ಇಂದು ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

Written by Ramlinganna

Updated on:

Today monsoon weather report ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ನೀಡಲಾಗಿದೆ.

ಜುಲೈ 15 ಮತ್ತು 16 ರಂದು ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆ ಸೇರಿದಂತೆ 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Today monsoon weather report ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆ

ಕೊಪ್ಪಳ ನಗರದಲ್ಲಿ ನಾಲ್ಕು ಗಂಟೆಗೂ ಅಧಿಕ ಮಳೆ ಸುರಿದಿದ್ದರಿಂದ ಎಲ್ಲೆಲ್ಲಿ ನೀರೋ ನೀರು ಎನ್ನುವಂತಾಗಿದೆ. ಚರಂಡಿಗಳು ತುಂಬಿ ರಸ್ತೆಗಳಲ್ಲಿಯೇ ನೀರು ನದಿಯಂತೆ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಕೊಪ್ಪಳ  ನಗರದ ಜವಾಹರ ರಸ್ತೆ ಸೇರಿದಂತೆ ಮೊದಲಾದ ಕಡೆಯಲ್ಲಿ ರಸ್ತೆಯಲ್ಲಿಯೇ ನೀರು ರಭಸವಾಗಿ ಹರಿಯುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು.  ಇನ್ನುಳಿದಂತೆ ಕೊಪ್ಪ ಹಾಗೂ ಕೊಪ್ಪಳ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ.

ಕುಕನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಸಾಯಂಕಾಲ ಮಳೆಯಿಂದಾಗಿ ಇಳೆ ತಂಪಾಗಿದೆ. ಮಳೆಯಿಲ್ಲದೆ ಬಾಡುತ್ತಿದ್ದ ಬೆಳೆಗೆ ಆಸರೆಯಾಗಿದೆ. ಈ ಹಿಂದೆ ಬಿತ್ತಿದ ಬೇರೆ ಬೇರೆ ಬೆಳೆಗಳು ಕಮರಿಹೋಗಿದ್ದವು. ಈಗ ಜೀವಕಳೆ ಬಂದಂತಾಗಿದೆ. ದನಕರುಗಳು ಹಸಿರು ಮೇವು ಇಲ್ಲದೆ ಸೊರಗಿ ಹೋಗಿದ್ದವು. ಗುರುವಾರ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಹುಲ್ಲು ಬೆಳೆಯುವ ಲಕ್ಷಣ ಕಾಣಿಸುತ್ತಿದೆ.

ಉತ್ತರ ಕನ್ನಡದಲ್ಲಿ ಮಳೆ ಚುರುಕು

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಭಟ್ಕಳದಲ್ಲಿ ಮನೆಯೊಂದು ಕುಸಿದು ಹಾನಿ ಉಂಟಾಗಿದೆ. ಕರಾವಳಿ ಹಾಗೂ ಘಟ್ಟದ ಮೇಲಿನ ಕೆಲವೆಡೆ ದಿನವಿಡೀ ಜಿಟಿಜಿಟಿ ಮಳೆ ಸುರಿಯುತ್ತಿದೆ. ದಟ್ಟವಾದಮೋಡ ಕವಿದ ವಾತಾವರಣ ಇದೆ. ಕಳೆದ ವಾರ ಅಬ್ಬರಿಸಿದ್ದ ಮಳೆ ಎರಡ್ಮೂರು ದಿನಗಳಿಂದ ಕ್ಷೀಣಿಸಿತ್ತು.

ಹಂಪಿ ಹೊಸಪೇಟೆಯಲ್ಲಿ ಧಾರಾಕಾರ ಮಳೆ

ಹಂಪಿ ಹೊಸಪೇಟೆ ಭಾಗದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಮಳೆಯ ನಡುವೆ ಇಪೋಲ್ ಬ್ಯಾಂಕ್ ಹೋಟೆಲ್ ನಿಂದ ಐಷರಾಮಿ ಬಸ್ ಗಳಲ್ಲಿ ಪ್ರತಿನಿಧಿಗಳು ತೆರಳಿದರು. ಈ ಪ್ರತಿನಿಧಿಗಳು ತೆರಳುವಾಗ ಹೋಟೆಲ್ ಸಿಬ್ಬಂದಿಗಲು ಛತ್ರಿಗಳನ್ನು ಹಿಡಿದರು. ಮಳೆ ನಡುವೆ ಉತ್ಸಾಹದಿಂದ ಜಿ. 20 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇದನ್ನೂ ಓದಿ ಅನ್ನಭಾಗ್ಯದ ಹಣ ಯಾರಿಗೆ ಎಷ್ಚು ಜಮೆಯಾಗಿದೆ? ಅನ್ನಭಾಗ್ಚದ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಹಂಪಿ ಹೊಸಪೇಟೆ ಸುತ್ತಮುತ್ತ ಸುರಿದ ಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ. ಈಗಾಗಲೇ ರೈತರು ಶೇ. 49 ರಷ್ಟು ಬಿತ್ತನೆ ಮಾಡಿದ್ದು, ಮಳೆ ನಿರೀಕ್ಷೆಯಲ್ಲಿದ್ದರು. ಈ ಮಳೆ ಇಡೀ ಜಿಲ್ಲಾದ್ಯಂತ ಸುರಿದರೆ, ಮಳೆಯಾಶ್ರಿತ ರೈತರಿಗೂ ಅನುಕೂಲವಾಗಿದೆ. ಇನ್ನೂ ಮುಂದೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಮಳೆ ಸುರಿಯುವ ನಿರೀಕ್ಷೆಯಿದೆ.

ಕಲಬುರಗಿಯಲ್ಲಿ ಮಳೆಯಿಲ್ಲದೆ ಕಳೆ ಕಳೆದುಕೊಂಡಿವೆ ಬೆಳೆ

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮೋಡ ಕವಿದ ವಾತಾವರಣ ಇನ್ನೇನು ಜೋರಾಗಿ ಮಳೆಯಾಗುತ್ತದೆ ಎಂದುಕೊಂಡಿರುವಾಗಲೇ ಮೋಡಗಳು ಮಾಯವಾಗುತ್ತಿವೆ.  ಕಲಬುರಗಿ ನಗರದಲ್ಲಿ ಒಂದೆಡೆ ತುಂತುರು ಮಳೆಯಾದರೆ ಇನ್ನೊಂದೆಡೆ ರಣಬಿಸಿಲು. ಹೀಗಾಗಿ ಮಳೆಯಾದರೂ ಬೆಳೆಗಳಿಗೆ ಕಳೆಯಿಲ್ಲದಂತಾಗಿದೆ. ಪ್ರತಿದಿನ ಮೋಡ ಕವಿದ ವಾತಾವರಣ. ಅಲ್ಲಲ್ಲಿ ಸಣ್ಣ ಮಳೆಯಾಗುತ್ತಿದೆ.

ಮಳೆಯ ಮಾಹಿತಿ ಮೊಬೈಲ್ ನಲ್ಲೇ ಪಡೆಯಿರಿ

ರೈತರು ಮನೆಯಲ್ಲಿಯೇ ಕುಳಿತು ತಮ್ಮೂರಿನ ಸುತ್ತಮುತ್ತ ಮಳೆಯ ಮಾಹಿತಿಯನ್ನು ಪಡೆಯಬಹುದು. ಹೌದು ಸರ್ಕಾರದ ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ನಿಮ್ಮೂರಿನಲ್ಲಿ ಮಳೆಯ ಮಾಹಿತಿ ನೀಡಲಾಗುವುದು. ವರುಣಮಿತ್ರ ಸಹಾಯವಾಣಿ 9243345433 ನಂಬರಿಗೆ ಕರೆ ಮಾಡಿ ಮಳೆಯ ಮಾಹಿತಿ ಪಡೆದುಕೊಳ್ಳಬಹುದು.

Leave a Comment