ಈ ರೈತರಿಗೆ ಬೆಳೆ ವಿಮೆ ಹಣ ಮಂಜೂರು: ಸ್ಟೇಟಸ್ ಚೆಕ್ ಮಾಡಿ

Written by Ramlinganna

Updated on:

These farmer crop insurance granted 2021-22ನೇ ಸಾಲಿನ ಬೆಳೆವಿಮೆ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಗುಡ್ ನ್ಯೂಸ್. ಹೌದು, ಮುಂಗಾರು ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಹಣ ಮಂಜೂರಾಗಿದೆ. ಕಳೆದ ಸಾಲಿನಲ್ಲಿ ಬೆಳೆ ವಿಮೆ ಕಟ್ಟಿದ ರೈತರು ಈಗ ಬೆಳೆ ವಿಮೆ ಅರ್ಜಿಯ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಅದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹಾವೇರಿ ಜಿಲ್ಲೆಗೆ 2021-22ನೇ ಸಾಲಿನ ಬೆಳೆ ವಿಮೆ ಪರಿಹಾರ 68.02 ಕೋಟಿ ರೂಪಾಯಿ ಮಂಜೂರಾಗಿದ್ದು, ಅತೀ ಶೀಘ್ರದಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.

ಮಂಗಳವಾರ ಪ್ರಕಟಣೆ ನೀಡಿರುವ ಅವರು, ವಿವಿಧ ಬೆಳೆಗಳಿಗೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿಗೆ 23,485 ರೈತರಿಗೆ 36.81 ಕೋಟಿ ಬೆಳೆ ವಿಮೆ ಮಂಜೂರಾಗಿದ್ದು, ಹಾನಗಲ್ಲ ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ರೈತರು ಬೆಳೆವಿಮೆ ಕಂತು ತುಂಬಿದ ಹಾಗೂ ಹೆಚ್ಚು ವಿಮಾ ಪರಿಹಾರ ಮೊತ್ತ ಪಡೆಯುವ ತಾಲೂಕಾಗಿದೆ. ಬ್ಯಾಡಗಿ ತಾಲೂಕಿನ 10610 ರೈತರಿಗೆ 7.07 ಕೋಟಿ ರೂಪಾಯಿ ಮಂಜೂರಾಗಿದೆ. ಅದೇ ರೀತಿ ಹಾವೇರಿ ತಾಲೂಕಿನ 6089 ರೈತರಿಗೆ 4.44 ಕೋಟಿ, ಹಿರೇಕೇರೂರ ತಾಲೂಕಿನ 2464 ರೈತರಿಗ 2.,07 ಕೋಟಿ, ರಾಣಿಬೆನ್ನೂರ ತಾಲೂಕಿನ 5523 ರೈತರಿಗೆ 6.20 ಕೋಟಿ ರೂಪಾಯಿ ಮಂಜೂರಾಗಿದೆ. ರಟ್ಟಿಹಳ್ಳಿ ತಾಲೂಕಿನ 453 ರೈತರಿಗೆ 19 ಲಕ್ಷ, ಸವಣೂರ ತಾಲೂಕಿನ 2183 ರೈತರಿಗೆ 3.75 ಕೋಟಿ ರೂಪಾಯಿ ಮಂಜೂರಾಗಿದೆ. ಶಿಗ್ಗಾಂವಿ ತಾಲೂಕಿನ 6517 ರೈತರಿಗೆ 7,45 ಕೋಟಿ ರೂಪಾಯಿ ವಿಮಾ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಸದ್ಯ ಹಾವೇರಿ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಮಂಜೂರಾಗಿದೆ. ಅತೀ ಶೀಘ್ರದಲ್ಲಿ ಇತರ ಜಿಲ್ಲೆಯ ರೈತರಿಗೂ ಬೆಳೆ ವಿಮೆಹಣ ಮಂಜೂರಾಗಬಹುದು. ಕಳೆದ ವರ್ಷ ಇದೇ ಜೂನ್ ತಿಂಗಳಲ್ಲಿ ಇತರ ಜಿಲ್ಲೆಯ ರೈತರಿಗೂ ಬೆಳೆ ವಿಮೆ ಹಣ ಜಮೆಯಾಗಿತ್ತು. ಹಾಗಾಗಿ ಈ ತಿಂಗಳಲ್ಲಿ ಇತರ ಜಿಲ್ಲೆಯ ರೈತರಿಗೂ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆಯಿದೆ.

These farmer crop insurance granted ಬೆಳೆವಿಮೆ ಹಣ ಜಮೆಯ ಅರ್ಜಿಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ಕಳೆದ ವರ್ಷ 2021-22ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಬೆಳೆ ವಿಮೆಯ ಅರ್ಜಿಯ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಚೆಕ್ ಮಾಡಲು ರೈತರು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು 2021-22 ಆಯ್ಕೆ ಮಾಡಿಕೊಂಡು ಮುಂದೆ ಮೇಲೆ ಕ್ಲಿಕ್ ಮಾಡಬೇಕು.  ಫಾರ್ಮರ್ ಕೆಳಗಡೆ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿರೈತರು ತಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ನೀವು ಕಟ್ಟಿದ ಪ್ರಿಮಿಯಂ  ಅರ್ಜಿಯ ಸ್ಟೇಟಸ್ ಅಂದರೆ ಪ್ರಿಮಿಯಂ ಕಂಪನಿಯಿಂದ ಅಪ್ರೂವಲ್ ಆಗಿದೆಯೋ ಇಲ್ಲವೋ ಯಾವ ದಿನಾಂಕದಂದು ಅಪ್ರೂವಲ್ ಆಗಿದೆ ಈಗಿನ ಸ್ಟೇಟಸ್ ಏನಿದೆ ಎಂಬುದನ್ನು ಚೆಕ್ ಮಾಡಬಹುದು. ಅರ್ಜಿಯ ಸ್ಟೇಟಸ್ ಆಧಾರದ ಮೇಲೆ ನಿಮ್ಮ ಮೊಬೈಲಿಗೆ ಯಾವಾಗ ಬೆಳೆ ವಿಮೆ ಹಣ ಬರುತ್ತದೆ ಎಂಬುದನ್ನು ಚೆಕ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು 08026564535, 08026564536, 08026564537 ಗೆ ಸಂಪರ್ಕಿಸಬಹುದು.

Leave a Comment