ಬೆಂಕಿರೋಗ ನಿಗ್ರಹಿಸುವ ಸಾಮರ್ಥ್ಯ, ಅಲ್ಲಾವಧಿಯಲ್ಲಿಯೇ ಕಟಾವಿಗೆ ಬರುವ ಹಾಗೂ ಅಧಿಕ ಇಳುವರಿ ನೀಡುವ ಭತ್ತದ ತಳಿಗಳನ್ನು ಸಂಶೋಧಿಸಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಿಡುಗಡೆಗೆ ಮುಂದಾಗಿದ್ದಾರೆ.
ಹೌದು, ನವೆಂಬರ್ 3 ರಿಂದ 6 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ಭತ್ತ ಸೇರಿದಂತೆ ಇತರ ತಳಿಗಳನ್ನು ಪರಿಚಯಸಲಾಗುವುದು. ಹಾಗಾದರೆ ಯಾವ್ಯಾವ ತಳಿಗಳು ಎಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕೆಎಂಪಿ – 225 ಭತ್ತದ ಹೊಸ ತಳಿ
ಈ ತಳಿಯುವ ಅಲ್ಪಾವಧಿಯಲ್ಲಿಯೇ ಕಟಾವಗೆ ಬರಲಿದೆ. ಬೇರೆ ತಳಿಗಳ ಭತ್ತದ ಬೆಳೆ ಸಾಮಾನ್ಯವಾಗಿ 160 ರಿಂದ 180 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಆದರೆ ಈ ಹೊಸ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಐಆರ್ 64 ಭತ್ತದ ಕಾಳುಗಳನ್ನು ಹೋಲುತ್ತದೆ. ಎಲೆ ಮತ್ತ್ು ಕುತ್ತಿಗೆ ಬೆಂಕಿರೋಗಕ್ಕೆ ಸಾಧಾರಣ ನಿರೋಧಕತೆ ಹೊಂದಿದೆ. ಐಆರ್-64 ತಳಿಗೆ ಪರ್ಯಾಯವಾಗಿ ಇದನ್ನು ಬೆಳೆಯಬಹುದು. ಎಕರೆಗೆ 24-26 ಕ್ವಿಂಟಾಲ್ ಇಳುವರಿ ನೀಡುತ್ತದೆ ಎಂದು ಬೆಂಗಳೂರು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಭತ್ತ ಆರ್.ಎನ್.ಆರ್ 15048
ಈ ತಳಿಯು 120-125 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಅಕ್ಕಿ ಅತ್ಯಂತ ಸಣ್ಣದಾಗಿದ್ದು, ಉತ್ಕೃಷ್ಟ ದರ್ಜೆಯಾಗಿರುತ್ತದೆ. ಎಕರೆಗೆ 22-24 ಕ್ವಿಂಟಾಲ್ ಇಳುವರಿ ನೀಡುತ್ತದೆ. ಒಣ ವಲಯದಲ್ಲಿ ಬಿತ್ತನೆಗೆ ಇದು ಹಚ್ಚು ಸೂಕ್ತವಾಗಿದೆ.
ಮುಸುಕಿನ ಜೋಳ ಎಂಎಎಚ್ 14-138
ಈ ತಳಿಯು ಎಕ ಸಂಕರಣ ತಳಿಯಾಗಿದೆ. ಎಕರೆಗೆ 34-38 ಕ್ವಿಂಟಾಲ್ ಇಳುವರಿ ಬರುತ್ತದೆ. ಕಟಾವಿನ ಹಂತದಲ್ಲೂ ಹಸಿರಾಗಿದ್ದು, ಮೇವಾಗಿ ಕೂಡ ಉಪಯೋಗಿಸಬಹುದು. ತೆನೆಗಳು ನೀಳವಾಗಿದ್ದು, ತೆಳು ಕಿತ್ತಳೆ ಹಳದಿ ಬಣ್ಣದಿಂದ ಕೂಡಿದ್ದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ.
ಇದನ್ನೂ ಓದಿ : ಕಾರ್ಮಿಕರಿಗೆ ನೀಡಲಾಗುವ ಜಾಬ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಇದು ಎಲೆ ಅಂಗಮಾರಿ, ಕೇದಿಗೆ ರೋಗನಿರೋಧಕ ಸಾಮರ್ಥ್ಯವನ್ನು ಹೊಂದಿದೆ. ಹೆಕ್ಟೇರಿಗೆ 85 ರಿಂದ 95 ಕ್ವಿಂಟಾಲ್ ಇಳುವರಿ ನೀಡಲಿದೆ.
ಕೊರಲೆ ಜಿಪಿಯುಬಿಟಿ-2
ಎಕರೆಗೆ 6-8 ಕ್ವಿಂಟಾಲ್ ಇಳುವರಿ ಹಾಗೂ ಎಕರೆಗೆ 1 ರಿಂದ1.2 ಟನ್ ಮೇವು ಇಳುವರಿ ಬರುತ್ತದೆ. 85-90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಲೆ ಅಂಗಮಾರಿ ರೋಗ ನಿರೋಧಕತೆ ಹೊಂದಿದೆ.
ಅವರೆ ಎಚ್ಎ-5
90-95 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಕರೆಗೆ ಹಸಿ ಕಾಯಿ 13-14 ಕ್ವಿಂಟಾಲ್ ಮತ್ತು ಒಣ ಬೀಜ 2.5-3 ಕ್ವಿಂಟಾಲ್ ಇಳುವರಿ ಬರುತ್ತದೆ.
ಎಳ್ಳು ಜಿಕೆವಿಕೆಎಸ್-1
80-85 ದಿನಗಳ ತಳಿಯಾಗಿದ್ದು, ಹೆಚ್ಚು ರೆಂಬೆ ಮತ್ತು ತುಂಬಿದ ಕಾಯಿಗಳು ಹೊಂದಿರುತ್ತದೆ. ಕಾಯಿಗಳು ಹೊಂದಿರುತ್ತದೆ. ಕಾಯಿ ಬಲಿಯುವಾಗಲೂ ಎಲೆ ಹಸಿರಾಗಿರುತ್ತದೆ. ಶೇ. 4-48 ಎಣ್ಣೆ ಅಂಶ ಹೊಂದಿರುತ್ತದೆ. ಎಕರೆಗೆ 1.8 ರಿಂದ 2 ಕ್ವಿಂಟಾಲ್ ಇಳುವರಿ ಹಾಗೂ 90-95 ಕೆಜಿ ಎಣ್ಣೆ ಇಳುವರಿ ನೀಡುತ್ತದೆ.
ಹುಚ್ಚೆಳ್ಳು ಕೆಬಿಎನ್ 2
80-85 ದಿನಗಳ ತಳಿಯಾಗಿದ್ದು, ಕೆಜಿಗೆ 1.9 ರಿಂದ 2 ಕ್ವಿಂಟಾಲ್ ಬೀಜಗಳ ಮತ್ತು 90-100 ಕೆಜಿ ಎಣ್ಣೆ ಇಳುವರಿ ನೀಡುತ್ತದೆ. ಶೇ. 47-48 ರಷ್ಟು ಎಣ್ಣೆ ಅಂಶ ಹೊಂದಿದ್ದು, ಅಂತರ ಬೆಳೆಗೆ ಇದು ಸೂಕ್ತವಾಗಿದೆ.
ಮೇವಿನ ಜೋಳ ಸಿಎನ್ಎಫ್ಎಸ್-1
ಎಕರೆಗೆ 22-23 ಟನ್ ಇಳುವರಿ ನೀಡುತ್ತದೆ. ಉತ್ತಮ ನಾರಿನಾಂಶ ಹೊಂದಿದ್ದು, ಸಸಾರಜನಕ (ಶೇ. 9-10) ಕೊಡುವ ತಳಿಯಾಗಿದೆ.
ರೈತರಿಗೆ ಸನ್ಮಾನ
ರಾಜ್ಯಮಟ್ಟದ ಅತ್ಯುತ್ತಮ ರೈತ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳೆಯರಿಗೆ ಸನ್ಮಾನಿಸಲಾಗುವುದು.
800 ಮಳೆಗಳು
ಈ ಬಾರಿಯ ಕೃಷಿ ಮೇಳದಲ್ಲಿ ಸುಮಾರು 800 ಮಳಿಗೆಗಳನ್ನು ಸ್ಥಾಪನೆ ಮಾಡಲಾಗುವುದು. ಮೇಳದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳ ತಯಾರಕರು ಭಾಗವಹಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವರ ರೈತರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಕರ್ನಾಟಕವಲ್ಲದೆ ನೆರೆ ರಾಜ್ಯಗಳಿಂದಲೂ ಇಲ್ಲಿ ರೈತರು ಆಗಮಿಸಲಿದ್ದಾರೆ.