ರಾಜಧಾನಿ ಬೆಂಗಳೂರು ಸೇರಿದಂತೆ, ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ.ಹೀಗಾಗಿ, ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನದಿಂದ ಉತ್ತಮ ಮಳೆಯಾಗುತ್ತಿದೆ. ಬುಧವಾರ ಮಳೆನಾಡು ಭಾಗ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ದಕ್ಷಿಣ ಒಳನಾಡಿನ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ನಾಲ್ಕು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನ ಮುನ್ಸೂಚನೆ ನೀಡಲಾಗಿದೆ.
ಮುಂದಿನ ಐದು ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ. ಜೂನ್ 23 ರ ನಂತರ ಕರಾವಳಿಯ ಮೂರು ಜಿಲ್ಗೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
3-4 ದಿನಗಳಲ್ಲಿ ಮುಂಗಾರು ಚುರುಕು- ಹವಾಮಾನ ಇಲಾಖೆ
ಭಾರತದಲ್ಲಿ ತಡವಾಗಿ ಆಗಮಿಸಿರುವ ಮುಂಗಾರು ಪ್ರಸ್ತುತ ಬಹುತೇಕ ತಟಸ್ಥವಾಗಿದ್ದರೂ ಮುಂಬರುವ 3 ರಿಂದ 4 ದಿನಗಳಲ್ಲಿ ದೇಶಾದ್ಯಂತ ಚುರುಕುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : Panchatantra 2.0 : ನಿಮ್ಮ ಗ್ರಾಮ ಪಂಚಾಯತಿಯ ಎಲ್ಲಾ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಪ್ರಸ್ತುತ ಭಾರತದಲ್ಲಿ ಮುಂಗಾರು ಬಹುತೇಕ ತಟಸ್ಥ ರೀತಿಯಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ರೈತರಿಗೆ ಹಿನ್ನಡೆಯಾಗಿದೆ.ಆದರೆ ಇನ್ನೂ ಮೂರ್ನಾಲ್ಕು ದಿನಗಳಲ್ಲಿಮುಂಗಾರು ವೇಗವಾಗಲಿದ್ದು, ಮಧ್ಯಭಾರತ, ದಕ್ಷಿಣ ಭಾರತ, ಪಶ್ಚಿಮ ರಾಜ್ಯಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಮುಂಗಾರಿಗೆ ಈವರೆಗೆ ಬಿಪೋರ್ ಜೋಯ್ ಚಂಡಮಾರುತ ಅಡ್ಡಿ ಮಾಡಿತ್ತು.
ಬೆಂಗಳೂರಿನಲ್ಲಿ ಇನ್ನೂ ಐದು ದಿನ ಮಳೆ ಸಾಧ್ಯತೆ
ಬೆಂಗಳೂರು ನಗರದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಸುರಿದ ಮಳೆಗೆ ಪರದಾಡಿದ ಜನತೆ
ಬೆಂಗಳೂರು ನಗರದಲ್ಲಿ ಮಂಗಳವಾರ ಬೆಳಗ್ಗೆ ಮಳೆರಾಯ ಆರ್ಭಟಿಸಿದ ಪರಿಣಾಮ ನಿತ್ಯದಂತೆ ವಿವಿಧ ಕೆಲಸಗಳಿಗೆ ಹೊರಟವರಿಗೆ ವಿದ್ಯಾರ್ಥಿಗಳು ಪರದಾಡಿದರು. ಪಾದಚಾರಿಗಳು, ವಾಹನ ಸವಾರರು ಮಳೆಯಲ್ಲಿ ನೆನೆಯಬೇಕಾಯಿತು. ನಗರದಲ್ಲಿ ಮಧ್ಯಾಹ್ನ ಇಲ್ಲವೆ ಸಂಜೆ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆಯಿಂದಲೇ ಜಿಟಿ ಜಿಟಿಯಾಗಿರ ಬರುತ್ತಿತ್ತು. ಸುಮಾರು 10 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಬಹುತೇಕ ಕಡೆ ಸುರಿಯಿತು.
ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ? ವರುಣಮಿತ್ರಗೆ ಕರೆ ಮಾಡಿ ತಿಳಿದುಕೊಳ್ಳಿ
ಮುಂಗಾರು ಆರಂಭವಾಗಿದ್ದರೂ ರಾಜ್ಯದ ಬಹುತೇಕ ಕಡೆ ಇನ್ನೂ ಮಳೆಯಾಗಿಲ್ಲ. ಇದರಿಂದಾಗಿ ರೈತರು ಮುಗಿಲಿನತ್ತ ನೋಡುವಂತಾಗಿದೆ. ಕೆಲವು ಕಡೆ ಮಳೆಯಾಗುತ್ತಿದ್ದರೆ ಇನ್ನೂ ಕೆಲವು ಕಡೆ ಮಳೆಯಾಗಿಲ್ಲ. ನಿಮ್ಮೂರಿನಲ್ಲಿ ಯಾವಾಗ ಮಳೆ ಸುರಿಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ರೈತರು ಸಾರ್ವಜನಿಕರು ಎಲ್ಲಿಯೂ ಹೋಗಬೇಕಿಲ್ಲ, ಮನೆಯಲ್ಲಿಯೇ ಕುಳಿತು ವರುಣಮಿತ್ರಗೆ ಕರೆ ಮಾಡಿ ತಿಳಿದುಕೊಳ್ಳಬಹುದು.
ಹೌದು, ವರುಣಮಿತ್ರ ಸಹಾಯವಾಣಿ 92433 45433 ಗೆ ಕರೆ ಮಾಡಿ ನಿಮ್ಮೂರಿನ ಸುತ್ತಮುತ್ತ ಮುಂದಿನ ಐದು ದಿನಗಳಲ್ಲಿ ಯಾವಾಗ ಮಳೆಯಾಗುತ್ತದೆ. ಹಾಗೂ ಗಾಳಿ ಹವಾಮಾನದ ವರದಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
ಸಾರ್ವಜನಿಕರಿಗೆ ಮಳೆ, ಗುಡುಗು ಸಿಡಿಲು ಸೇರಿದಂತೆ ಹವಾಮಾನದ ವರದಿ ನೀಡಲು ಹಲವಾರು ಆ್ಯಪ್ ಗಳು ಬಂದಿವೆ. ಸರ್ಕಾರವು ಗುಡುಗು ಸಿಡಿಲಿನಿಂದ ಜನರನ್ನು ಕಾಪಾಡಲು ಸಿಡಿಲು ಹಾಗೂ ದಾಮಿನಿ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನಿಮ್ಮ ಮೊಬೈಲಿಗೆ ಇನಸ್ಟಾಲ್ ಮಾಡಿಕೊಂಡು ಸಿಡಿಲಿನ ಮಾಹಿತಿ ಪಡೆಯಬಹುದು.ಇದರೊಂದಿಗೆ ಮಳೆಯ ಮಾಹಿತಿ ನೀಡಲು ಮೌಸಮ್, ಮೇಘದೂತ್ ಎಂಬ ಆ್ಯಪ್ ಗಳು ಬಂದಿವೆ.