ ಸಾಧಾರಣೆ ಮಳೆಯಾಗಲಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಐದು ದಿನಗಳ ಮೊದಲೇ ಮಳೆಯ ಮುನ್ಸೂಚನೆ ಪಡೆಯುವ ಆ್ಯಪ್ ಗಾಗಿ ಇಲ್ಲಿ ಕ್ಲಿಕ್ ಮಾಡಿ