ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಅನರ್ಹರಾಗಿದ್ದರೆ ಅಂತಹ ರೈತರು ಈಗ ಇಲ್ಲಿಯವರೆಗೆ ಎಷ್ಟು ಕಂತುಗಳನ್ನು ಪಡೆದಿದ್ದಾರೋ ಆ ಹಣವನ್ನು ಹಿಂದಿರಿಗಬೇಕಾಗುತ್ತದೆ.
ಹೌದು, ಪಿಎಂ ಕಿಸಾನ್ ಯೋಜನೆಯ ಲಾಭ ನಿಜವಾದ ರೈತರಿಗೆ ಸಿಗಲೆಂದು ಜಾರಿಗೆ ತಂದ ಪಿಎಂ ಕಿಸಾನ್ ಯೋಜನೆಯಡಿ ಅನರ್ಹ ರೈತರೂ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾವ ರೈತರನ್ನು ಅನರ್ಹರು ಎಂದು ಕರೆಯುತ್ತಾರೆ. ಅನರ್ಹ ರೈತರನ್ನು ಗುರುತಿಸುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನೋಂದಣಿ ಮಾಡಿಸುವಾಗ ಅರ್ಹರು ಈಗ ಅನರ್ಹರು
ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸುವಾಗ ಕೆಲವು ರೈತರು ಅರ್ಹರಾಗಿರುತ್ತಾರೆ. ಆದರೆ ನಂತರ ಕುಟುಂಬದಲ್ಲಿ ಮಕ್ಕಳಾಗಲಿ, ಅಥವಾ ರೈತನಾಗಲಿ ಸರ್ಕಾರಿ ನೌಕರಿ ಪಡೆದಿರುತ್ತಾನೆ. ಅಥವಾ ಖಾಸಗಿ ಉದ್ಯೋಗಿಯಾಗಿರುತ್ತಾನೆ. ಅಗ ತೆರಿಗೆ ಪಾವತಿಸುವಂತಹರಾಗಿರುತ್ತಾರೆ. ಈಗ ಅಂತಹ ರೈತರಿಂದ ಎಲ್ಲಾ ಹಣ ಪಾವಸ್ಸು ಪಡೆಯುವುದು ಸೂಕ್ತವಲ್ಲವೆಂದು ಕೆಲವು ರೈತರು ವಾದವಾಗಿದೆ.
ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದೆ? ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಯಾವ ಕಾರಣಕ್ಕಾಗಿ 12ನೇ ಕಂತಿನ ಹಣ ತಡೆಹಿಡಿಯಲಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://pmkisan.gov.in/BeneficiaryStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿದ ನಂತರ ಗೆಟ್ ಡಾಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಯಾವ ಕಾಣಕ್ಕಾಗಿ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಹೌದು, ಇಲ್ಲಿ ಓಪನ್ ಆಗುವ ಪೇಜ್ ನಲ್ಲಿ Eligibility ಯಲ್ಲಿ No ಹಾಗೂ Reason ಎದುರುಗುಡೆ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬುದನ್ನು ಬರೆಯಲಾಗಿರುತ್ತದೆ. ಎಲಿಜಿಬಿಲಿಟಿ ಎದುರು ಯಸ್ ಇದ್ದು Land Seedling ಎದುರುಗಡೆ ನೋ ಇದ್ದರೆ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುವುದನ್ನು ತಡೆಹಿಡಿಯಲಾಗಿದೆ ಎಂದರ್ಥ. ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬದನ್ನು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಬೇಕಾಗುತ್ತದೆ.
ಯಾವ ರೈತರು ಅನರ್ಹರು?
ಪಿಎಂ ಕಿಸಾನ್ ಯೋಜನೆಯಡಿ ಈ ಕೆಳಗಿನ ರೈತರು ಅನರ್ಹರಾಗಿರುತ್ತಾರೆ. ಕುಟುಂಬದ ಸದಸ್ಯರಾಗಲಿ ಅಥವಾ ರೈತನಾಗಲಿ ಸರ್ಕಾರಿ ನೌಕರಿಯಲ್ಲಿರಬಾರದು. ಜಿಲಲ್ಲಾ ಪಂಚಾಯತ್ ಅಧ್ಯಕರು, ಮಾಜಿ ಅಧ್ಯಕರು, ಮುನ್ಸಿಪಲ್ ಕಾರ್ಪೋರೇಶನ್ ಮಾಜಿ ಮತ್ತು ಈಗನ್ ಮೇಚರ್, ಶಾಸಕರು, ಸಂದಸರು ಈ ಯೋಜನೆಯ ಲಾಭ ಪಡೆಯುವಂತಿಲ್ಲ. ಕಳೆದ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಯ ಫಲಾನುಭವಿಗಳಾಗುವಂತಿಲ್ಲ.
ಇದನ್ನೂ ಓದಿ : ನಿಮ್ಮ ಹೆಸರಿನಲ್ಲಿರುವ ಪಹಣಿ ಎಷ್ಟು ವರ್ಷಗಳ ಹಳೆಯದ್ದು? ಮೊಬೈಲ್ ನಲ್ಲೇ ಚೆಕ್ ಮಾಡಿ
ಆದಾಯ ತೆರಿಗೆ ಪಾವತಿದಾರರು ಯೋಜನೆಯ ಹಣ ಪಡೆಯಲು ಅನರ್ಹರು ಎಂದು ಸ್ಪ ಷ್ಟವಾಗಿ ಉಲ್ಲೇಖಿಸಲಾಗಿದೆ.
ನೋಂದಣಿ ವ್ಯವಸ್ಥೆಯ ವೈಫಲ್ಯದಿಂದಾಗಿ ಅನರ್ಹರ ಖಾತೆಗೆ ಹಣ ಜಮೆ
ಪಿಎಂ ಕಿಸಾನ್ ಯೋಜನೆಯ ಜಾರಿಗೆ ತಂದಾಗ ನೋಂದಣಿ ಮಾಡುವ ಮೊದಲು ಅನರ್ಹ ರೈತರಿಗೆ ಅವಕಾಶವಿಲ್ಲದಂತೆ ಮಾಡಬೇಕಿತ್ತು.ಈ ವ್ಯವಸ್ಥೆ ಆಗಲೇ ಸರಿಪಡಿಸಿದ್ದರೆ ಅನರ್ಹ ರೈತರು ನೋಂದಣಿ ಮಾಡಿಸುತ್ತಿರಲಿಲ್ಲ. ಆದರೆ ಈಗ ಹಣ ಜಮೆಯಾದ ನಂತರ ಈ ಅನರ್ಹರೆಂದು ಜಮೆಯಾದ ಹಣ ವಾಪಸ್ ಕೇಳುವುದು ಸರಿಯಲ್ಲವೆಂದು ಅಸಮಾಧಾನವ್ಯಕ್ತಪಡಿಸಲಾಗುತ್ತಿದೆ.
ಏನಿದು ಪಿಎಂ ಕಿಸಾನ್ ಯೋಜನೆ? ಯಾವ ರೈತರಿಗಾಗಿದೆ ಪಿಎಂ ಕಿಸಾನ್ ಯೋಜನೆ?
ಬಡ ರೈತ ಕುಟುಂಬದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದಾಗಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿ ನೀಡಲಾಗುವುದು. ಈ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವುದು. ಈ ಯೋಜನೆಯಡಿ ಇಲ್ಲಿಯವರೆಗೆ 12 ಕಂತುಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.