ಇಂದು ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ

Written by Ramlinganna

Updated on:

rain alert in bangalore ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ಒಂದೆರಡು ಕಡೆ ಸೋಮವಾರ ಭಾರಿ ಮಳೆ ( rain )ಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಹೌದು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಈ ಎರಡೂ ಜಿಲ್ಲೆಗೆ ಯೆಲ್ಲೋ ಅಲರ್ಟೋ ಘೋಷಿಸಲಾಗಿದೆ.

ಕರಾವಳಿಯ ಕೆಲವು ಸ್ಥಳಗಳು, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ

ಉತ್ತರ ಒಳನಾಡಿನ ಕೆಲವು ಸ್ಥಳಗಳು, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ ಈ ಪಟ್ಟಿಯಲ್ಲಿರುವ ರೈತರಿಗೆ ಈ ದಿನ ಪಿಎಂ ಕಿಸಾನ್ ಹಣ ಜಮೆ- ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಉತ್ತರ ಒಳನಾಡಿನ ವಿಜಯಪುರ, ಗದಗ, ರಾಯಚೂರು ಜಿಲ್ಲೆಯ ಒಂದೆರಡು ಕಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಕರಾವಳಿಯ ಉಡುಪಿ, ಉತ್ತರ ಒಳನಾಡಿನ ಜಿಲ್ಲೆಯ ಒಂದೆರಡು ಕಡೆ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

rain alert in bangalore ಬೆಂಗಳೂರಿನಲ್ಲಿ ಮಳೆ 

ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ಆರಂಭವಾದ ಜಿಟಿಜಿಟಿ ಮಳೆ ಸೋವಮವಾರ ಬೆಳಗ್ಗೆಯವರಿಗೆ ಮುಂದುವರೆದಿದೆ. ರಾಜ್ಯದ್ಯಾಂತ ಅಕ್ಟೋಬರ್ ನಲ್ಲಿ ಮಂದವಾಗಿದ್ದ ಮಳೆ ಸದ್ಯ ನಿಧಾನವಾಗಿ ಚುರುಕುಗೊಂಡಿದೆ. ಇನ್ನೂ ಬೆಂಗಳೂರಿನಲ್ಲಿ rain alert in bangalore ಒಂದು ವಾರದ ಬಳಿಕ ಸೋಮವಾರ ಮಳೆಯ ಸಿಂಚನವಾಗಿದ್ದು ನಗರದಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ.

ಭಾನುವಾರ ಸಂಜೆಯಿಂದ ಆರಂಭವಾಗದ ಮಳೆ ರಾತ್ರಿ ಪೂರ್ತಿ ಜಿಟಿ ಜಿಟಿಯಾಗಿ ಸುರಿಯಿತು. ಸೋಮವಾರ ಬೆಳಗ್ಗೆ 5 ರಿಂದ 6 ಗಂಟೆ ಸುಮಾರಿಗೆ ತುಸು ಹೆಚ್ಚಳವಾಯಿತು. ನಂತರ ಮತ್ತೆ ಜಿಟಿ ಜಿಟಿ ಮಳೆಯಾಗಿದೆ.

ಮಳೆಯ ಮಾಹಿತಿಗೆ ಈ ನಂಬರಿಗೆ ಕರೆ ಮಾಡಿ

ರಾಜ್ಯದ ಜನತೆಗೆ ಮಳೆ, ಹವಾಮಾನ ವರದಿ ನೀಡಲು ವರುಣ ಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಈ ಸಹಾಯವಾಣಿ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಹೌದು, ವರುಣಮಿತ್ರ ಸಹಾಯವಾಣಿ 92433 45433 ನಂಬರಿಗೆ ಕರೆ ಮಾಡಬಹುದು. ಇದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ನಿಮ್ಮೂರಿನಲ್ಲಿ ಮಳೆ ಯಾವಾಗ ಆಗುತ್ತದೆ? ಗಾಳಿ ಯಾವ ದಿಕ್ಕಿನಿಂದ ಬೀಸುತ್ತದೆ? ಮಳೆ, ಗಾಳಿ, ಬಿಸಿಲಿನ ಹವಾಮಾನ ವರದಿಗಳನ್ನು ಮನೆಯಲ್ಲಿಯೇ ಕುಳಿತು ಕೇವಲ ಒಂದು ಕರೆ ಮಾಡಿ ಪಡೆಯಬಹುದು.

ನಿಮ್ಮೂರಿನ ಸುತ್ತಮುತ್ತ ಮಳೆಯಾಗುತ್ತದೆ. ಮಳೆಯಾಗುವುದಿಲ್ಲ ಎಂಬುದರ ಮಾಹಿತಿ ಈಗ ರೈತರು ಕ್ಷಣ ಮಾತ್ರದಲ್ಲಿ ಪಡೆಯಬಹುದು. ಹೌದು, ರಾಜ್ಯದ ಹವಾಮಾನ ವರದಿ, ಮಳೆಯ ಮಾಹಿತಿ ಪಡೆಯಲು ಉಚಿತ ಸಹಾಯವಾಣಿ ನಂಬರ್ ಆರಂಭಿಸಲಾಗಿದೆ. ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು ಅವರಿಗೆ ಮಳೆಯ ಮಾಹಿತಿ ಸಿಗಲಿದೆ. ಇದರೊಂದಿಗೆ ಹವಾಮಾನದ ವರದಿ ಸಹ ಸಿಗಲಿದೆ. ಇದಕ್ಕಾಗಿ ಹಣ ನೀಡಬೇಕಿಲ್ಲ. ಸಂಪೂರ್ಣ ಉಚಿತವಾಗಿರಲಿದೆ.

Leave a Comment